ಚಿಕ್ಕನಾಯಕನಹಳ್ಳಿ:

      ಕಳೆದೆರಡು ದಿನಗಳಿಂದ ತಾಲ್ಲೂಕಿನ ಹಲವೆಡೆ ಸುರಿದ ಮಳೆಗಾಳಿಗೆ ಮರಗಿಡ ಹಾಗೂ ಮನೆಗಳ ಹೆಂಚು ಹಾಗೂ ಶೀಟುಗಳು ಹಾರಿಹೋಗಿ ಅಪಾರಪ್ರಮಾಣದ ನಷ್ಟವುಂಟಾಗಿದೆ

      ಕಳೆದೆರಡು ದಿನಗಳಿಂದ ಸಂಜೆ ಮಳೆ ಹಾಗೂ ಗಾಳಿಯರಭಸ ಜೋರಾಗಿದ್ದು ಗಾಳಯ ಹೊಡೆತಕ್ಕೆ ಹಲವು ಮರಗಳು ಉರುಳಿಬಿದ್ದಿವೆ. ತಾಲ್ಲೂಕಿನ ಶೆಟ್ಟಿಕೆರೆ ಹಾಗೂ ಹಂದನಕೆರೆ ಹೋಬಳಿಗಳಲ್ಲಿ ಸಾಕಷ್ಟು ಹಾನಿ ಮಾಡಿದ್ದು ಈ ಭಾಗದ ಹಲವು ತೋಟದಲ್ಲಿ ತೆಂಗು, ಅಡಿಕೆ, ಮಾವು, ಹಲಸುಮರಗಳು ನೆಲಕ್ಕೊರಗಿವೆ. ರಸ್ತೆಬದಿಯ ಮರಗಳುಸಹ ರಸ್ತೆಗೆ ಅಡ್ಡಲಾಗಿ ಬಿದ್ದ ಪರಿಣಾಮ ಹಲವೆಡೆ ವಾಹನ ಸಂಚಾರಕ್ಕೆ ತೊಡಕಾಯಿತು. ತಾಲ್ಲೂಕಿನ ಮೇಲನಹಳ್ಳಿ, ಶ್ಯಾವಿಗೆಹಳ್ಳಿ, ಹಾಲುದೇವರಹಟ್ಟಿ, ಸಾವಸೆಟ್ಟಿಹಳ್ಳಿಗಳಲ್ಲಿ ಹಲವು ಮನೆಗಳ ಹೆಂಚು ಮತ್ತು ಸಿಮೆಂಟ್ ಶೀಷ್‍ಗಳು ಮಳೆ ಗಾಳಿಯ ಹೊಡೆತಕ್ಕೆ ಹಾರಿಹೋಗಿದ್ದು ಅಪಾರ ನಷ್ಟ ಸಂಭವಿಸಿದೆ. ಈಗಾಗಲೇ ಕಂದಾಯ ಇಲಾಖೆಯಿಂದ ಮಳೆ ಹಾಗೂ ಗಾಳಿಯಿಂದ ತಾಲ್ಲೂಕಿನಲ್ಲಿ ಆಗಿರುವ ಹಾನಿಯ ಬಗ್ಗೆ ಮಹಜರ್ ನಡೆಸಲಾಗುತ್ತಿದೆ ಎಂದು ತಹಸೀಲ್ದಾರ್ ತಿಳಿಸಿದರು.

 

(Visited 31 times, 1 visits today)