ಮಧುಗಿರಿ:

      ಕೋಲಾರ ಜಿಲ್ಲೆ ಬಂಗಾರ ಪೇಟೆ ತಹಸೀಲ್ದಾರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಬಿ.ಕೆ.ಚಂದ್ರಮೌಳೇಶ್ವರ ರವರ ಹತ್ಯೆಯ ಬಗ್ಗೆ ಸೂಕ್ತ ಸಿ.ಬಿ.ಐ ತನಿಖೆ ನಡೆಸುವ ಅಗತ್ಯ ಇದೆ ಎಂದು ಮಧುಗಿರಿ ತಾಲ್ಲೂಕು ಯಾದವ ನೌಕರರ ಸಂಘ ಹಾಗೂ ಮಧುಗಿರಿ ತಾಲ್ಲೂಕು ಯಾದವ ಸಂಘ ಒತ್ತಾಯಿಸಿವೆ.

      ಬಿ.ಕೆ.ಚಂದ್ರಮೌಳೇಶ್ವರವರ ತಾಯಿಯವರ ತವರೂರು ಮಧುಗಿರಿ ತಾಲ್ಲೂಕು ಕಸಬಾ ಮರುವೇಕೆರೆ ಆಗಿದ್ದು ಹಾಗೂ ಮಧುಗಿರಿ ಗಾಂಧಿ ಎಂ.ಪುಟ್ಟತಿಮ್ಮಯ್ಯ ರವರ ಸೋದರಳಿಯನವರಾಗಿದ್ದು ಸರಳ ಹಾಗೂ ಪ್ರಾಮಾಣಿಕ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದರು.ಇವರ ಪ್ರಾಮಾಣಿಕತೆಯನ್ನು ಕೋಲಾರ ಜನತೆ ಕೊಂಡಾಡಿದ್ದು ಇವರು ಜಮೀನಿನ ವಿವಾದ ಬಗ್ಗೆ ಖುದ್ದು ಹಾಜರಾಗಿ ಪರಿಶೀಲಿಸುವಾಗ ಪೊಲೀಸರ ಸಮ್ಮುಖದಲ್ಲಿ ವೆಂಕಟಾಚಲ ಎನ್ನುವ ವ್ಯಕ್ತಿ ಯಾವುದೇ ಕಾರಣವಿಲ್ಲದೇ ಚೂರಿಯಿಂದ ತಹಸೀಲ್ದಾರ್‍ರಿಗೆ ಇರಿದಿರುತ್ತಾರೆ. ಈ ಕೊಲೆ ಕೆಲವು ಅನುಮಾನಗಳಿಗೆ ಆಸ್ಪದವಾಗಿರುತ್ತದೆ. ಆದುದರಿಂದ ಜರೂರಾಗಿ ಸಿ.ಬಿ.ಐ ತನಿಖೆಗೆ ಒಳವಡಿಸುವುದರ ಮೂಲಕ ಅನುಕೂಲಕಲ್ಪಿಸಿಕೊಟ್ಟು ಮೃತರ ಕುಟುಂಬಕ್ಕೆ ನ್ಯಾಯದೊರಕಿಸಿಕೊಡಲು ಮಧುಗಿರಿ ತಾಲ್ಲೂಕು ಯಾದವ ನೌಕರರ ಸಂಘದ ಅಧ್ಯಕ್ಷರಾದ ಸಿ.ಕೃಷ್ಣಪ್ಪ ರವರು ಒತ್ತಾಯಿಸಿರುತ್ತಾರೆ.

      ಇದಕ್ಕೆ ಮಧುಗಿರಿ ತಾಲ್ಲೂಕು ಯಾದವ ಸಂಘದ ಸಂಪೂರ್ಣ ಬೆಂಬಲ ಇರುತ್ತದೆ. ತಹಸೀಲ್ದಾರ್ ಚಂದ್ರಮೌಳೇಶ್ವರ ಕುಟುಂಬಕ್ಕೆ ಸರ್ಕಾರ ತುರ್ತಾಗಿ ಒಂದು ಕೋಟಿ ರೂಗಳ ಪರಿಹಾರ ಧನ ನೀಡಬೇಕು ಹಾಗೂ ಕುಟುಂಬ ಒಬ್ಬರಿಗೆ ಸರ್ಕಾರಿ ಉದ್ಯೋಗ ದೊರಕಿಸಿ ಕೊಡಬೇಕೆಂದು ತಾಲ್ಲೂಕು ಯಾದವ ಮುಂಖಡರಾದ ಎಂ.ವಿ.ಮೂಡ್ಲಿಗಿರೀಶ್ ರವರು ಒತ್ತಾಯಿಸಿರುತ್ತಾರೆ.

      ಈ ಸಂದರ್ಭದಲ್ಲಿ ಮಧುಗಿರಿ ಪುರಸಭೆ ಮಾಜಿ ಸದಸ್ಯರಾದ ಶ್ರೀದೇವಿ ಮತ್ತು ಮಧುಗಿರಿ ತಾಲ್ಲೂಕು ಯಾದವ ನೌಕರ ಸಂಘದ ಉಪಾಧ್ಯಕ್ಷರಾದ ಹೆಚ್.ನಿರಂಜನ್ ದಾಸ್, ಯಾದವ ಸಂಘದ ಅಧ್ಯಕ್ಷರಾದ ಚಿನ್ನಪ್ಪ ಹಾಗೂ ಕಾರ್ಯದರ್ಶಿ ಕರಿಯಣ್ಣ . ದಾಸಪ್ಪ ಮಾಲಿಮಾರಿಯಪ್ಪ , ಬಸವರಾಜು , ಚಿಕ್ಕಣ್ಣ ಮತ್ತು ಗುತ್ತಿಗೆದಾರರಾದ ಎಂ.ವಿ.ಶ್ರೀನಿವಾಸ್ ಇನ್ನಿತರು ಯಾದವ ಮುಂಖಡರು ಹಾಜರಿದ್ದರು .

      ಇವರುಗಳ ಸಮ್ಮುಖದಲ್ಲಿ ಹತ್ಯೆಯ ಈ ಘಟನೆಯ ಸಿ.ಬಿ.ಐ ತನಿಖೆಗೆ ಜರೂರಾಗಿ ಕೊಡಲು ಸರ್ಕಾರಕ್ಕೆ ಒತ್ತಾಯಿಸಲಾಯಿತು. ಸಂತಾಪ ಸೂಚಕ ಸಭೆ:ತಹಶಿಲ್ದಾರರಾಗಿದ್ದ ಬಿ.ಕೆ.ಚಂದ್ರಮೌಳೇಶ್ವರ ಹತ್ಯೆ ಖಂಡಿಸಿ ತಾಲೂಕು ಯಾದವ ನೌಕರರ ಸಂಘದವತಿಯಿಂದ ಸಂತಾಪ ಸೂಚಕ ಸಭೆ ನಡೆಸಿದರು.

(Visited 37 times, 1 visits today)