ತುಮಕೂರು:

     ತುಮಕೂರು ನಗರಕ್ಕೆ ಸುಮಾರು 2500 ಮನೆಗಳನ್ನು ವಸತಿ ಇಲಾಖೆಯಿಂದ ನೀಡಿದ್ದು,ಈಗ ನೇಮಕವಾಗಿರುವ ಆಶ್ರಯ ಸಮಿತಿಯ ಸದಸ್ಯರು ಅದಷ್ಟು ಶೀಘ್ರವಾಗಿ ಫಲಾನುಭವಿಗಳನ್ನು ಗುರುತಿಸಿ,ಜಾಗ ಗೊತ್ತು ಮಾಡಿ,ಸಮಿತಿಗೆ ಪಟ್ಟಿ ನೀಡುವಂತೆ ಶಾಸಕ ಜಿ.ಬಿ.ಜೋತಿಗಣೇಶ್ ತಿಳಿಸಿದ್ದಾರೆ.

       ನಗರದಲ್ಲಿ ಹಿಂದುಳಿದ ವರ್ಗಗಳ ಒಕ್ಕೂಟದವತಿಯಿಂದ ತುಮಕೂರು ವಿಧಾನಸಭಾ ಕ್ಷೇತ್ರದ ಆಶ್ರಯ ಸಮಿತಿಗೆ ನೇಮಕವಾಗಿ ಸದಸ್ಯರುಗಳಿಗೆ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡುತಿದ್ದ ಅವರು, ನಗರದಲ್ಲಿ ಸುಮಾರು 22 ಸಾವಿರ ಜನರು ಮನೆಗಳಿಗಾಗಿ ಅರ್ಜಿ ಸಲ್ಲಿಸಿದ್ದು, ಇವರಲ್ಲಿ ಅರ್ಧದಷ್ಟು ಪುನಾರಾವರ್ತನೆಯಾಗಿರುವ ಸಾಧ್ಯತೆ ಇದೆ. ಹಾಗಾಗಿ ಮೊದಲು ಪಟ್ಟಿಯನ್ನು ಪರೀಷಕ್ಕರಿಸಿ, ಆರ್ಹರಿಗೆ ಮನೆಗಳು ತಲುಪುವಂತೆ ಮಾಡಬೇಕು. ಈ ನಿಟ್ಟಿನಲ್ಲಿ ಸಮಿತಿಯ ಸದಸ್ಯರು ಜಾತ್ಯಾತೀತ, ಧರ್ಮಾತೀತರಾಗಿ ನಡೆದುಕೊಳ್ಳುವಂತೆ ಸಲಹೆ ನೀಡಿದರು.

      ವಸತಿ ಇಲಾಖೆಯಿಂದ ರಾಜೀವ್‍ಗಾಂಧಿ ಹೌಸಿಂಗ್ ಸ್ಕಿಂ ಅಡಿಯಲ್ಲಿ ಮಂಜೂರಾಗಿರುವ 2500 ಮನೆಗಳ ಜೊತೆಗೆ, ಘೋಷಿತ ಕೊಳಗೇರಿಗಳಲ್ಲಿ ಈಗಾಗಲೇ ಕಚ್ಚಾ ಮನೆ ನಿರ್ಮಿಸಿಕೊಂಡು ವಾಸವಿರುವ ಜನರಿಗೆ ಅಲ್ಲಿಯೇ ಸುಮಾರು 1450 ಪಕ್ಕಾ ಮನೆಗಳನ್ನು ನಿರ್ಮಿಸಿಕೊಡಲು ಸರಕಾರ ಮುಂದಾಗಿದೆ.

      ಸಾಧ್ಯವಾಗದಷ್ಟು ನಗರದ ವಸಂತನರಾಸಪುರ ಮತ್ತು ತುಮಕೂರು ನಡುವೆ ಜಾಗ ಗುರುತಿಸಿ, ಬಡವರಿಗೆ ಮನೆ ನಿರ್ಮಿಸಿಕೊಟ್ಟರೆ, ಭವಿಷ್ಯದಲ್ಲಿ ದುಡಿಯುವ ಜನರಿಗೆ ಹತ್ತಿರದಲ್ಲಿಯೇ ಉದ್ಯೋಗ ದೊರೆಯಲಿದೆ ಎಂಬುದು ನಮ್ಮ ಆಲೋಚನೆ, ಈ ನಿಟ್ಟಿನಲ್ಲಿ ಜಾಗ ಗುರುತಿಸುವ ಕಾರ್ಯ ಬರದಿಂದ ಸಾಗಿದೆ ಎಂದು ಶಾಸಕರಾದ ಜೋತಿಗಣೇಶ್ ತಿಳಿಸಿದರು.

      ತುಮಕೂರು ನಗರದ ಅಭಿವೃದ್ದಿಗೆ ಸರಕಾರದಿಂದ ಬಿಡುಗಡೆಯಾಗಿದ್ದ ಸುಮಾರು 35 ಕೋಟಿ ರೂಗಳಲ್ಲಿ ಪ್ರಮುಖ ರಸ್ತೆಗೆಳ ಡಾಂಬರೀಕರಣ,ಉನ್ನತದರ್ಜೆಗೆರಿಸುವ ಕೆಲಸ ನಡೆಯತ್ತಿದೆ.ಅಲ್ಲದೆ ಅಮಾನಿಕೆರೆ, ಗಂಗಸಂದ ಕೆರೆ ಮತ್ತು ಮರಳೂರು ಕೆರೆಗಳಿಗೆ ಹೇಮಾವತಿ ನೀರು ತುಂಬಿಸಿ,ಬೇಸಿಗೆಯಲ್ಲಿ ಕುಡಿಯುವ ನೀರಿಗೆ ಬಳಸಿಕೊಳ್ಳಲು ಕ್ರಮ ಕೈಗೊಳ್ಳಲಾಗಿದೆ. ಈಗಾಗಲೇ ಶೇ 80ರಷ್ಟು ಅಮಾನಿಕೆರೆ ತುಂಬಿದೆ. ಮುಂದಿನ ದಿನಗಳಲ್ಲಿ ಉಳಿದ ಕೆರೆಗಳನ್ನು ತುಂಬಿಸಲಿದ್ದೇವೆ.ಇದರಿಂದ ತುಮಕೂರು ನಗರದ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ದೊರಕಿದಂತಾಗಲಿದೆ ಎಂದರು.

     ಬಡವರ ಬಗ್ಗೆ ಕಾಳಜಿ ಇಟ್ಟುಕೊಂಡು ನಗರದ ಕೆ.ಇ.ಬಿ ರಸ್ತೆಯ ಇಕ್ಕೆಲ ಮತ್ತು ಬಿ.ಜಿ.ಎಸ್ ಸರ್ಕಲ್‍ನಲ್ಲಿ ಪುಡ್ ಸ್ಟ್ರೀಟ್ ವೆಂಡರ್ ಜ್ಹೋನ್ ನಿರ್ಮಾಣ ಮಾಡಲು ಕ್ರಮ ವಹಿಸಲಾಗಿದೆ.ಬಸ್ ನಿಲ್ದಾಣ ನಿರ್ಮಾಣ ಕಾರ್ಯವೂ ಪ್ರಗತಿಯಲ್ಲಿದೆ. ಮುಂದಿನ ಏಳೆಂಟು ತಿಂಗಳಲ್ಲಿ ನಗರದ ಎಲ್ಲಾ ರಸ್ತೆಗಳ ಅಭಿವೃದ್ದಿ ಪೂರ್ಣಗೊಳ್ಳಲಿದೆ ಎಂಬ ವಿಶ್ವಾಸವನ್ನು ಶಾಸಕ ಜಿ.ಬಿ.ಜೋತಿಗಣೇಶ್ ವ್ಯಕ್ತಪಡಿಸಿದರು.

      ಜಿಲ್ಲಾ ಹಿಂದುಳಿದ ವರ್ಗಗಳ ಒಕ್ಕೂಟದ ಅಧ್ಯಕ್ಷರಾದ ಧನಿಯಕುಮಾರ್ ಮಾತನಾಡಿ,ನೂರಾರು ಜಾತಿ, ಉಪ ಜಾತಿಗಳನ್ನು ಹೊಂದಿರುವ ಭಾರತದಂತಹ ರಾಷ್ಟ್ರಗಳಲ್ಲಿ ಅಧಿಕಾರ ಹಂಚಿಕೆ ನಿಜಕ್ಕೂ ತ್ರಾಸದಾಯಕ.ಆದರೂ ಶಾಸಕರು ಆಶ್ರಯ ಸಮಿತಿಗೆ ಕೆಲವರನ್ನು ನೇಮಕ ಮಾಡಿ,ಜನರ ಸೇವೆ ಮಾಡಲು ಅವಕಾಶ ಮಾಡಿಕೊಟ್ಟಿದ್ದಾರೆ.ಸಿಕ್ಕ ಅವಕಾಶವನ್ನು ಬಳಸಿಕೊಂಡು ಉತ್ತಮವಾಗಿ ಕೆಲಸ ಮಾಡಿ ಶಾಸಕರಿಗೆ ಒಳ್ಳೆಯ ಹೆಸರು ತರುವಂತೆ ಸಲಹೆ ನೀಡಿದರಲ್ಲದೆ, ಮುಂದಿನ ದಿನಗಳಲ್ಲಿ ಪಕ್ಷಕ್ಕಾಗಿ ದುಡಿದ ಎಲ್ಲರಿಗೂ ಅಧಿಕಾರದ ಹಂತ ಹಂತವಾಗಿ ದೊರೆಯಲಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು. ಹಿರಿಯರಾದ ಕೊಪ್ಪಲ್‍ನಾಗರಾಜು, ನಯಾಜ್‍ಅಹಮದ್, ಮಲ್ಲಸಂದ್ರ ಶಿವಣ್ಣ, ಕಾರ್ಪೋರೇಟರ್ ಮಲ್ಲಿಕಾರ್ಜುನಯ್ಯ ಮಾತನಾಡಿ ದರು.ಪಾಲಿಕೆಯ ಕೌನ್ಸಿಲರ್ ಶ್ರೀಮತಿ ಗಿರಿಜಾ ಧನಿಯಕುಮಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

      ಇದೇ ವೇಳೆ ತುಮಕೂರು ನಗರ ವಿಧಾನಸಭಾ ಕ್ಷೇತ್ರದ ಆಶ್ರಯ ಕಮಿಟಿಗೆ ನೇಮವಾಗಿರುವ ಗಿರೀಶ್, ಸಿದ್ದಗಂಗಯ್ಯ, ವಿನಯ್‍ಜೈನ್ ಮತ್ತು ಸರೋಜಗೌಡ ಅವರುಗಳನ್ನು ಅಭಿನಂದಿಸಲಾಯಿತು.

(Visited 7 times, 1 visits today)