ಚಿಕ್ಕನಾಯಕನಹಳ್ಳಿ :

      ನೀರಾವರಿ ಹೋರಾಟ ಸಮಿತಿ ಹಾಗೂ ರೈತಸಂಘದ ಸದಸ್ಯರೊಂದಿಗೆ ನಾಲಾಕಾಂಗಾರಿ ವೀಕ್ಷಣಗೆ ಜೊತೆಯಲ್ಲಿ ತೆರಳಿದ್ದ ಕನ್ನಡ ಪ್ರಭ ವರದಿಗಾರನ ಮೇಲೆ ಸಚಿವರ ಬೆಂಬಲಿಗರೊಬ್ಬರು ಹಲ್ಲೆಗೆ ಮುಂದಾದ ಘಟನೆ ನಡೆದಿದೆ.

      ಕಾಮಗಾರಿ ವೀಕ್ಷಣೆಯ ನಂತರ ಮೇಲ್ಕಂಡ ತಂಡದ ಸದಸ್ಯರನ್ನು ಕನ್ನಡ ಪ್ರಭ ವರದಿಗಾರ ಅಣೇಕಟ್ಟೆ ಸಿದ್ದರಾಮಯ್ಯನವರು ಈ ಹಿಂದೆ ಹೇಮಾವತಿ ನಾಲಾ ಭೂಸ್ವಾಧೀನದ ವಿಚಾರದಲ್ಲಿ ರೈತರಿಗೆ ಪರಿಹಾರ ಕೋಡುವವರೆಗೂ ಕಾಮಗಾರಿ ಮಾಡದಂತೆ ಅಡ್ಡಿಪಡಿಸಲಾಗಿತ್ತು. ಇದಕ್ಕೆ ಅಂದಿನ ಮಾಜಿ ಶಾಸಕರಾಗಿದ್ದ ಜೆ.ಸಿ.ಮಾಧುಸ್ವಾಮಿಯವರು ರೈತರ ನಿಲುವಿಗೆ ಬೆಂಬಲವ್ಯಕ್ತಪಡಿಸಿದ್ದ ಕಾರಣ ಪರಿಹಾರ ದೊರೆತು ಕಾಂಗಾರಿ ಆರಂಭಗೊಂಡಿತು.

      ಆದರೆ ಈ ಭಾಗದಲ್ಲಿಯೇ ಎತ್ತಿನಹೊಳೆ ಕಾಮಗಾರಿ ಆರಂಭಗೊಂಡಿದ್ದು ನಾಲೆಗೆ ಭೂಮಿ ಕಳೆದುಕೊಂಡ ರೈತರಿಗೆ ತಿಳುವಳಿಕೆ ಪತ್ರವನ್ನಾಗಲಿ, ಭೂಸ್ವಾಧೀನ ಪಡಿಸಿಕೊಂಡಿರುವ ಬಗ್ಗೆ ಅವಾರ್ಡ್‍ನ್ನಾಗಲಿ, ಅವರು ಕಳೆದುಕೊಳ್ಳುತ್ತಿರುವ ಭೂಮಿಯ ಮೌಲ್ಯವನ್ನು ನಿರ್ಧರಿಸುವ ಯಾವುದೇಪ್ರಕ್ರಿಯೆ ಪೂರ್ಣಗೊಂಡಿಲ್ಲ. ಆದರೂ ಏಕಾಏಕಿ ರೈತರ ಜಮೀನಿನಲ್ಲಿ ಕಾಮಗಾರಿ ಭರದಿಂದ ನಡೆಯುತ್ತಿದೆ. ಈಬಗ್ಗೆ ರೈತಸಂಘ ಮತ್ತು ನೀರಾವರಿ ಹೋರಾಟ ಸಮಿತಿಗಳು ರೈತರಿಗೆ ಪರಿಹಾರ ಕೊಡಿಸುವ ನಿಟ್ಟನಲ್ಲಿ ಮುಂದಾಗಿಲ್ಲದಿರುವ ಬಗ್ಗೆ ವರದಿಗಾರರು ಪ್ರಶ್ನೆ ಮಾಡಿದ್ದಕ್ಕೆ, ಅಲ್ಲಿಯೇ ಇದ್ದ ಸಚಿವರ ಬೆಂಬಲಿಗ ನಿವೃತ್ತ ಮುಖ್ಯಶಿಕ್ಷಕ ಗೋವಿಂದರಾಜು ಎಂಬವರು ಸದರಿ ವರದಿಗಾರರ ಮೇಲೆ ಹಲ್ಲೆಗೆ ಯತ್ನಿಸಿ ನೀನಾವನು ನಮ್ಮ ಸಚಿವರ ವಿರುದ್ದ ಪ್ರಶ್ನೆಕೇಳಲು ಎಂದು ಏಕಾಏಕಿ ಹಲ್ಲೆಗೆ ಯತ್ನಿಸಿದಾಗ ಸ್ಥಳದಲ್ಲಿದ್ದವರು ವರದಿಗಾರರನ್ನು ರಕ್ಷಿಸಿದರು.

      ಹೋದ ಕಡೆಯಲೆಲ್ಲಾ ಸಚಿವರು ಮಾಧ್ಯಮದವರ ಮೇಲೆ ಹರಿಹಾಯುತ್ತಾರೆ, ಆದರೆ ಸ್ವಕ್ಷೇತ್ರದಲ್ಲಿ ಅವರ ಬೆಂಬಲಿಗರು ಮಾಧ್ಯಮದವರ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ. ಕಾನೂನು ಕಾಪಾಡುವ ಸಚಿವರ ಕ್ಷೇತ್ರದಲ್ಲಿಯೇ ಅವರ ಬೆಂಬಲಿಗನೋರ್ವ ವರದಿಗಾರನ ಮೇಲೆ ಹಲ್ಲೆಗೆ ಯತ್ನಿಸಿರುವುದು ಎಷ್ಟರ ಮಟ್ಟಿನ ನ್ಯಾಯ ಎಂಬುದು ಪ್ರಶ್ನೆಯಾಗುಳಿದಿದೆ. ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾದೆ ಪತ್ರಿಕಾರಂಗದ ಬಾಯಿಮುಚ್ಚಿಸುವ ಅಡಳಿತಶಾಹಿವರ್ತನೆ ಸಚಿವರಿಗೆ ಶೋಭೆ ತರುವುದಲ್ಲವೆನಿಸಿದೆ.

(Visited 7 times, 1 visits today)