ಮಧುಗಿರಿ:

      ಹೋಂ ಕ್ವಾರಂಟೈನ್‍ನಲ್ಲಿರುವವರು ಸಮುದಾಯದಲ್ಲಿ ಅನಾವಶ್ಯಕವಾಗಿ ಓಡಾಡುತ್ತಿದ್ದರೆ, ಅಂತಹವರನ್ನು ತಹಸೀಲ್ದಾರ್ ಮತ್ತು ತಾಲೂಕು ಆರೋಗ್ಯಾಧಿಕಾರಿಗಳು ಪತ್ತೆ ಹಚ್ಚಿ ಅವರುಗಳ ವಿರುದ್ಧ ಎಫ್.ಐ.ಆರ್ ದಾಖಲಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಸೂಚಿಸಿದರು.

      ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಧುಗಿರಿ ತಾಲೂಕಿನ ಕೋವಿಡ್ 19 ನಿಯಂತ್ರಣದ ಬಗ್ಗೆ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಯಾವುದೇ ಸೋಕಿತ ವ್ಯಕ್ತಿಯ ಕೋವಿಡ್ ವರದಿ ಬಂದ ನಂತರವಷ್ಟೇ ಮನೆಯಿಂದ ಹೊರ ಬರಬೇಕು, ಅಂತಹವರನ್ನು ಸ್ಥಲೀಯ ಆಡಳಿತದವರು ನಿಗಾವಹಿಸಬೇಕು ಇಲ್ಲವಾದರೆ ಸಮುದಾಯಕ್ಕೆ ಹರಡುವುದನ್ನು ತಡೆಗಟ್ಟುವುದು ಕಷ್ಟಕರವಾಗುತ್ತದೆ. ಕಂಟೈನ್ಮೆಂಟ್ ವಲಯದಲ್ಲಿನ ಎಲ್ಲರ ಪರೀಕ್ಷಾ ವರದಿ ಬಂದ ನಂತರವಷ್ಟೆ ತೆರವುಗೊಳಿಸಬೇಕು.

      ಕೋವಿಡ್-19 ಗೆ ಸಂಬಂದಿಸಿದಂತೆ ಜಿಲ್ಲೆಗೆ ಜನಸಂಖ್ಯೆಗೆ ಅನುಗುಣವಾಗಿ ಹೆಚ್ಚುವರಿ ತುರ್ತಾಗಿ ಆಂಟಿ ರ್ಯಾಪಿಡ್ ಕಿಟ್‍ಗಳು ಮಂಜೂರಾಗಿದ್ದು, ಇನ್ನೂ ಹೆಚ್ಚಿನ ಕಿಟ್‍ಗಳಿಗಾಗಿ ಸಿಎಂಗೆ ಮನವಿ ಮಾಡಲಾಗಿದೆ ಇಲ್ಲಿಯವರೆಗೂ ಜಿಲ್ಲೆಯಲ್ಲಿ ಕರೋನಾ ಸೋಂಕು ಪತ್ತೆಯ ಫಲಿತಾಂಶ ಬರುವುದು ತಡವಾಗಿ ಬಹಳಷ್ಟು ತೊಂದರೆಯಾಗಿತ್ತು. ಸೋಂಕು ಪತ್ತೆಗೆ ಸುಮಾರು 10 ದಿನಗಳ ಸಮಯ ತೆಗೆದುಕೊಳ್ಳಲಾಗುತ್ತಿತ್ತು. ಈಗ ಒಂದು ಗಂಟೆಯೊಳಗೆ ವರದಿ ನೀಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ, ಮುಂದಿನ ದಿನಗಳಲ್ಲಿ ಯಾವುದೇ ಸಮಸ್ಯೆಯಾಗದಂತೆ ಕ್ರಮ ಕೈಗೊಳ್ಳಲಾಗುವುದು ಎಂದರು.

    ಮಧುಗಿರಿಯಲ್ಲಿ ಸೋಂಕು ನಿಯಂತ್ರಣದಲ್ಲಿದೆ:

      ಜಿಲ್ಲೆಯಲ್ಲಿ ಮಧುಗಿರಿ ತಾಲೂಕಿನಲ್ಲಿ ಕರೋನಾ ಸೋಂಕು ನಿಯಂತ್ರಣದಲ್ಲಿದ್ದು, ಕ್ವಾರಂಟೈನ್ ಪ್ರದೇಶಗಳಲ್ಲಿ ಅಧಿಕಾರಿಗಳು ಇನ್ನೂ ಹೆಚ್ಚಿನ ಶ್ರಮವಹಿಸಿ ಸೋಂಕನ್ನು ನಿಯಂತ್ರಿಸಲು ಕ್ರಮ ವಹಿಸಬೇಕು. ಸೋಂಕಿತರ ಪ್ರಾಥಮಿಕ ಸಂಪರ್ಕದಲ್ಲಿರುವವರನ್ನು ಪತ್ತೆ ಹಚ್ಚದಿದ್ದರೆ ರೋಗ ನಿಯಂತ್ರಣ ಅಸಾಧ್ಯ. ಇದರಿಂದ ಎಚ್ಚರಿಕೆ ವಹಿಸಿ ಸೋಂಕಿತರ ಸಂಪರ್ಕದಲ್ಲಿರುವವರನ್ನು ಪತ್ತೆ ಹಚ್ಚಿ ಎಂದು ತಹಶೀಲ್ದಾರ್ ಡಾ.ವಿಶ್ವಾಥ್ ರವರಿಗೆ ಸೂಚಿಸಿದ ಸಚಿವರು ಹಳ್ಳಿಗಳಲ್ಲಿ ಸೋಂಕು ಹರಡಿದರೆ ನಿಯಂತ್ರಣ ಕಷ್ಟ ಪ್ರತಿ ಹಳ್ಳಿಗಳಲ್ಲೂ ಸಂಬಂದಪಟ್ಟ ಅಧಿಕಾರಿಗಳಿಗೆ ಜವಾಬ್ದಾರಿ ವಹಿಸಿ ಪ್ರತೀ ದಿನಾ ವರದಿ ಪಡೆದು ಎಚ್ಚರ ವಹಿಸಬೇಕೆಂದು ತಾ.ಪಂ ಇಓ ದೊಡ್ಡಸಿದ್ದಪ್ಪನವರಿಗೆ ಸೂಚಿಸಿದರು.

 ಬೆಂಗಳೂರಿನಿಂದ ಬರುವವರ ಸ್ವಯಂ ಕ್ವಾರಂಟೈನ್‍ನಲ್ಲಿರಿ :

      ಲಾಕ್‍ಡೌನ್ ಆರಂಭದಲ್ಲೇ ಬೆಂಗಳೂರಿನಿಂದ ಶೇ. 70 ರಷ್ಟು ಜನರು ತಮ್ಮ ಸ್ವಗ್ರಾಮಗಳಿಗೆ ವಾಪಾಸ್ಸಾಗಿದ್ದು, ಈಗಲೂ ಬರುವವರ ಸಂಖ್ಯೆ ಹೆಚ್ಚಾಗಿದೆ. ಬೆಂಗಳೂರಿನಿಂದ ಬಂದವರು ತಮ್ಮ ಕುಟುಂಬದ ಮತ್ತು ಗ್ರಾಮದ ಹಿತ ದೃಷ್ಟಿಯಿಂದ ಕೆಲವು ದಿನಗಳ ಕಾಲ ಸ್ವಯಂ ಕ್ವಾರಂಟೈನ್‍ನಲ್ಲಿದ್ದು, ಪರೀಕ್ಷೆಯ ನಂತರ ಗ್ರಾಮಗಳಿಗೆ ಪ್ರವೇಶಿಸಿದರೆ ಅನುಕೂಲ. ಇದರ ಬಗ್ಗೆ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು. ಈ ಪ್ರಕರಣದಲ್ಲಿ ಶಿರಾ ತಾಲೂಕಿನಲ್ಲಿ ಬಹಳಷ್ಟು ಪ್ರಕರಣಗಳು ವರದಿಯಾಗಿದೆ ಎಂದು ಮಾಹಿತಿ ನೀಡಿದರು.

        ಪರೀಕ್ಷೆಗೊಳಪಟ್ಟರೆ ಕ್ವಾರಂಟೈನ್ ಕಡ್ಡಾಯ: ದಿನೇ ದಿನೇ ಒತ್ತಡ ಹೆಚ್ಚಾಗುತ್ತಿದ್ದು, ಬೆಂಗಳೂರಿನಲ್ಲಿ ಇನ್ನೂ 32 ಸಾವಿರ ವರದಿ ಬರುವುದು ಬಾಕಿಯಿದೆ. ಜಿಲ್ಲೆಯಲ್ಲಿ ಹೆಚ್ಚಿನ ಒತ್ತಡದಿಂದಾಗಿ ಇತರೆ ಪುಟ 2 ಕ್ಕೆ

(Visited 25 times, 1 visits today)