Author: News Desk Benkiyabale

ಬೆಂಗಳೂರು:         ರಾಜ್ಯೋತ್ಸವ ಪ್ರಶಸ್ತಿ ಪ್ರಧಾನ ಸಮಾರಂಭದ ಮೇಲೆ ಚುನಾವಣಾ ನೀತಿ ಸಂಹಿತೆ ಕರಿನೆರಳು ಬಿದ್ದಿದ್ದು, ರಾಜ್ಯೋತ್ಸವ ಪ್ರಶಸ್ತಿ ಘೋಷಣೆಯನ್ನು ಮುಂದೂಡಲಾಗಿದೆ.       ನಾಳೆ ರಾಜ್ಯಾದ್ಯಂತ ಕನ್ನಡ ರಾಜ್ಯೋತ್ಸವ ಆಚರಿಸುತ್ತಿದ್ದು, ಈ ಹಿನ್ನೆಲೆಯಲ್ಲಿ ಇಂದು ರಾಜ್ಯೋತ್ಸವ ಪ್ರಶಸ್ತಿ ಪ್ರಕಟವಾಗಬೇಕಿತ್ತು. ಆದರೆ, ಐದು ಜಿಲ್ಲೆಗಳಲ್ಲಿ ನೀತಿ ಸಂಹಿತೆ ಜಾರಿಯಾಗಿರುವ ಹಿನ್ನೆಲೆಯಲ್ಲಿ ಪ್ರಶಸ್ತಿ ಘೋಷಣೆ ರದ್ದು ಪಡಿಸಲಾಗಿದೆ.        2018 ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಇಂದು ಪ್ರಕಟವಾಗಬೇಕಿತ್ತು. ಮಂಡ್ಯ, ರಾಮನಗರ, ಬಳ್ಳಾರಿ, ಬಾಗಲಕೋಟೆ, ಶಿವಮೊಗ್ಗ ಸೇರಿದಂತೆ ಒಟ್ಟು ಐದು ಕಡೆ ಉಪ ಚುನಾವಣೆಗಳು ನಡೆಯಲಿದೆ.ಚುನಾವಣೆ ಮುಗಿದ  ನಂತರ ನವೆಂಬರ್ 3ರ ಬಳಿಕ ಪ್ರಕಟಿಸಲಾಗುತ್ತದೆ ಎಂದು ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ತಿಳಿಸಿದ್ದಾರೆ.

Read More

 ತುಮಕೂರು:         ತುಮಕೂರಿನ ಮಾಜಿ ಮೇಯರ್ ರವಿ ಕುಮಾರ್ ಅಲಿಯಾಸ್ ಗಡ್ಡ ರವಿ ಕೊಲೆ ಪ್ರಕರಣದ ಪ್ರಮುಖ ಆರೋಪಿ ಮಧುಗಿರಿ ಮಲ್ಲೇಶ್ ಎಂಬಾತನ ಮೇಲೆ ಪೊಲೀಸರು ಫೈರಿಂಗ್ ನಡೆಸಿದ್ದಾರೆ.       ತುಮಕೂರು ತಾಲೂಕಿನ ಬೆಳಧರ ಬಳಿ ಪೈರಿಂಗ್ ನಡೆದಿದೆ. ಮಾಜಿ ಮೇಯರ್ ರವಿಕುಮಾರ್ ಹತ್ಯೆ ಪ್ರಮುಖ ಆರೋಪಿಯಾಗಿರುವ ಮಧುಗಿರಿ ಮಲ್ಲೇಶ್ ತಾಲೂಕಿನ‌ ಬೆಳಧರದಲ್ಲಿ‌ ನಸುಕಿನ ಜಾವ ಪೊಲೀಸರಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದ. ಈ ವೇಳೆ  ಡಿವೈಎಸ್ಪಿ ನಾಗರಾಜು, ಆರೋಪಿ ಕಾಲಿಗೆ ಶೂಟ್ ಮಾಡಿ ಬಂಧಿಸಿದ್ದು, ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಎರಡೂ ಕಾಲಿಗೆ ಗುಂಡೇಟು ತಗುಲಿರುವ ಮಲ್ಲೇಶ್‍‍‍‍‍ನನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.       ಕಳೆದ ತಿಂಗಳೂ ತುಮಕೂರಿನ ಹೊರವಲಯದಲ್ಲಿ ತುಮಕೂರಿನ ಮಾಜಿ ಮೇಯರ್ ರವಿ ಕುಮಾರ್ ಅಲಿಯಾಸ್ ಗಡ್ಡ ರವಿಯನ್ನು ಬೆಳಗಿನ ಜಾವ ವಾಕಿಂಗ್ ಗೆ ಹೋಗಿದ್ದಾಗ ಹಾಲಿನ ವಾಹನದಲ್ಲಿ ಬಂದಿದ್ದ ದುಷ್ಕರ್ಮಿಗಳು ಕೊಚ್ಚಿ ಕೊಲೆ ಮಾಡಿದ್ದರು.ರವಿ ಹತ್ಯೆಯ ಬಳಿಕ ಬೆಟ್ಟ-ಗುಡ್ಡಗಳಲ್ಲಿ ಅಡಗಿಕೊಂಡು ಪೊಲೀಸರಿಗೆ…

Read More

ಬೆಂಗಳೂರು:       ರಾಜ್ಯದ ಐದು ಕ್ಷೇತ್ರಗಳ ಉಪಚುನಾವಣೆಗೆ ಚುನಾವಣಾ ಆಯೋಗ ಸಿದ್ಧವಾಗಿದೆ ಎಂದು ಮುಖ್ಯ ಚುನಾವಣಾ ಆಯುಕ್ತ ಸಂಜೀವ್ ಕುಮಾರ್ ತಿಳಿಸಿದ್ದಾರೆ.       ಬೆಂಗಳೂರಿನ ಚುನಾವಣಾ ಆಯೋಗ ಕಚೇರಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, ಬಳ್ಳಾರಿ, ಮಂಡ್ಯ, ಶಿವಮೊಗ್ಗ ಲೋಕಸಭೆ ಹಾಗೂ ರಾಮನಗರ, ಜಮಖಂಡಿ ವಿಧಾನಸಭೆ ಕ್ಷೇತ್ರದ ಉಪಚುನಾವಣೆಗೆ ಎಲ್ಲಾ ಸಿದ್ಧತೆ ಪೂರ್ಣ ಗೊಂಡಿದೆ.        ರಾಜ್ಯದ ಎರಡು ವಿಧಾನಸಭೆ, ಮೂರು ಲೋಕಸಭಾ ಚುನಾವಣೆಗೆ ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿದ್ದು, 39 ಕೇಂದ್ರಪಡೆಯನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ. ನವೆಂಬರ್ 3ರಂದು ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆವರೆಗೆ ಮುಕ್ತ ಹಾಗೂ ನ್ಯಾಯಸಮ್ಮತ ಮತದಾನ ನಡೆಸಲು ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್‍ಕುಮಾರ್ ತಿಳಿಸಿದರು. 

Read More

ರಾಯ್ಪುರ:        ಅಮ್ಮ ಐ ಲವ್ ಯೂ, ಈ ದಾಳಿಯಲ್ಲಿ ನಾನು ಸಾಯಬಹುದು ಧೈರ್ಯವಾಗಿರು ಎಂದು ನಕ್ಸಲರು ದಾಳಿ ನಡೆಸುವ ವೇಳೆ ದೂರದರ್ಶನದ ಪತ್ರಕರ್ತ ಮೊರ್ ಮುಕ್ತ ಶರ್ಮಾ ತನ್ನ ಹೆತ್ತ ತಾಯಿಗೆ ರವಾನಿಸಿದ ಸಂದೇಶವಿದು.       ಛತ್ತೀಸ್‌ಗಡದ ದಂತೇವಾಡದಲ್ಲಿ ನಕ್ಸಲರು ನಡೆಸಿದ ಭಯಾನದ ದಾಳಿಯನ್ನು ಕಣ್ಣಾರೆ ನೋಡಿದ ದೂರದರ್ಶನದ ಪತ್ರಕರ್ತ ಸಾವು ಕಣ್ಣ ಮುಂದೆ ಇದ್ದರೂ ವಿಡಿಯೋ ಮಾಡಿ, ತಮ್ಮ ಅನುಭವ ಹಾಗೂ ತಾಯಿಯ ಮೇಲಿನ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ.       ನಕ್ಸಲರ ಬಳಿ ಗ್ರೆೆನೇಡ್, ಸ್ಫೋಟಕ ಸಾಮಾಗ್ರಿಗಳಿವೆ. ನಾವು ನಮ್ಮ ವಾಹಿನಿಯ ಲೋಗೋ ತೋರಿಸುವ ಪ್ರಯತ್ನ ಮಾಡಿದ್ದೆವು. ಆದರೆ, ಕ್ಷಣ ಕ್ಷಣಕ್ಕೂ ಗುಂಡಿನ ದಾಳಿ ಹೆಚ್ಚಾಗುತ್ತಲೇ ಹೋಯಿತು. ಅಷ್ಟೇ ಅಲ್ಲ. ನನಗೆ ಗುಂಡೇಟು ಬಿದ್ದಿದೆ. ನಾನು ಈ ದಾಳಿಯಲ್ಲಿ ಸಾಯಲೂ ಬಹುದು. ನನಗೆ ನನ್ನ ತಾಯಿ ಎಂದರೆ, ಬಹಳ ಇಷ್ಟ. ಅಮ್ಮ ನಾನು ನಿನ್ನನ್ನು ತುಂಬಾ ಪ್ರೀತಿಸುತ್ತೇನೆ. ದಾಳಿಯಲ್ಲಿ ನಾನು ಬದುಕದೇ…

Read More

 ತುಮಕೂರು:       ಜಿಲ್ಲೆಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದ 36 ಮಂದಿ ಸಾಧಕರನ್ನು ಪ್ರಸಕ್ತ ಸಾಲಿನ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಡಾ: ಕೆ.ರಾಕೇಶ್ ಕುಮಾರ್ ತಿಳಿಸಿದ್ದಾರೆ. ಪ್ರಶಸ್ತಿಯನ್ನು ನವೆಂಬರ್ 1ರಂದು ಸಂಜೆ 4 ಗಂಟೆಗೆ ಗಾಜಿನಮನೆಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಪ್ರದಾನ ಮಾಡಲಾಗುವುದು. ರಂಗಭೂಮಿ:-       ಕ್ಷೇತ್ರದ ಸಾಧನೆಗಾಗಿ ತುಮಕೂರಿನ ಕುಂಭಿ ನರಸಯ್ಯ, ಜಿ.ನಂಜಪ್ಪ ಹಾಗೂ ಜಿ. ಮುರಳಿಧರ (ಮೇಕಪ್), ಕೊರಟಗೆರೆಯ ಹೆಚ್. ನಾಗರಾಜಯ್ಯ ಹಾಗೂ ಎ.ಎನ್.ಚಂದ್ರಶೇಖರ್, ಗುಬ್ಬಿ ತಾಲ್ಲೂಕಿನ ರಂಗನಾಥಪ್ಪ, ತುರುವೇಕೆರೆಯ ರಂಗರಾಜು ಪತ್ರಿಕಾರಂಗ :- ಪ್ರಜಾಪ್ರಗತಿ ದಿನಪತ್ರಿಕೆಯ ಹಿರಿಯ ವರದಿಗಾರ ಆರ್.ಎಸ್.ಐಯ್ಯರ್, ವಿಶಾಲಪ್ರಭ ದಿನ ಪತ್ರಿಕೆ ಸಂಪಾದಕ ವಿ.ವೆಂಕಟೇಶ್ ಸೊಗಡು, ಮಧುಗಿರಿಯ ಬಂಡಿಚೌಡಯ್ಯ, ಚಿಕ್ಕನಾಯಕನಹಳ್ಳಿ ಕನ್ನಡಪ್ರಭ ವರದಿಗಾರ ಹೆಚ್. ಸಿದ್ಧರಾಮಯ್ಯ ಸಾಹಿತ್ಯ ಕ್ಷೇತ್ರ :- ತುಮಕೂರಿನ ನಾಗರತ್ನ ಚಂದ್ರಪ್ಪ, ಕೆ.ಡಬ್ಲ್ಯೂ. ಅಬ್ದುಲ್ ಹಫೀಝ್ (ಅಮರ್ ಹಫೀಝ್), ಡಾ. ಬೂದಾಳ್ ನಟರಾಜ್, ಡಾ. ಜಿ.ವಿ.ಆನಂದಮೂರ್ತಿ ಸಮಾಜ ಸೇವೆ…

Read More

ಕೊರಟಗೆರೆ:       ಕೌಟುಂಬಿಕ ಕಲಹದಿಂದ ಮನನೊಂದ ವ್ಯಕ್ತಿಯೊಬ್ಬ ತನ್ನ ತೋಟದ ಮನೆಯ ಮುಂದಿನ ನೀಲಗಿರಿ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಸೋಮವಾರ ರಾತ್ರಿ ನಡೆದಿದೆ.       ತಾಲೂಕಿನ ಹೊಳವನಹಳ್ಳಿ ಹೋಬಳಿ ಕ್ಯಾಮೇನಹಳ್ಳಿ ಗ್ರಾಪಂ ವ್ಯಾಪ್ತಿಯ ಸಿರಿಗೋನಹಳ್ಳಿ ತಾಂಡದ ವಾಸಿಯಾದ ಶ್ಯಾಮನಾಯ್ಕನ ಮಗನಾದ ಪರಮೇಶನಾಯ್ಕ(27) ಆತ್ಮಹತ್ಯೆಗೆ ಶರಣಾದ ದುರ್ದೈವಿ.       ಮೃತ ಪರಮೇಶ್ ತನ್ನ ಕುಟುಂಬದಲ್ಲಿ ಕಳೆದ ನಾಲ್ಕೈದು ವಾರಗಳಿಂದ ಕೌಟುಂಬಿಕ ಕಲಹ ಉಂಟಾಗಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ತನ್ನ ಮನೆಯ ಮುಂಭಾಗದ ನಿಲಗಿರಿ ಮರಕ್ಕೆ ಹಗ್ಗ ಹಾಕಿಕೊಂಡು ಆತ್ಮಹತ್ಯೆ ಹಾಕಿಕೊಂಡಿರುವ ಹಿನ್ನಲೆಯ ಸಾರ್ವಜನಿಕರು ಅನುಮಾನ ವ್ಯಕ್ತಪಡಿಸಿದ್ದಾರೆ.         ಸ್ಥಳಕ್ಕೆ ಸಿಪಿಐ ಮುನಿರಾಜು ಮತ್ತು ಪಿಎಸೈ ಮಂಜುನಾಥ ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತ ವ್ಯಕ್ತಿಯ ತಾತನ ದೂರಿನ ಮೇಲೆ ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಅನುಮಾನಸ್ಪದ ಸಾವಿನ ಪ್ರಕರಣ ದಾಖಲಾ

Read More

ನವದೆಹಲಿ:         ಉಕ್ಕಿನ ಮನುಷ್ಯರೆಂದೇ ಖ್ಯಾತರಾದ ಸರ್ದಾರ್ ವಲ್ಲಭಬಾಯ್ ಪಟೇಲ್‌ ಅವರ ಸ್ಮರಣೆಗಾಗಿ ನಿರ್ಮಿಸಲಾಗಿರುವ ‘ಏಕತಾ ಪ್ರತಿಮೆ’ ಇಂದು ಲೋಕರ್ಪಣೆಗೊಂಡಿದೆ.       ಸರ್ದಾರ್​ ಜೀ ಅವರ 143ನೇ ಜನ್ಮ ವಾರ್ಷಿಕೋತ್ಸವ ಹಿನ್ನೆಲೆಯಲ್ಲಿ ಬುಧವಾರ ಕೆವಾಡಿಯಾ ಪಟ್ಟಣಕ್ಕೆ ಆಗಮಿಸಿದ ಪ್ರಧಾನಿ ಅವರು ವೇದಿಕೆ ಹಿಂಭಾಗದಲ್ಲಿನ ಎಲ್​ಇಡಿ ಪರದೆಯ ಮೇಲೆ ಸರ್ದಾರ್​ ಜೀ ಅವರ ಏಕತಾ ಪ್ರತಿಮೆಯ ಮೇಕಿಂಗ್​ ವಿಡಿಯೋ ಬಿಡುಗಡೆ ಮಾಡುವ ಮೂಲಕ ಪ್ರತಿಮೆಯನ್ನು ಅನಾವರಣಗೊಳಿಸಿದರು.       ಗುಜರಾತಿನ ನರ್ಮದಾ ನದಿಗೆ ಕಟ್ಟಲಾಗಿರುವ ಸರ್ದಾರ್ ಸರೋವರ್ ಅಣೆಕಟ್ಟಿನ ಎದುರು ಎದ್ದು ನಿಂತಿರುವ ಈ ಭವ್ಯ ಮೂರ್ತಿ ಭಾರತದ ಏಕತೆಯ ಪ್ರತೀಕವಾಗಿದೆ.       ಪ್ರತಿಮೆ ಲೋಕಾರ್ಪಣೆ ಬಳಿಕ ಮಾತನಾಡಿದ ಪ್ರಧಾನಿ ಮೋದಿ, ಸರ್ದಾರ್ ವಲ್ಲಭಭಾಯಿ ಪಟೇಲ್ ಅಮರ್ ರಹೇ ಎಂಬ ಘೋಷಣೆ ಕೂಗಿದರು. ದೇಶದ ‘ಏಕತೆಗೆ ಜಿಂದಾಬಾದ್’ ಎಂದು ಘೋಷಣೆ ಕೂಗಿದರು. ಈ ಐತಿಹಾಸಿಕ ಕ್ಷಣಕ್ಕೆ ದೇಶದ ಜನತೆಗೆ ಮೋದಿ ಅಭಿನಂದನೆ ಸಲ್ಲಿಸಿದರು.  …

Read More

ಕ್ಯಾಲಿಫೋರ್ನಿಯಾ:       ಅಮೆರಿಕದ ಕ್ಯಾಲಿಫೋರ್ನಿಯಾದ ಯೂಸೆಮೈಟ್ ನ್ಯಾಶ್ನಲ್ ಪಾರ್ಕ್ ಎಂಬಲ್ಲಿ 800 ಅಡಿ ಎತ್ತರದಿಂದ ಬಿದ್ದು ಭಾರತೀಯ ದಂಪತಿ ಸಾವನ್ನಪ್ಪಿದ ಘಟನೆ ಅ.25 ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.       ಕ್ಯಾಲಿಫೋರ್ನಿಯಾದ ಯೋಸೆಮೈಟ್‌ ನ್ಯಾಷನಲ್‌ ಪಾರ್ಕ್‌ನಲ್ಲಿ  ಆಕ್ಟೋಬರ್‌ 25 ರಂದು ವಿಷ್ಣು ವಿಶ್ವನಾಥ್‌ (29) ಮತ್ತು ಪತ್ನಿ ಮೀನಾಕ್ಷಿ ಮೂರ್ತಿ (30) ಅವರು 800 ಅಡಿ ಆಳಕ್ಕೆ ಬಿದ್ದು  ದಾರುಣವಾಗಿ ಸಾವನ್ನಪ್ಪಿದ್ದಾರೆ.       ದಂಪತಿಗಳ ಶವ ಮೊದಲೇ ಸಿಕ್ಕಿದ್ದರೂ ಅವರನ್ನು ಗುರುತಿಸುವುದಕ್ಕೆ ಬಹಳ ಸಮಯ ಹಿಡಿದಿತ್ತು.  ಅವರ ಶವಗಳನ್ನು ಸೋಮವಾರ ಮೇಲಕ್ಕೆತ್ತಿ ಗುರುತು ಪತ್ತೆ ಹಚ್ಚಲಾಗಿದೆ ಎಂದು ತಿಳಿದು ಬಂದಿದೆ.       ಸಿಸ್ಕೊ ಸಂಸ್ಥೆಯಲ್ಲಿ ಸಿಸ್ಟಮ್​ ಇಂಜಿನಿಯರ್​ ಆಗಿ ಕೆಲಸ ಸಿಕ್ಕಮೇಲೆ ಮೃತ ದಂಪತಿ ನ್ಯೂಯಾರ್ಕ್​ನಿಂದ ಅಮೆರಿಕಕ್ಕೆ ತೆರಳಿದ್ದರು ಎನ್ನಲಾಗಿದ್ದು, ಈ ದಂಪತಿಗೆ ವಿಶ್ವ ಸುತ್ತುವ ಕನಸಿತ್ತು ಎಂಬುದನ್ನು ಅವರೇ ‘Holidays and HappilyEverAfters’ ಎಂಬ ಬ್ಲಾಗ್​ನಲ್ಲಿ ಬರೆದಿಕೊಂಡಿದ್ದಾರೆ.  …

Read More

 ಹುಳಿಯಾರು:       ಹಂದನಕೆರೆ ಹೋಬಳಿ ಡಗ್ಗೇನಹಳ್ಳಿ ಗ್ರಾಮದ ಕೃಷಿ ಜಮೀನಿನಲ್ಲಿ ಅಕ್ರಮವಾಗಿ ಬೆಳೆದಿದ್ದ 12.7 ಕೆಜಿ ಗಾಂಜಾವನ್ನು ಹಂದನಕೆರೆ ಪೊಲೀಸರು ವಶಪಡಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ.       ಮಂಜುನಾಥ್ ಬಂಧಿತ ಆರೋಪಿ. ದಗ್ಗೇನಹಳ್ಳಿ ಗ್ರಾಮದ ಸರ್ವೆ ನಂ. 28ರ ಜಮೀನಿನಲ್ಲಿ ಅಕ್ರಮವಾಗಿ ಗಾಂಜಾ ಬೆಳೆದಿದ್ದಾರೆ ಎಂದು ಹಂದನಕೆರೆ ಪೊಲೀಸ್ ಮೋಹನ್ ಹಾಗೂ ಕಿರಣ್ ಗಸ್ತು ತಿರುಗುತ್ತಿದ್ದಾಗ ಖಚಿತ ಪಡಿಸಿಕೊಂಡು ಸಿಪಿಐ ಎ.ಸುರೇಶ್ ಅವರಿಗೆ ಮಾಹಿತಿ ನೀಡಿದ ಬಳಿಕ ದಾಳಿ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ.

Read More

ಜಕಾರ್ತಾ :       ಇಂಡೋನೇಷ್ಯಾದ ಲಯನ್‌ ಏರ್‌ ಸಂಸ್ಥೆಗೆ ಸೇರಿದ ವಿಮಾನ ಪತನಗೊಂಡು ಸಮುದ್ರಕ್ಕೆ ಬಿದ್ದ ಪರಿಣಾಮ ಭಾರತದ ಪೈಲಟ್‌ ಭವ್ಯೇ ಸುನೇಜಾ ಸಹಿತ 188 ಮಂದಿ ಪ್ರಯಾಣಿಕರು ಅಸುನೀಗಿದ್ದಾರೆ.        ಲಯನ್ ಏರ್ ನ JT610 ವಿಮಾನದಲ್ಲಿದ್ದ ಯಾರೊಬ್ಬರು ಬದುಕುಳಿದಿರುವ ಸಾಧ್ಯತೆ ಇಲ್ಲ. ಅದು ಹೊಸ ಬೋಯಿಂಗ್ 737 MAX8 ವಿಮಾನವಾಗಿದ್ದು, ಪರಿಹಾರ ಕಾರ್ಯಾಚರಣೆಯಲ್ಲಿ ತೊಡಗಿರುವ ಅಧಿಕಾರಿಗಳ ಪ್ರಕಾರ, ಅಪಘಾತ ಸಂಭವಿಸಿದ ಕಡಲ ಪ್ರದೇಶದಿಂದ ಹದಿನೈದು ಕಿ.ಮೀ. ದೂರಕ್ಕೆ ಮಾನವ ಅವಶೇಷಗಳು ದೊರೆತಿವೆ.       ಸಮುದ್ರಕ್ಕೆ ವಿಮಾನ ಅಪ್ಪಳಿಸಿ ಸುಮಾರು 30-40 ಮೀಟರ್‌ ಆಳಕ್ಕೆ ಪ್ರವೇಶಿಸಿರಬಹುದು ಎಂದು ಅಂದಾಜಿಸಲಾಗಿದೆ. ವಿಮಾನದಲ್ಲಿ ಐವರು ಸಿಬಂದಿ, ಇಬ್ಬರು ಪೈಲಟ್‌ಗಳು, 178 ಮಂದಿ ಪ್ರಯಾಣಿಕರು, ಒಂದು ಮಗು, ಎರಡು ಶಿಶುಗಳು ಇದ್ದವು ಎಂದು ಇಂಡೋನೇಷ್ಯಾ ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯದ ನಿರ್ದೇಶಕ ಸಿಂಧು ರಹಾಯು ತಿಳಿಸಿದ್ದಾರೆ.   

Read More