ಗುಬ್ಬಿ:

    ಚಿರತೆ ದಾಳಿಗೆ ಮಹಿಳೆಯೊಬ್ಬಳು ಬಲಿಯಾದ ಘಟನೆ ತಾಲ್ಲೂಕಿನ ಸಿ.ಎಸ್.ಪುರ ಹೋಬಳಿಯ ಮಾವಿನಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಬರುವ ಮಣಿಕುಪ್ಪೆ ಗ್ರಾಮದಲ್ಲಿ ಈ ಘಟನೆ ನಡೆದಿದೆ.

      ತಾಲ್ಲೂಕಿನ ಗಡಿಭಾಗದಲ್ಲಿ ಚಿರತೆ ದಾಳಿಯು ಹೆಚ್ಚಾಗುತ್ತಿದ್ದು ಮಣಿಕುಪ್ಪೆ ಗ್ರಾಮದ ಭಾಗ್ಯಮ್ಮ (35) ತನ್ನ ರಾಸುಗಳನ್ನು ಮೇಯಿಸಲು ಪಕ್ಕದಲ್ಲೇ ಇರುವ ಅರಣ್ಯ ಇಲಾಖೆಗೆ ತೆರಳಿದ್ದು ಸುಮಾರು 3.30ರ ಸಮಯದಲ್ಲಿ ಚಿರತೆಯು ಮಂಜಮ್ಮನ ಮೇಲೆ ದಾಳಿ ನಡೆಸಿದ ವೇಳೆ ಸ್ಥಳದಲ್ಲೇ ಮಂಜಮ್ಮ ಮೃತಪಟ್ಟಿರುತ್ತಾಳೆ.

      ಗುಬ್ಬಿ, ಕುಣಿಗಲ್ ಹಾಗೂ ತುಮಕೂರಿನ ಗಡಿ ಭಾಗಕ್ಕೆ ಹೊಂದಿಕೊಂಡಿರುವ ತಾಲ್ಲೂಕಿನ ಮಣಿಕುಪ್ಪೆ ಗ್ರಾಮದ ಜನರು ಭಯಭೀತರಾಗಿದ್ದು ಒಂದು ವರ್ಷದ ಹಿಂದೆ ಮೊಟ್ಟಮೊದಲ ಬಾರಿಗೆ ಸಮರ್ಥ್ ಎಂಬ ಬಾಲಕನ ಮೇಲೆ ದಾಳಿ ಮಾಡಿದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ‘ಆಪರೇಷನ್ ಸಮರ್ಥ್’ ಎಂಬ ಯೋಜನೆಯನ್ನು ತಂದು ಇಲ್ಲಿಯವರೆಗೂ ಗಡಿಭಾಗದಲ್ಲೇ ಸುಮಾರು 6ಕ್ಕೂ ಹೆಚ್ಚು ಚಿರತೆ ದಾಳಿಯಿಂದ ರೈತರುಗಳು ಮರಣ ಹೊಂದಿದ್ದು ಇದರಿಂದ ಅರಣ್ಯ ಇಲಾಖೆಯ ಕಾರ್ಯವೈಫಲ್ಯವೇ ಕಾರಣವೆಂದು ಗ್ರಾಮಸ್ಥರುಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

       ಅರಣ್ಯ ಇಲಾಖೆಯ ಸಿಬ್ಬಂದಿಯು ಚಿರತೆ ಹಿಡಿಯಲು ಬೋನುಗಳನ್ನು ಅಲ್ಲಲ್ಲೇ ಇಡುತ್ತಿದ್ದು ಸಿಕ್ಕಂತಹ ಚಿರತೆಯನ್ನು ಯಾವ ಕಾಡಿಗೆ ಬಿಡುತ್ತಾರೆ ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಕಾಡುತ್ತಿದೆ. ಸುಮಾರು 3 ಚಿರತೆಗಳನ್ನು ಅರಣ್ಯ ಇಲಾಖೆ ಹಿಡಿದಿದ್ದು ಇದನ್ನು ಪಕ್ಕದ ಅರಣ್ಯಕ್ಕೆ ಬಿಟ್ಟು ಬರುತ್ತಾರೆ. ಅದೇ ಚಿರತೆಯು ಮನುಷ್ಯರ ರಕ್ತದ ರುಚಿಯನ್ನು ನೋಡಿದ ಪ್ರಾಣಿಯು ಮತ್ತೆ ಅದೇ ಸ್ಥಳಕ್ಕೆ ಬರುತ್ತದೆ. ಇದರಿಂದ ಅರಣ್ಯ ಇಲಾಖೆಯವರು ಚಿರತೆಯನ್ನು ಬೇರೆ ಕಡೆ ಬಿಟ್ಟುಬರುವ ಬದಲು ಅಭಯಾರಣ್ಯಗಳಿಗೆ ಸಾಗಿಸುವುದು ಸೂಕ್ತ ಎಂದು ರೈತರು ಅಭಿಪ್ರಾಯಿಸಿದ್ದಾರೆ. ಇನ್ನೂ ಮುಂದಾದರೂ ಅರಣ್ಯ ಇಲಾಖೆಯ ಸಿಬ್ಬಂದಿಯವರು ತಮ್ಮ ವಲಯಕ್ಕೆ ಸೀಮಿತವಾಗದೇ ಕಾಡುಪ್ರಾಣಿಗಳನ್ನು ಕಾಡಿಗೆ ಅಟ್ಟುವ ಕೆಲಸವನ್ನು ಮಾಡುತ್ತಾರೆಯೇ ಎಂಬುದನ್ನು ಕಾದುನೋಡುವ ಪರಿಸ್ಥಿತಿ ರೈತರದ್ದಾಗಿದೆ.

(Visited 15 times, 1 visits today)