BenkiyabaleBenkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
Facebook Instagram YouTube WhatsApp RSS
Trending
  • ಕಲಿತ ಶಾಲೆ ಕಲಿಸಿದ ಗುರುಗಳನ್ನು ಎಂದಿಗೂ ಮರೆಯದಿರಿ
  • ಮಧುಗಿರಿಯಲ್ಲಿ ಅದ್ದೂರಿ ವೈಕುಂಠ ಏಕಾದಶಿ
  • ದರೋಡೆಕೋರನ ಬಂಧನ
  • ಸೋರಲಮಾವು ಈಶ್ವರ ದೇವಸ್ಥಾನದಲ್ಲಿ ಸಹಸ್ರ ಬಿಲ್ವಾರ್ಚನೆ
  • ವಿಜ್ಞಾನ ವಸ್ತು ಪ್ರದರ್ಶನ ಮಕ್ಕಳಲ್ಲಿ ವೈಜ್ಞಾನಿಕ ಕ್ಷೇತ್ರದಲ್ಲಿ ಆಸಕ್ತಿ ಬೆಳೆಸಲು ಸಹಾಯಕಾರಿ: ಉಪವಿಭಾಗಾಧಿಕಾರಿ ಗೋಟೂರು ಶಿವಪ್ಪ ಅಭಿಪ್ರಾಯ
  • ದರೋಡೆ-ಸುಲಿಗೆ ಪ್ರಕರಣ ತಡೆಗೆ ಪೊಲೀಸರಿಂದ ಮಾಸ್ಟರ್ ಪ್ಲಾನ್
  • ಪೋಷಕಾಂಶಗಳ ಸಂಪತ್ತು ಸಿರಿಧಾನ್ಯ
  • ಮೊಬೈಲ್ ಬಿಡಿ ಪುಸ್ತಕ ಹಿಡಿ: ಶಾಸಕ ಕೆಎನ್‌ಆರ್ ಕಿವಿಮಾತು
Facebook Twitter Instagram YouTube RSS
Benkiyabale Benkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
BenkiyabaleBenkiyabale
Home » ಚಿಕ್ಕನಾಯಕನಹಳ್ಳಿ : ನೆನೆಗುದಿಗೆ ಬಿದ್ದಿದ್ದ ಮುಖ್ಯಕಾಮಗಾರಿಗಳಿಗೆ ಚಾಲನೆ
Trending

ಚಿಕ್ಕನಾಯಕನಹಳ್ಳಿ : ನೆನೆಗುದಿಗೆ ಬಿದ್ದಿದ್ದ ಮುಖ್ಯಕಾಮಗಾರಿಗಳಿಗೆ ಚಾಲನೆ

By News Desk BenkiyabaleUpdated:May 04, 2020 6:37 pm

ಚಿಕ್ಕನಾಯಕನಹಳ್ಳಿ:

      ಲಾಕ್ಡೌನ್ ಹಿನ್ನಲೆಯಲ್ಲಿ ನೆನೆಗುದಿಗೆ ಬಿದ್ದಿದ್ದ ಮುಖ್ಯಕಾಮಗಾರಿಗಳಿಗೆ ಚಾಲನೆ ದೊರೆಯುತ್ತಿದೆ ಆದರೆ ಈ ಕೆಲಸಗಳಿಗೆ ಹೊರಗಿನ ಕೂಲಿಕಾರ್ಮಿಕರು ಬರುತ್ತಿದ್ದು ಸುರಕ್ಷತೆಯ ಕೆಲ ನಿಯಮಗಳು ಪಾಲನೆಯಾಗದಿರುವುದು ಆತಂಕಕ್ಕೆಡೆ ಮಾಡಿಕೊಟ್ಟಿದೆ.

      ಕಾಮಗಾರಿಗೆ ಗ್ರೀನ್ ಸಿಗ್ನಲ್:

      ಕೊರೊನಾ ಸೋಂಕಿನ ಮಹಾಮಾರಿಯಿಂದ ತಪ್ಪಿಸಿಕೊಳ್ಳಲು ಇದೇ ಮೊದಲಬಾರಿಗೆ ಲಾಕ್‍ಡೌನ್ ಆದ ಪರಿಣಾಮ ದೇಶದಲ್ಲಿ ಕೊರೊನಾ ಹರಡುವಿಕೆಗೆ ಕಡಿವಾಣ ಬಿದ್ದಿದ್ದು ಈಗ ಲಾಕ್‍ಡೌನ್ ಸಡಿಲಿಕೆಯಾಗಿದೆ. ಕಾರ್ಮಿಕರ ನೆರವಿನಿಂದ ನಡೆಯುವ ಕಾಮಗಾರಿಗಳನ್ನು ಆರಂಭಿಸಲು À ಸರ್ಕಾರ ಕೆಲವು ಶರತ್ತುಬದ್ದದನ್ವಯ ನಡೆಸಲು ಸೂಚಿಸಿದೆ.
ಅದರಂತೆ ತಾಲ್ಲೂಕಿನಲ್ಲಿ ಈಗಾಗಲೇ ಇದಕ್ಕೆ ಚಾಲನೆ ನೀಡಲಾಗಿದೆ ಪಟ್ಟಣದ ಮುಲಕ ಹಾದುಹೋಗುವು ರಾಷ್ಟ್ರಿಯ ಹೆದ್ದಾರಿ ಕಾಮಗಾರಿ ಆರಂಭಗೊಂಡಿದ್ದು ಎತ್ತಿನಹೊಳೆ, ಹೇಮಾವತಿಯ ನಾಲಾ ಕಾಮಗಾರಿಗಳು ಇನ್ನೇನು ಆರಂಭಗೊಳ್ಳಲಿದೆ.

ಸುರಕ್ಷತಾ ಕ್ರಮಕ್ಕೆ ತಿಲಾಂಜಲಿ:

       ಈ ನಡುವೆ ಹೆದ್ದಾರಿ ಕಾಮಗಾರಿ ಆರಂಭಕ್ಕಾಗಿ ಹೊರ ಪ್ರದೇಶದಿಂದ ಸುಮಾರು 34 ಮಂದಿ ಆಗಮಿಸಿದ್ದಾರೆ. ಇಂತಹ ಕಾರ್ಮಿಕರು ಉಳಿದುಕೊಳ್ಳಲು ಗ್ಯಾರೆಹಳ್ಳಿ, ಜೆ.ಸಿ.ಪುರ ಹಾಗೂ ಆಲದಕಟ್ಟೆಯಲ್ಲಿ ನಿರ್ಮಿಸಲಾದ ಕ್ಯಾಂಪ್‍ಗಳಲ್ಲಿ ಇರುತ್ತಾರೆ. ಸದರಿ 34 ರಲ್ಲಿ 31 ಮಂದಿ ಕಾರ್ಮಿಕರು ರಸ್ತೆ ಕಾಮಗಾರಿಯಲ್ಲಿ ಭಾಗಿಗಳಾಗಿ ಜೆ.ಸಿ.ಪುರದಿಂದ ಹಾಲುಗೊಣದವರೆಗೆ ರಸ್ತೆ ಬದುವಿನ ಮರಗಳನ್ನು ಕಟಾವ್ ಮಾಡುತ್ತಿದ್ದಾರೆ. ಆದರೆ ಹೊರಗಿನಿಂದ ಅಂದರೆ ಮೈಸೂರು ಹಾಗೂ ಮಂಡ್ಯ ಭಾಗದಿಂದ ಬಂದಿರುವ ಇವರನ್ನು ತಪಾಸಣೆಗೊಳಪಡಿಸಲಾದರೂ ಇವರ ಕಫದ ವರದಿ ಬಂದಿಲ್ಲ, ವರದಿ ಬರುವ ಮುನ್ನವೇ ಕಾಮಗಾರಿಗಿಳಿದಿದ್ದಾರೆ, ಹಾಗೂ ಇವರು ಉಳಿದುಕೊಂಡಿರುವ ಆಲದಕಟ್ಟೆ ಕ್ಯಾಂಪ್‍ನಲಿನಲ್ಲಿರುವ ಕೊಠಡಿಗಳಲ್ಲಿ ಇಬ್ಬರು ಮೂವರು ಮಾತ್ರ ಇರಲ್ಲಿಕ್ಕೆ ಸಾಧ್ಯ ಆದರೆ ಅಲ್ಲಿ ಹತ್ತಾರು ಮಂದಿ ಒಟ್ಟಾಗಿದ್ದಾರೆ. ಯಾವುದೇ ಸಾಮಾಜಿಕ ಅಂತರ ಹಾಗೂ ಮಾಸ್ಕ್‍ಗಳನ್ನು ಬಳಸದೆ ಇರುವುದು ಹೆಚ್ಚು ಆತಂಕಕ್ಕೆಡೆಮಾಡಿದೆ.

      ಇನೂ ಹೆಚ್ಚಿನ ಕಾರ್ಮಿಕರು ಬರುವ ಸಂಭವ: ಎತ್ತಿನಹೊಳೆ ಹಾಗೂ ಹೇಮಾವತಿ ನಾಲಾ ಕಾಮಗಾರಿಗೆ ಇನ್ನೂ ಸುಮಾರು 150ರಿಂದ 200 ಮಂದಿ ಕೆಲಸಗಾರರು ಬರುವ ನಿರೀಕ್ಷಯಿದೆ. ಸೋಂಕು ರಹಿತ ಪ್ರದೇಶದಿಂದ ಕರೆಸಲಾಗುವುದೆಂದು ಕಾಮಗಾರಿ ಮುಖ್ಯಸ್ಥರಿಂದ ತಿಳಿದುಬಂದಿದೆ. ಆದರೆ ಹೆಚ್ಚು ಮಂದಿ ಕೆಲಸಗಾರರು ಬರುವುದರಿಂದ ಇನ್ನು ಹೆಚ್ಚಿನ ಸುರಕ್ಷತಾಕ್ರಮ ನಡೆಸುವುದು ಹೆಚ್ಚು ಸೂಕ್ತವೆನಿಸಿದೆ.

ತುರ್ತಾಗಿ ಅನುದಾನ ಖರ್ಚಾಕುವ ಧಾವಂತ:

       ಯೊಜನೆಗಳಲ್ಲಿರುವ ಅನುದಾನಗಳು ಸದರಿ ಮಾರ್ಚ್ ಅಂತ್ಯದಲ್ಲಿಯೇ ಖರ್ಚಾಗಿರಿಬೇಕಿತ್ತು, ಆದರೆ ಕೊರೊನಾ ಬಂದ ಕಾರಣ ಎಲ್ಲ ಲೆಕ್ಕಾಚಾರಗಳೂ ತಲೆಕೆಳಗಾಗಿದ್ದು ತರಾತುರಿಯಲ್ಲಿ ಈ ಕಾಮಗಾರಿಗಳ ಕೆಲಸ ಮುಗಿಸಿ ಅನುದಾನದ ಲೆಕ್ಕಾಚಾರವನ್ನು ಚುಕ್ತಾಮಾಡಿಕೊಳ್ಳುವ ಧಾವಂತದಲ್ಲಿ ಕಾಂಗಾರಿಗಳನ್ನು ಅವಸರವಾಗಿ ನಡೆಸಲಾಗುತ್ತಿದೆ ಎಂಬುದ ಕೆಲವ ರ ಅಭಿಪ್ರಾಯ.

          ಒಟ್ಟಿನಲ್ಲಿ ತಾಲ್ಲೂಕಿನಲ್ಲಿ ಅಭಿವೃದ್ದಿ ಕಾಮಗಾರಿಗಳೂಸಹ ನಡೆಯಬೇಕು, ಹಾಗೂ ಸುರಕ್ಷಿತವಲಯವಾಗಿರುವ ತಾಲ್ಲೂಕಿನಲ್ಲಿ ಹೊರಗಿನಿಂದ ಬರುವ ಕೆಲಸಗಾರರಿಂದ ಸೋಂಕು ಬರದಂತೆ ಸಂರಕ್ಷಣಾ ಕ್ರಮವನ್ನು ಕಡ್ಡಾಯವಾಗಿ ಪಾಲಿಸುವ ಮೂಲಕ ಜನರಿಗಿರುವ ಭಯವನ್ನು ಹೋಗಲಾಡಿಸುವ ಕ್ರಮವೂ ಜರುಗಬೇಕಿದೆ.
ಎಲ್ಲರಿಗೂ ನೆಗಟೀವ್: ಕಾಮಗಾರಿಗೆ ಹೊರಗಿನಿಂದ ಆಗಮಿಸಿರುವ ಕಾರ್ಮಿಕರ ಆರೋಗ್ಯದ ವರದಿಯಂತೆ ಈಗ ನೆಗಟೀವ್ ಬಂದಿದೆ ಎಂದು ತಹಸೀಲ್ದಾರ್ ಸ್ಪಷ್ಟಪಡಿಸಿದ್ದರೂ , ಪರೀಕ್ಷಾ ವರದಿ ಬರುವುದಕ್ಕೂಮುನ್ನವೇ ಕಾರ್ಮಿಕರು ಕೆಲಸ ಮಾಡಿದ್ದಾರೆ ಹಾಗೂ ಕೊಠಡಿಗಳಲ್ಲಿ ಸಾಮಾಜಿಕ ಅಂತರ ಹಾಗೂ ಇನ್ನಿತರ ಸುರಕ್ಷಾತಾ ಕ್ರಮ ಉಲ್ಲಂಘನೆಯಾಗುತ್ತಿರುವ ಬಗ್ಗೆ ಅವರಲ್ಲಿ ಉತ್ತರವಿರಲಿಲ್ಲ.

       ಕಾನೂನು ಸಚಿವರ ಕ್ಷೇತ್ರದಲ್ಲಿ ಪ್ರತಿ ಕೆಲಸಗಳೂ ಅವರ ನಿರ್ದೇಶನದಂತೆ ಎಲ್ಲವೂ ನಡೆದಿರುವುದು ಕನ್ನಡಿಯಷ್ಟೆ ಸತ್ಯವಾಗಿದೆ. ಹೊರಗಿನ ವಿದ್ಯಮಾನದಲ್ಲಿ ಪ್ರತಿಯೊಂದಕ್ಕೂ ಕಾನೂನಿನ ಹಗ್ಗವನ್ನು ಬಿಗಿಗೊಳಿಸಿದರೂ. ಇಲ್ಲಿ ನಡೆಯುವ ವಿದ್ಯಮಾನಕ್ಕೆ ಕಾನೂನು ಸಡಿಲಗೊಂಡು ಎಲ್ಲವೂ ಅವರ ಮೂಗಿನ ನೇರಕ್ಕೆ ನಡೆಯುತ್ತಿದ್ದು ಬೆಕ್ಕು ಕಣ್ಣುಮುಚ್ಚಿ ಹಾಲುಕುಡಿದರೆ ಯಾರಿಗೂ ಗೊತ್ತಾಗುವುದಿಲ್ಲವೆಂದು ತಿಳಿದಂತಿದೆ.

 

(Visited 21 times, 1 visits today)
Previous Articleತುಮಕೂರಿನಿಂದ ವಲಸೆ ಹೋದ ಕಾರ್ಮಿಕರ ಬಸ್ಸುಗಳಿಗೆ ಚಾಲನೆ!
Next Article ಕೊವಿಡ್-19 ನಿರ್ವಹಣೆ ರಾಜ್ಯ ಸರಕಾರ ವಿಫಲ – ಮಾಜಿ ಡಿಸಿಎಂ ಆರೋಪ
News Desk Benkiyabale

Related Posts

ಡಿ. 12 ರಿಂದ 24ರವರೆಗೆ ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮ

December 12, 2025 3:48 pm ತುಮಕೂರು

ಮತದಾರರ ಪಟ್ಟಿಗಳ ವಿಶೇಷ ಸಮಗ್ರ ಪರಿಷ್ಕರಣೆ: ಶೇ. ೬೦.೭೧ರಷ್ಟು ಪ್ರಗತಿ

December 12, 2025 3:25 pm ತುಮಕೂರು

ಸರ್ಕಾರಿ ಯೋಜನೆಗಳ ಸಮಗ್ರ ಅನುಷ್ಠಾನಕ್ಕೆ ಡಿಸಿ ಸೂಚನೆ

December 08, 2025 4:21 pm ತುಮಕೂರು
ತಾಜಾ ಸುದ್ಧಿಗಳು
ಇತರೆ ಸುದ್ಧಿಗಳು

ಕಲಿತ ಶಾಲೆ ಕಲಿಸಿದ ಗುರುಗಳನ್ನು ಎಂದಿಗೂ ಮರೆಯದಿರಿ

December 31, 2025 4:09 pm
ಇತರೆ ಸುದ್ಧಿಗಳು

ಮಧುಗಿರಿಯಲ್ಲಿ ಅದ್ದೂರಿ ವೈಕುಂಠ ಏಕಾದಶಿ

December 31, 2025 4:07 pm

ದರೋಡೆಕೋರನ ಬಂಧನ

December 31, 2025 4:05 pm
ಇತರೆ ಸುದ್ಧಿಗಳು

ಸೋರಲಮಾವು ಈಶ್ವರ ದೇವಸ್ಥಾನದಲ್ಲಿ ಸಹಸ್ರ ಬಿಲ್ವಾರ್ಚನೆ

December 31, 2025 4:04 pm
ಇತರೆ ಸುದ್ಧಿಗಳು

ವಿಜ್ಞಾನ ವಸ್ತು ಪ್ರದರ್ಶನ ಮಕ್ಕಳಲ್ಲಿ ವೈಜ್ಞಾನಿಕ ಕ್ಷೇತ್ರದಲ್ಲಿ ಆಸಕ್ತಿ ಬೆಳೆಸಲು ಸಹಾಯಕಾರಿ: ಉಪವಿಭಾಗಾಧಿಕಾರಿ ಗೋಟೂರು ಶಿವಪ್ಪ ಅಭಿಪ್ರಾಯ

December 31, 2025 4:03 pm
ಇತರೆ ಸುದ್ಧಿಗಳು

ದರೋಡೆ-ಸುಲಿಗೆ ಪ್ರಕರಣ ತಡೆಗೆ ಪೊಲೀಸರಿಂದ ಮಾಸ್ಟರ್ ಪ್ಲಾನ್

December 31, 2025 4:02 pm
Our Youtube Channel
Our Picks

ಕಲಿತ ಶಾಲೆ ಕಲಿಸಿದ ಗುರುಗಳನ್ನು ಎಂದಿಗೂ ಮರೆಯದಿರಿ

December 31, 2025 4:09 pm

ಮಧುಗಿರಿಯಲ್ಲಿ ಅದ್ದೂರಿ ವೈಕುಂಠ ಏಕಾದಶಿ

December 31, 2025 4:07 pm

ದರೋಡೆಕೋರನ ಬಂಧನ

December 31, 2025 4:05 pm

ಸೋರಲಮಾವು ಈಶ್ವರ ದೇವಸ್ಥಾನದಲ್ಲಿ ಸಹಸ್ರ ಬಿಲ್ವಾರ್ಚನೆ

December 31, 2025 4:04 pm

ವಿಜ್ಞಾನ ವಸ್ತು ಪ್ರದರ್ಶನ ಮಕ್ಕಳಲ್ಲಿ ವೈಜ್ಞಾನಿಕ ಕ್ಷೇತ್ರದಲ್ಲಿ ಆಸಕ್ತಿ ಬೆಳೆಸಲು ಸಹಾಯಕಾರಿ: ಉಪವಿಭಾಗಾಧಿಕಾರಿ ಗೋಟೂರು ಶಿವಪ್ಪ ಅಭಿಪ್ರಾಯ

December 31, 2025 4:03 pm
News Tags
Accident Ambedkar Araga jnanendra BJP Chikkanayakanahalli Congress crime DC gs basavaraju Gubbi jc madhuswamy Jds Kn rajanna kodigenahalli Koratagere kunigal madhugiri Mla Mla jyothiganesh mlc r.rajendra pavagada Police Protest R. Rajendra tumakur tumkur Tumkur dc yspatil Tumkur mahanagara palike tumur turuvekere University ಕಾಂಗ್ರೆಸ್ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಕೊರಟಗೆರೆ: ಚಿಕ್ಕನಾಯಕನಹಳ್ಳಿ ಜಿಲ್ಲಾಡಳಿತ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತಿಪಟೂರು ತುಮಕೂರು: ತುಮಕೂರು ವಿವಿ ತುಮಕೂರು ವಿಶ್ವವಿದ್ಯಾನಿಲಯ ತುರುವೇಕೆರೆ ಬಿಜೆಪಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹುಳಿಯಾರು
About us
About us

BBNews 24×7 is Kannada Online News Portal from Benkiyabale Kannada News Paper Team. Benkiyabale is very popular Daily Newspaper publishing from Tumkur City.

Email us: benkiyabale@gmail.com
Contact: +1-320-0123-451


• Terms of Service
• Privacy Policy

Facebook Instagram YouTube WhatsApp RSS
ಅಂಕಣಗಳು

ಬಡವರ ಕಣ್ಣೀರು ತರಿಸುತ್ತಿರುವ ಪಡಿತರ

November 21, 2024 6:06 pm

ಶಕ್ತಿ ಯೋಜನೆ : ರಸ್ತೆ ಸಾರಿಗೆ ನಿಗಮಕ್ಕೆ ೨೪.೪೨ ಕೋಟಿ ಆದಾಯ

August 03, 2023 4:59 pm

ಜಿಲ್ಲೆಯಲ್ಲಿ ಕಸಾಪ ಸಾಹಿತ್ಯ ಸಮ್ಮೇಳನಗಳು ಯಶಸ್ವಿ

December 13, 2022 5:26 pm

ಭಾಷೆ ಮನುಷ್ಯನಿಗೆ ಉಸಿರಿನಷ್ಟೇ ಅನಿವಾರ್ಯ

November 04, 2022 4:36 pm
Don't Miss
ಇತರೆ ಸುದ್ಧಿಗಳು

ಕಲಿತ ಶಾಲೆ ಕಲಿಸಿದ ಗುರುಗಳನ್ನು ಎಂದಿಗೂ ಮರೆಯದಿರಿ

By News Desk BenkiyabaleDecember 31, 2025 4:09 pm

ಮಧುಗಿರಿ: ಸ್ನೇಹ ಸಮ್ಮಿಲನ ಸಮಾರಂಭಗಳು ನಮಗೆ ಶಾಲೆಯ ಬಗ್ಗೆ ಗೌರವ ಹೆಚ್ಚುವಂತೆ ಮಾಡುತ್ತದೆ. ಕಲಿತ ಶಾಲೆ ಕಲಿಸಿದ ಗುರುಗಳನ್ನು…

ಮಧುಗಿರಿಯಲ್ಲಿ ಅದ್ದೂರಿ ವೈಕುಂಠ ಏಕಾದಶಿ

December 31, 2025 4:07 pm

ದರೋಡೆಕೋರನ ಬಂಧನ

December 31, 2025 4:05 pm

ಸೋರಲಮಾವು ಈಶ್ವರ ದೇವಸ್ಥಾನದಲ್ಲಿ ಸಹಸ್ರ ಬಿಲ್ವಾರ್ಚನೆ

December 31, 2025 4:04 pm
News by Date
December 2025
M T W T F S S
1234567
891011121314
15161718192021
22232425262728
293031  
« Nov    
Facebook Twitter Instagram YouTube LinkedIn WhatsApp RSS
  • Home
  • ಅಂಕಣಗಳು
  • ಅಡುಗೆ
  • ನಿತ್ಯ ಭವಿಷ್ಯ
  • ಪ್ರವಾಸ
  • ಸುಭಾಷಿತ
© 2016-2025 Benkiyabale - Kannada Online News Portal. Designed by Digicube Solutions.

Type above and press Enter to search. Press Esc to cancel.