Author: News Desk Benkiyabale

ತುಮಕೂರು: ಯುಜಿಸಿ ನಿರ್ದೇಶನದಂತೆ ಮೈಸೂರಿನ ಕರಾಮುವಿ ೨೦೨೪-೨೫ನೇ ಶೈಕ್ಷಣಿಕ ಸಾಲಿನ ಜನವರಿ ಆವೃತ್ತಿ ಪ್ರವೇಶಾತಿಗೆ ೨೦೨೫ರ ಮಾರ್ಚ್ ೩೧ ಅಂತಿಮ ದಿನಾಂಕವಾಗಿರುವುದರಿAದ, ಆಸಕ್ತರು ಕರಾಮುವಿಯಲ್ಲಿ ಪ್ರವೇಶಾತಿ ಪಡೆಯಲು ಅನುಕೂಲ ಮಾಡಿಕೊಡುವ ಸಲುವಾಗಿ ಸಾರ್ವತ್ರಿಕ ರಜಾ ದಿನಗಳಾದ ಮಾರ್ಚ್ ೩೦ರ ಚಾಂದ್ರಮಾನ ಯುಗಾದಿ (ಭಾನುವಾರ) ಮತ್ತು ಮಾರ್ಚ್ ೩೧ರ ರಂಜಾನ್ (ಸೋಮವಾರ) ದಿನಗಳಂದು ಕರಾ ಮುವಿ ತುಮಕೂರು ಪ್ರಾದೇಶಿಕ ಕೇಂದ್ರದ ಕಛೇರಿ ತೆರೆಯುವ ಮೂಲಕ ಪ್ರವೇಶಾತಿ ಮಾಡಿಕೊಳ್ಳಲಾಗುವುದು. ಕರಾಮುವಿಯ ತುಮಕೂರು ಪ್ರಾದೇಶಿಕ ಕೇಂದ್ರದಲ್ಲಿ ಯುಜಿಸಿ ಅನುಮೋದಿತ ಸ್ನಾತ ಕ/ಸ್ನಾತಕೋತ್ತರ ಕೋರ್ಸ್ ಗಳಾದ ಬಿ.ಎ/ಬಿ.ಕಾಂ/ಬಿ.ಬಿ.ಎ/ಬಿ.ಸಿ.ಎ/ಬಿ.ಎಲ್.ಐ.ಎಸ್ಸಿ ಹಾಗೂ ಬಿ.ಎಸ್ಸಿ., ಎಂ.ಎ/ಎA.ಸಿ.ಜೆ., ಎಂ.ಕಾA., ಎಂ.ಎಲ್.ಐ.ಎಸ್ಸಿ., ಎಂ.ಎಸ್ಸಿ., ಎಂ.ಬಿ.ಎ., ಪಿ.ಜಿ. ಸರ್ಟಿಫಿಕೇಟ್., ಡಿಪ್ಲೋಮಾ., ಸರ್ಟಿ ಫಿಕೇಟ್ ಪ್ರೋಗ್ರಾಮ್ ಗಳಿಗೆ ಪ್ರವೇಶಾತಿ ಮಾಡಿಕೊಳ್ಳಲಾಗುತ್ತಿದೆ. ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಲ್ಲಿ ೧೦+೨ (ಪದವಿ ಪೂರ್ವ) ಮತ್ತು ೧೦+೨+೩ (ಸ್ನಾತಕ ಪದವಿ) ವಿದ್ಯಾರ್ಹತೆ ಹೊಂದಿರುವ ಎಲ್ಲಾ ವಯೋಮಾನದ ವಿದ್ಯಾರ್ಥಿಗಳು ಮನೆಯಲ್ಲೇ ಅಥವಾ ಯಾವುದೇ ಕೆಲಸ ನಿರ್ವಹಿಸಿಕೊಂಡು ಕಾಲೇಜುಗಳಿಗೆ ಹೋಗದೆ ಕರಾಮುವಿಯ ಮೂಲಕ ಪದವಿ…

Read More

ತುಮಕೂರು: ೨೧ ನೇ ಶತಮಾನದಲ್ಲಿದ್ದರೂ ನಮ್ಮ ದೇಶವು ಇನ್ನೂ ಸಂಪೂರ್ಣವಾಗಿ ಅಭಿವೃದ್ಧಿ ಹೊಂದಿಲ್ಲ. ಏಕೆಂದರೆ ಭಾರತದ ಕೆಲವು ಭಾಗಗಳಲ್ಲಿ ಈಗಲೂ ಮಹಿಳೆಯರಿಗೆ ದೇವಾಲಯ ಪ್ರವೇಶ ನಿರಾಕರಿಸಲಾಗಿದೆ ಎಂದು ಲೇಖಕಿ ಡಾ. ಹೆಚ್. ಎಸ್. ಅನುಪಮಾ ಅಭಿಪ್ರಾಯಪಟ್ಟರು. ವಿಶ್ವವಿದ್ಯಾನಿಲಯ ಕಲಾ ಕಾಲೇಜಿನ ಸಮಾಜಕಾರ್ಯ ವಿಭಾಗ ಹಾಗೂ ಸ್ನಾತಕೋತ್ತರ ಸಮಾಜಕಾರ್ಯ ವಿಭಾಗ ಶುಕ್ರವಾರ ಹಮ್ಮಿಕೊಂಡಿದ್ದ ಅಂತಾರಾಷ್ಟಿçÃಯ ಮಹಿಳಾ ದಿನಾಚರಣೆಯಲ್ಲಿ ಮಾತನಾಡಿದರು. ಭಾರತದ ಹಲವಾರು ಭಾಗಗಳಲ್ಲಿ, ಸಾಂಪ್ರದಾಯಿಕ ನಂಬಿಕೆಗಳಿAದಾಗಿ, ವಿಶೇಷವಾಗಿ ಮುಟ್ಟಿನ ಸಮಯದಲ್ಲಿ, ಮಹಿಳೆಯರಿಗೆ ಇನ್ನೂ ದೇವಾಲಯಗಳಿಗೆ ಪ್ರವೇಶ ನಿರಾಕರಿಸಲಾಗುತ್ತಿದೆ. ಅಂತಹ ನಿರ್ಬಂಧಗಳು ಲಿಂಗ ಅಸಮಾನತೆಯ ವಿಶಾಲ ಸಮಸ್ಯೆಯನ್ನು ಪ್ರತಿಬಿಂಬಿಸುತ್ತವೆ. ಪ್ರತಿ ೨೯ ನಿಮಿಷಗಳಿಗೊಮ್ಮೆ ಮಹಿಳೆಯ ಮೇಲೆ ಅತ್ಯಾಚಾರ ನಡೆಯುತ್ತದೆ ಮತ್ತು ಪ್ರತಿ ಒಂಬತ್ತು ನಿಮಿಷಗಳಿಗೊಮ್ಮೆ ದೈಹಿಕ ಹಲ್ಲೆಗಳು ಸಂಭವಿಸುತ್ತವೆ. ಮಹಿಳೆಯರ ವಿರುದ್ಧದ ಅಪರಾಧಗಳು ಗಂಭೀರ ಕಳವಳ ಮೂಡಿಸಿವೆ ಎಂದರು. ನಾಯಕತ್ವದ ಪಾತ್ರಗಳಲ್ಲಿ ಮಹಿಳೆಯರ ಕಡಿಮೆ ಪ್ರಾತಿನಿಧ್ಯವನ್ನು ಉದ್ದೇಶಿಸಿ ಮಾತನಾಡಿದ ಅನುಪಮಾ, ಭಾರತೀಯ ಸಂಸತ್ತಿನಲ್ಲಿ ಕೇವಲ ಶೇ. ೧೩ ಸದಸ್ಯರು ಮಹಿಳೆಯರಾಗಿದ್ದರೆ, ಕರ್ನಾಟಕದ ರಾಜ್ಯ ವಿಧಾನಸಭೆಯಲ್ಲಿ…

Read More

ತುಮಕೂರು: ಸಂವಿಧಾನ ಬದಲಾವಣೆ ಮಾಡುವುದಾಗಿ ಹೇಳಿಕೆ ನೀಡಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿ ಜಿಲ್ಲಾ ಜೆಡಿಎಸ್ ಮುಖಂಡರು ಶುಕ್ರವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು. ಭಾರತ ಸಂವಿಧಾನ ಸೂರ್ಯ ಇದ್ದಂತೆ ಅದರಿಂದ ಬೆಳಕು ಪಡೆಯಬಹುದಷ್ಟೇ ಮುಟ್ಟಲು ಸಾಧ್ಯವಿಲ್ಲ ಎಂದು ಮುಖಂಡರು ಎಚ್ಚರಿಕೆ ನೀಡಿದರು. ಜಿಲ್ಲಾ ಜೆಡಿಎಸ್ ಕಚೇರಿಯಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆಯಲ್ಲಿ ಆಗಮಿಸಿದ ಮುಖಂಡರು ಡಿಸಿ ಕಚೇರಿ ಬಳಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯಪಾಲರಿಗೆ ಮನವಿಪತ್ರ ಸಲ್ಲಿಸಿದರು. ಈ ವೇಳೆ ಮಾತನಾಡಿದ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಆರ್.ಸಿ.ಆಂಜನಪ್ಪ, ಡಾ.ಬಿ.ಆರ್.ಅಂಬೇಡ್ಕರ್ ರಚಿಸಿರುವ ಸಂವಿಧಾನವನ್ನು ಬದಲಾವಣೆ ಮಾಡುವುದಾಗಿ ಉಪಮುಖ್ಯಮಂತ್ರಿ ಹೇಳಿರುವುದು ಖಂಡನೀಯ, ಕೂಡಲೇ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು. ಸಾಂವಿಧಾನಿಕ ಹುದ್ದೆಯಲ್ಲಿರುವ ಡಿ.ಕೆ.ಶಿವಕುಮಾರ್ ಇಂತಹ ಬಾಲಿಶ ಹೇಳಿಕೆ ನೀಡಿರುವುದು ಖಂಡನೀಯ ಎಂದರು. ಭಾರತ್ ಜೋಡೋ ಯಾತ್ರೆ ಮಾಡಿ ಸಂವಿಧಾನದ ಪ್ರತಿಯನ್ನು ಕೈಯಲ್ಲಿ ಹಿಡಿದುಕೊಂಡು ಪ್ರದರ್ಶನ ಮಾಡಿದ ಕಾಂಗ್ರೆಸ್ ನಾಯಕರ ಉದ್ದೇಶ ಸಂವಿಧಾನ ರಕ್ಷಣೆಗೋ ಅಥವಾ ದುರ್ಬಲಗೊಳಿಸಲೊ ಎಂದು ಹೇಳಬೇಕು. ದೇಶದ…

Read More

ತುಮಕೂರು : ಸಂವಿಧಾನ ಮೂರು ಅಂಗಗಳನ್ನು ಸೃಜನೆ ಮಾಡಿದೆ. ಸಮಾಜ ಸೃಜನೆ ಮಾಡಿದ ನಾಲ್ಕನೇ ಅಂಗ ಪತ್ರಿಕಾ ರಂಗ. ಸಂವಿಧಾನದ ಆಶಯ ತಿಳಿದುಕೊಂಡರೆ ಮಾತ್ರ ಉತ್ತಮ ಪತ್ರಕರ್ತರಾಗಲು ಸಾಧ್ಯ ಎಂದು ಜಿ.ಪಂ ಸಿಇಒ ಜಿ.ಪ್ರಭು ಅಭಿಪ್ರಾಯಪಟ್ಟರು. ನಗರದ ಎಸ್ ಎಸ್‌ಎಸ್‌ಐಟಿ ಕ್ಯಾಂಪಸ್ ಆವರಣದಲ್ಲಿ ಶ್ರೀ ಸಿದ್ಧಾರ್ಥ ಅಕಾಡೆಮಿ ಆಫ್ ಹೈಯರ್ ಎಜುಕೇಷನ್,ಶ್ರೀ ಸಿದ್ಧಾರ್ಥ ಮಾಧ್ಯಮ ಅಧ್ಯಯನ ಕೇಂದ್ರ,, ಈದಿನ ಡಾಟ್ ಕಾಮ್ ಹಾಗೂ ಶ್ರೀ ಸಿದ್ಧಾರ್ಥ ಪ್ರಥಮ ದರ್ಜೆ ಕಾಲೇಜು (ಪತ್ರಿಕೋದ್ಯಮ ವಿಭಾಗ) ಇವರ ಸಹಯೋಗದಲ್ಲಿ ಇಂದಿನಿAದ (ಗುರುವಾರ)ಆಯೋಜಿಸಿದ್ದ “ಡಿಜಿಟಲ್ ಮಾಧ್ಯಮ: ಸವಾಲು ಮತ್ತು ಸಾಧ್ಯತೆಗಳು” ಕುರಿತು ಎರಡು ದಿನಗಳ ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಪತ್ರಕರ್ತರಿಗೆ ಸಂವಿಧಾನದ ಬಗ್ಗೆ ಆಳವಾದ ಜ್ಞಾನ ಬೇಕು. ಸಕಾರಾತ್ಮಕ ಅಂಶಗಳನ್ನು ವೃತ್ತಿಯಲ್ಲಿ ಅಳವಡಿಸಿಕೊಳ್ಳಬೇಕು ಎಂದರು. ಪ್ರತಿಯೊAದು ಇಲಾಖೆಗೆ ಭೇಟಿ ನೀಡಿ ಜನರಿಗೆ ಅಗತ್ಯವಾಗಿ ಬೇಕಾದ ಮಾಹಿತಿ ನೀಡುವಲ್ಲಿ ಪತ್ರಕರ್ತರು ಮುಂದಾಗಬೇಕು. ಅಲ್ಲದೆ ಸರ್ಕಾರದ ಯೋಜನೆಗಳ ಬಗ್ಗೆ ಜನರಲ್ಲಿ ಜಾಗೃತಿ, ತಿಳಿವಳಿಕೆ ಮೂಡಿಸಬೇಕು ಎಂದು…

Read More

ತುಮಕೂರು:  ಮನುಷ್ಯ ಸೌಂದರ್ಯೋಪಾಸಕ, ಅವನು ವಾಸಿಸುವ ಮನೆ, ಉಡುವ ಬಟ್ಟೆ, ಊಟದ ತಟ್ಟೆಯೂ ಸೌಂದರ್ಯವಾಗಿರಬೇಕೆAದು ಬಯ ಸುತ್ತಾನೆ. ಆದರೆ ಇಂದು ಅಂತರ್ಮುಖಿ ಮತ್ತು ಬಹಿರ್ಮುಖಿ ಸೌಂದರ್ಯದ ನೆಲೆ ಯಾಗಿರುವ ರಂಗಭೂಮಿಯ ನಿರ್ಲಕ್ಷö್ಯ ಸುಭಿಕ್ಷ ಸಮಾಜಕ್ಕೆ ಆತಂಕಕಾರಿಯಾದುದು. ಆಳುವ ವರ್ಗಗಳ ಜಾಣ ಕಿವುಡುತನ ತೊಲಗಿ ರಂಗಭೂಮಿಗೆ ಮೊದಲ ಆದ್ಯತೆ ದಕ್ಕುವಂತಾಗಲಿ ಎಂದು ದೇಸಿ ರಂಗ ನಿರ್ದೇಶಕ ಮೆಳೇಹಳ್ಳಿ ದೇವರಾಜ್ ಅಭಿಪ್ರಾಯಪಟ್ಟರು. ಅವರು ಮೆಳೇಹಳ್ಳಿಯ ವಿ.ರಾಮಮೂರ್ತಿ ರಂಗಸ್ಥಳದಲ್ಲಿ ಗುರುವಾರ ಸಂಜೆ ಡಮರುಗ ರಂಗತAಡದಿAದ ನಡೆದ ವಿಶ್ವರಂಗಭೂಮಿ ದಿನ ಆಚರಣೆ ಕಾರ್ಯಕ್ರಮದಲ್ಲಿ ತಮ್ಮ ಪ್ರಾಸ್ತಾವಿಕ ನುಡಿಗಳಲ್ಲಿ ತಿಳಿಸಿದರು. ನಂತರ ರಂಗಸAದೇಶ ವಾಚನ, ಕೋಲಾಟ, ಜಾನಪದ ನೃತ್ಯ, `ನೀಲಾಂಬಿಕೆ’ ನಾಟಕ ಪ್ರಯೋ ಗಗೊಂಡಿತು. ನೀಲಾಂಬಿಕೆಯಾಗಿ ಲಯ, ಗಂಗಾAಬಿಕೆಯಾಗಿ ಚಿನ್ಮಯ, ಬಿಜ್ಜಳನಾಗಿ ಶಶಿಕುಮಾರ್ ಗೌಡಿಹಳ್ಳಿ, ಬಸವಣ್ಣನಾಗಿ ಪಾತ ಲಿಂಗಯ್ಯ, ಪುರೋಹಿತನಾಗಿ ನಂದಿತ ದಿನೇಶ್ ಭಟ್, ಹಡಪದ ಅಪ್ಪಣ್ಣನಾಗಿ ಅಕ್ಷಯ್ ಮನೋಜ್ಞವಾಗಿ ಅಭಿನಯಿಸಿದರು.

Read More

ತುಮಕೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ರಿ). ತುಮಕೂರು ತಾಲೂಕು ಇವರ ಆರ್ಥಿಕ ಸಹಕಾರದೊಂದಿಗೆ ಕಣಕುಪ್ಪೆ ಗ್ರಾಮ ಪಂಚಾಯಿತಿ ಹಾಗೂ ಬನ್ನಿಕುಪ್ಪೆ ಕೆರೆ ಅಭಿವೃದ್ಧಿ ಸಮಿತಿ ಇವರ ಸಹಭಾಗಿತ್ವದಲ್ಲಿ ನಮ್ಮೂರು ನಮ್ಮ ಕೆರೆ ಯೋಜನೆಯಡಿ ಪುನಶ್ಚೇತನಗೊಳಿಸಲಾದ ಬನ್ನಿ ಕುಪ್ಪೆ ಗ್ರಾಮದ ಕೆರೆಯ ನಾಮಫಲಕ ಅನಾವರಣ ಹಾಗೂ ಕೆರೆ ಹಸ್ತಾಂತರ ಕಾರ್ಯಕ್ರಮವನ್ನು ಹಮ್ಮಿ ಕೊಂಡಿದ್ದು ಈ ಕಾರ್ಯಕ್ರಮವನ್ನು ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಶಾಸಕರಾದ ಬಿ.ಸುರೇಶ್ ಗೌಡ ರವರು ನಾಮಫಲಕವನ್ನು ಅನಾ ವರಣಗೊಳಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕಾರ್ಯಕ್ರಮವನ್ನು ಧರ್ಮದರ್ಶಿಗಳಾದ ಪಾಪ ಣ್ಣ ಮತ್ತು ಶಾಸಕರಾದ ಬಿ.ಸುರೇಶ್ ಗೌಡರು ಉದ್ಘಾ ಟಿಸಿದರು ಪ್ರಾಸ್ತಾವಿಕವಾಗಿ ಮಾತನಾಡಿದ ಮಾನ್ಯ ಜಿಲ್ಲಾ ನಿರ್ದೇಶಕರಾದ ಸತೀಶ್ ಸುವರ್ಣ ರವರು ನಮ್ಮೂರು ನಮ್ಮ ಕೆರೆ ಯೋಜನೆಯ ಪ್ರಮುಖ ಉದ್ದೇಶ ಕೆರೆಯ ಅಭಿವೃದ್ಧಿ ಸಮಿತಿಯವರ ಜವಾಬ್ದಾರಿಗಳು ಹಾಗೂ ಗ್ರಾಮಾಭಿವೃದ್ಧಿ ಯೋಜನೆಯಿಂದ ಲಭ್ಯವಿರುವ ಸೇವೆಗಳು ಮತ್ತು ಸಾಮಾಜಿಕ ಕಾರ್ಯಗಳ ಕುರಿತು ಸ್ಥಳೀಯರಿಗೆ ಮಾಹಿತಿ ನೀಡಿದರು. ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಶಾಸಕರಾದ…

Read More

ತುಮಕೂರು: ತುಮಕೂರು ವಿಶ್ವವಿದ್ಯಾನಿಲಯ ಅಭಿವೃದ್ಧಿಗೆ ಆರ್ಥಿಕ ಶಕ್ತಿಯನ್ನು ನೀಡಲಾಗುವುದು ಎಂದು ಗೃಹ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಜಿ.ಪರಮೇಶ್ವರ ಅವರು ಹೇಳಿದರು. ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಹಾಗೂ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರೋತ್ಸಾಹ ಸೊಸೈಟಿ ವತಿಯಿಂದ ಬಿದರಕಟ್ಟೆಯಲ್ಲಿರುವ ತುಮಕೂರು ವಿಶ್ವವಿದ್ಯಾನಿಲಯದ ಜ್ಞಾನಸಿರಿ ಕ್ಯಾಂಪಸ್ ಆವರಣದಲ್ಲಿ ನೂತನವಾಗಿ ಸ್ಥಾಪಿಸಲಾಗಿರುವ ‘ಉಪ-ಪ್ರಾದೇಶಿಕ ವಿಜ್ಞಾನ ಕೇಂದ್ರ’ದ ಉದ್ಘಾಟನೆಯನ್ನು ನೆರವೇರಿಸಿದ ಬಳಿಕ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು. ಜಿಲ್ಲೆಗೊಂದು ವಿಶ್ವವಿದ್ಯಾಲಯ ಎಂಬ ಪರಿಕಲ್ಪನೆ ಇಟ್ಟುಕೊಂಡು ದೇಶದಲ್ಲೇ ಮೊದಲ ಬಾರಿಗೆ ತುಮಕೂರು ವಿಶ್ವದ್ಯಾಲಯ ಸ್ಥಾಪಿಸಲಾಯಿತು. ಆಧುನಿಕ ವಿಜ್ಞಾನ ವಿಶ್ವವಿದ್ಯಾಲಯವಾಗಬೇಕು ಎಂಬ ಚಿಂತನೆ ಇಟ್ಟುಕೊಂಡು ಸ್ಥಾಪಿಸಲಾಯಿತು. ರಾಜ್ಯ ಮತ್ತು ದೇಶದಲ್ಲಿ ಆಧುನಿಕ ವಿಜ್ಞಾನ ಮತ್ತು ತಂತ್ರಜ್ಞಾನಕ್ಕೆ ಸಂಬAಧಪಟ್ಟ ವಿವಿ ಆಗಬೇಕು ಎಂಬುದು ನನ್ನ ಉದ್ದೇಶವಾಗಿತ್ತು. ಆದರೆ, ಸಾಮಾನ್ಯ ವಿಶ್ವವಿದ್ಯಾಲಯವಾಗಿದೆ. ತುಮಕೂರು ವಿಶ್ವವಿದ್ಯಾನಿಲಯ ನಗರದಿಂದ ದೂರ ಆಗಿದೆ ಎಂಬುದನ್ನು ಹೊರತುಪಡಿಸಿದರೆ, ಮುಂದಿನ ದಿನಗಳಲ್ಲಿ ಉತ್ತಮ ಭವಿಷ್ಯವಿದೆ. ಇದನ್ನು ಬೆಳೆಸುವುದು ನಮ್ಮೆಲ್ಲರ ಹೊಣೆ ಎಂದು ಅವರು…

Read More

ತುಮಕೂರು: ಜಿಲ್ಲಾ ಪಂಚಾಯತ್‌ನಲ್ಲಿ ಭ್ರಷ್ಟಾಚಾರ ಸಂಪೂರ್ಣ ಹಬ್ಬಿ, ಗುತ್ತಿಗೆದಾರರು ಬೀದಿಗಿಳಿದು ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ಮಾಡುವ ಸ್ಥಿತಿ ಉಂಟಾಗಿದೆ. ಪ್ರತಿ ವರ್ಷವೂ ನಿಯಮಾನೂಸಾರ ಮಾರ್ಚ ಕೊನೆಯಲ್ಲಿ ಪೂರ್ಣಗೊಂಡ ಕಾಮಗಾರಿಗಳಿಗೆ ಸರ್ಕಾರದಿಂದ ಅನುದಾನ ಬಿಡುಗಡೆ ಮಾಡುತ್ತಿರುವುದು ಸಹಜ ಪ್ರಕ್ರಿಯೆ, ಆದರೇ ಈ ಬಾರಿ ಗುತ್ತಿಗೆದಾರರು ಬೀದಿಗಿಲಿದು ಪ್ರತಿಭಟನೆ ಮಾಡುತ್ತಿರುವುದು ಶೋಚನಿಯ ಸಂಗತಿಯಾಗಿದೆ. ಮಾರ್ಚ ಕೊನೆಯಲ್ಲಿ ಕಾವಗಾರಿಗಳನ್ನು ಕ್ರಮಬದ್ದವಾಗಿ ಪಾರದರ್ಶಕವಾಗಿ ಪೂರ್ಣಗೊಳಿಸಿರುವ ಗುತ್ತಿಗೆದಾರರಿಗೆ ಬಿಲ್ ಪಾವತಿ ಮಾಡುವ ಸಂದರ್ಭದಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಅಧಿಕಾರಿಗಳು ಪ್ರತಿ ಬಾರಿಯು ತಮ್ಮ ಮನಸ್ಸಿಗೆ ಬಂದಹಾಗೆ ಮತ್ತು ತಮಗೆ ಮನಸೊಇಚ್ಛೆಯಂತೆ ತಾರ ತಮ್ಯ ಎಸಗುತ್ತಿರುವುದು ಗುತ್ತಿಗೆ ದಾರರ ಆಕ್ರೋಶಕ್ಕೆ ಕಾರಣವಾಗಿದೆ. ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಲ್ಲಿ ಭ್ರಷ್ಟಾಚಾರ ವ್ಯಾಪಕವಾಗಿ ನಡೆಯುತ್ತಿದೆ ಎಂದು ದೂರು ಕೆಳಿಬಂದಿರುವುದು ಇದೇ ಮೊದಲೇನಲ್ಲ. ಈ ಹಿಂದೆಯೂ ಸಾಕಷ್ಟು ವ್ಯಾಪಕವಾಗಿ ದೂರುಗಳು ಕೇಳಿ ಬಂದಿದ್ದವು. ಈ ಬಗ್ಗೆ ಹಲವು ಬಾರಿ ವಿಧಾನಸಭೆಯಲ್ಲಿ, ಪತ್ರಿಕಾಗೋಷ್ಠಿಗಳಲ್ಲಿಗಳಲ್ಲಿಯೂ ಈ ತೀವ್ರ ಭ್ರಷ್ಟಾಚಾರದ ಬಗ್ಗೆ…

Read More

ಹುಳಿಯಾರು: ಮುಂಬರುವ ರಂಜಾನ್ ಹಾಗೂ ಯುಗಾದಿ ಹಬ್ಬದ ನಿಮಿತ್ತ ಪಟ್ಟಣದ ಪೋಲಿಸ್ ಠಾಣೆಯಲ್ಲಿ ಪಿಎಸೈ ಧರ್ಮಾಂಜಿ ಹಾಗೂ ಪಿಎಸ್‌ಐ ಜಗದೀಶ್ ರವರು ಸಮುದಾಯಗಳ ಹಾಗೂ ವಿವಿಧ ಸಂಘ ಸಂಸ್ಥೆಗಳ ಮುಖಂಡರುಗಳ ಸಾರ್ವಜನಿಕರ ಶಾಂತಿ ಸಭೆ ನಡೆಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಪಿಎಸೈ ಧರ್ಮಾಂಜಿ ಹಬ್ಬದ ಆಚರಣೆಗಳಲ್ಲಿ ಯಾರೊಬ್ಬರಿಗೂ ತೊಂದರೆಯಾಗದAತೆ ಜಾಗ್ರತೆ ವಹಿಸಬೇಕು, ರಂಜಾನ್ ಹಬ್ಬದ ಅಚರಣೆಗೆ ಎಲ್ಲರೂ ಸಹಕರಿಸಿ ಸೌಹಾರ್ದಯುತವಾಗಿ ನಡೆಯುವಂತೆ ನೋಡಿಕೊಳ್ಳಬೇಕು.ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಎಚ್ಚರವಹಿಸಬೇಕು. ಎಲ್ಲರೂ ಕಾನೂನು ಸುವ್ಯವಸ್ಥೆಗೆ ಧಕ್ಕೆ ಬಾರದಂತೆ, ಸಂಚಾರಕ್ಕೆ ಅಡಚಣೆ ಯಾಗದಂತೆ ನಡೆದುಕೊಳ್ಳಬೇಕು ಎಂದು ಮನವಿ ಮಾಡಿದರು. ಹುಳಿಯಾರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಹಬ್ಬದ ಸಮಯದಲ್ಲಿ ಹಿಂದೂ ಮುಸ್ಲಿಂ ಬಾಂಧವರಲ್ಲಿ ಯಾವುದೇ ಅಹಿತಕರ ಘಟನೆ ನಡೆಯದೆ ಪರಸ್ಪರ ಸೌಹಾರ್ದತೆಯಿಂದ ಆಚರಣೆ ಮಾಡುತ್ತ ಬಂದಿರುವುದು ಸಂತಸದ ವಿಷಯವಾಗಿದೆ ಎಂದರು.ಹಬ್ಬಗಳಲ್ಲಿ ಮೆರವಣಿಗೆ ಸೇರಿದಂತೆ ಇನ್ನಿತರ ಕಾರ್ಯಕ್ರಮಗಳನ್ನು ಕೈಗೊಳ್ಳುವಾಗ ಠಾಣೆಯ ಗಮನಕ್ಕೆ ತರಬೇಕು, ಎರಡು ಸಮಾಜದವರು ಶಾಂತಿಯುತವಾಗಿ ಹಬ್ಬವನ್ನು ಯಾವುದೇ ಗಲಭೆಗಳಿಗೆ ಅವಕಾಶವಾಗದಂತೆ ಆಚರಿಸಿಬೇಕು ಎಂದು…

Read More

ಹುಳಿಯಾರು: ಚಿಕ್ಕನಾಯಕನಹಳ್ಳಿ ತಾಲ್ಲೂಕಿನಲ್ಲಿ ತೆಂಗು ಬೆಳೆಯಲ್ಲಿ ಭಾದಿಸುತ್ತಿರುವ ಅತಿಕ್ರಮಣಕಾರಿ ಬಿಳನೊಣಗಳ ನಿಯಂತ್ರಣಕ್ಕೆ ಶಾಸಕರಾದಂತಹ ಸಿ.ಬಿ.ಸುರೇಶ್ ಬಾಬು ರವರು ಹಾಗೂ ತೋಟಗಾರಿಕೆ, ಕೃಷಿ ಇಲಾಖೆಗಳ ಜೊತೆಗೂಡಿ ರೈತರಿಗೆ ಆಸರೆಯಾಗುವಂತಹ ಕ್ರಮ ಕೈಗೊಳ್ಳಲಾಯಿತು. ಕಳೆದೆರಡು ವರ್ಷಗಳಿಂದ ರೈತರನ್ನು ನಿದ್ದೆಗೆಡಿಸಿರುವ ತಾಳೆ ಮುತ್ತಿಕೊಳ್ಳುವ ಬಿಳಿನೊಣಗಳು ತೆಂಗಿನ ತೋಟಗಳನ್ನು ಆಕ್ರಮಣ ಮಾಡಿವೆ. ಇವು ರೂಗೂಸ್ ಜಾತೆಗೆ ಸೇರಿದ್ದು, ಸುರುಳಿ ಬಿಳಿನೊಣಗಳನ್ನೆಲಾಗಿದೆ. ಇವು ಹೆಚ್ಚು ಪ್ರಬಲ, ಅಕ್ರಮಣಕಾರಿ, ಹೊಟ್ಟೆಬಾಕತನ ರಸ ಹೀರುವ ಕೀಟವಾಗಿದೆ. ಮರಿಗಳು ಹಾಗೂ ಪ್ರೌಢ ಕೀಟಗಳು ಸತತವಾಗಿ ಗರಿಗಳ ಕೆಳಭಾಗದಲ್ಲಿ ಕುಳಿತು ರಸ ಹೀರುವಿಕೆಯಿಂದ ಗಿಡಗಳ ಗರಿಗಳು ಹಳದಿಯಾಗಿ ಒಣಗಿ ನಾಶವಾಗುತ್ತದೆ. ಮರಿ ಹಂತಗಳು ಸಿಹಿಯಾದ ಜೇನಿನ ತರಹದ ದ್ರಾವಣವನ್ನು ವಿಸರ್ಜನೆ ಮಾಡುವುದರಿಂದ ಎಲೆಯ ಮೇಲ್ಬಾಗದ ಮೇಲೆ ಕಪ್ಪು ಬಣ್ಣದ ಶಿಲೀಂದ್ರ ಬೆಳೆದು ಎಲೆಗಳು ಕಪ್ಪು ಬಣ್ಣಕ್ಕೆ ತಿರುಗುವುದರಿಂದ ಎಲೆಗಳಲ್ಲಿ ದ್ಯುತಿ ಸಂಶ್ಲೇಷಣೆ ಕ್ರಿಯೆ ಕಡಿಮೆಯಾಗುತ್ತದೆ ಮತ್ತು ಅದರ ಪರಿಣಾಮ ತೆಂಗಿನ ಇಳುವರಿ ಮೇಲೆ ಉಂಟಾಗುತ್ತದೆ. ವಿಶಿಷ್ಟ ಕೇಂದ್ರೀಕೃತ ಮೇಣದ ಸುರುಳಿಯಾಕಾರದ ಲಕ್ಷಣಗಳನ್ನು ಎಲೆಗಳ ಮೇಲೆ…

Read More