ಹಿರಿಯೂರು:

     ಚಿತ್ರದುರ್ಗ ಮತ್ತು ತುಮಕೂರಿನ ವಿವಿಧ ಕಡೆಗಳಲ್ಲಿ ಮನೆಗಳ್ಳತನ ಮಾಡಿ ಲಕ್ಷಾಂತರ ರೂ. ಬೆಲೆಬಾಳುವ ಚಿನ್ನಾಭರಣಗಳನ್ನು ದರೋಡೆ ಮಾಡುತ್ತಿದ್ದ ವ್ಯಕ್ತಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

     ಚಿತ್ರದುರ್ಗ ಪೊಲೀಸ್ ಅಧೀಕ್ಷರಾದ ಶ್ರೀಮತಿ ಜಿ.ರಾಧಿಕ, ಪಿಎಸ್‍ಐ ಹಾಗೂ ಹೆಚ್ಚುವರಿ ಪೊಲೀಸ್ ಉಪಾಧೀಕ್ಷಕರಾದ ಮಹಾನಿಂಗ ಬಿ.ನಂದಗಾಂವಿರವರ ಮಾರ್ಗದರ್ಶನಲ್ಲಿದ್ದ ಹಿರಿಯೂರು ಪೊಲೀಸ್ ಉಪಾಧೀಕ್ಷಕರಾದ ಎಸ್.ರೋಷನ್ ಜಮೀರ್, ಹಿರಿಯೂರು ಪೊಲೀಸ್ ನಿರೀಕ್ಷಕರಾದ ಆರ್.ಕೆ.ರಾಘವೇಂದ್ರ, ಹಿರಿಯೂರು ಪೊಲೀಸ್ ಠಾಣೆಯ ಪಿಎಸ್‍ಐ ಡಿ.ಜಿ.ಪರಮೇಶ್ ಮತ್ತು ಸಿಬ್ಬಂದಿಗಳಾದ ಕಮಲಾಕರ, ಆನಂದಮೂರ್ತಿ, ಧನಂಜಯಮೂರ್ತಿ, ಮಂಜುನಾಥ, ವೆಂಕಟೇಶ್, ತಿಮ್ಮೇಶ್ ಹಾಗೂ ನಳಿನಾರವರ ತಂಡವು ಈ ಖದೀಮರ ಎಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ

ಸದರಿ ಬಂಧಿತ ಆರೋಪಿಗಳು ಚಿತ್ರದುರ್ಗ ಹಾಗೂ ತುಮಕೂರಿಗೆ ಸಂಬಂಧಿಸಿದಂತೆ 9 ಮನೆಗಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದರು ಎನ್ನಲಾಗಿದೆ. ಆರೋಪಿಗಳಾದ ಧನಂಜಯ@ಧನು ತಂದೆ ರಾಮಕೃಷ್ಣಪ್ಪ (44), ಕಾರ್ ಡ್ರೈವಿಂಗ್ ಕೆಲಸ ಮಾಡುತ್ತಿದ್ದ. ಈತ ಮೂಲತಃ ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಎನ್.ಜಿ.ಓ ಕಾಲೋನಿಯ ನಿವಾಸಿ. ಮತ್ತೊಬ್ಬ ಮೋಹನ್ ತಂದೆ ನಾರಾಯಣಸ್ವಾಮಿ (39), ಚಿಕ್ಕಬಳ್ಳಾಪುರ ಜಿಲ್ಲೆಯ ಆರೂರು ಗ್ರಾಮದ ಮಂಡಿಕಲ್ ಹೋಬಳಿಯ ನಿವಾಸಿಯಾಗಿದ್ದು ಕಟಿಂಗ್ ಶಾಪ್‍ನಲ್ಲಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ.

      ಚಿತ್ರದುರ್ಗ ಜಿಲ್ಲೆಗೆ ಸಂಬಂಧಿಸಿದಂತೆ 7 ಮನೆಗಳ್ಳತನ ಪ್ರಕರಣ (ಹಿರಿಯೂರು ಗ್ರಾಮಾಂತರ-02, ಅಬ್ಬಿನಹೊಳೆ-01, ಐಮಂಗಳ -02, ಭರಮಸಾಗರ -01) ಮತ್ತು ತುಮಕೂರು ಜಿಲ್ಲೆ 2 (ಕಳ್ಳಂಬೆಳ್ಳ ಠಾಣೆಯ-01) ಒಟ್ಟು 9 ಮನೆಗಳ್ಳತನ ಪ್ರಕರಣಗಳಲ್ಲಿ ಕಳುವಾಗಿದ್ದ ಒಟ್ಟು 75,000 ರೂ ಮೌಲ್ಯದ ಒಟ್ಟು 372 ಗ್ರಾಂ ತೂಕದ ಬಂಗಾರದ ಆಭರಣ ಮತ್ತು 210 ಗ್ರಾಂ ತೂಕದ ಬೆಳ್ಳಿಯ ಆಭರಣಗಳನ್ನು ಬಂಧಿತ ಆರೋಪಿಗಳಿಂದ ವಶಪಡಿಸಿಕೊಳ್ಳಲಾಗಿದೆ.

     9 ಕಳವು ಪ್ರಕರಣಗಳನ್ನು ಬೇಧಿಸಿ, ಖತರ್‍ನಾಕ್ ಆರೋಪಿಗಳನ್ನು ಬಂಧಿಸಿ ಮನೆಗಳ್ಳರಿಂದ ಲಕ್ಷಾಂತರ ರೂ. ಮೊತ್ತದ ಚಿನ್ನಾಭರಣವನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾದ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಕಾರ್ಯವನ್ನು ಮಾನ್ಯ ಚಿತ್ರದುರ್ಗ ಪೊಲೀಸ್ ಅಧೀಕ್ಷಕರು ಶ್ವಾಘಿಸಿದ್ದಾರೆ.

(Visited 33 times, 1 visits today)