ಕ್ಕನಾಯಕನಹಳ್ಳಿ:

      ಪಟ್ಟಣದಲ್ಲಿ ಬೀದಿ ನಾಯಿಗಳ ಹಾವಳಿ ವಿಪರೀತ ಹೆಚ್ಚಿದ್ದು ಹಲವರು ಇವುಗಳ ದಾಳಿಗೊಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

      ಪಟ್ಟಣದ ಹಲವೆಡೆ ಬೀದಿನಾಯಿಗಳ ಹಾವಳಿ ವಿಪರೀತ ಹೆಚ್ಚಿದ್ದು ಹಲವರು ಇವುಗಳಿಂದ ಕಚ್ಚಿಸಿಕೊಂಡಿದ್ದಾರೆ. ಪಟ್ಟಣದ ಶೆಟ್ಟಿಕೆರೆಗೇಟ್, ನೆಹರೂವೃತ್ತ, ಖಾಸಗಿಬಸ್‍ನಿಲ್ದಾಣ, ತರಕಾರಿ ಮರುಕಟ್ಟೆ, ಮಹಾಲಕ್ಷ್ಮಿ ಬಡವಾಣೆ ಹಾಗೂ ಕೋಳಿ ಮತ್ತು ಮಟಲ್ ಮಾರಾಟ ಮಳಿಗೆಗಳ ಬಳಿ ಇವಗಳದಂಡೇ ನೆರೆದಿರುತ್ತದೆ. ಕೆಲೆವಡೆ ದಾರಿಹೋಕರ ನಡುವೆ ಗುಂಪುಗುಂಪಾಗಿ ನುಗ್ಗಿ ಹಲವರನ್ನು ಗಾಸಿಗೊಳಿಸಿದೆ. ಜನನಿಬಿಡ ರಸ್ತೆಗಳಲ್ಲಿ ಸಂಚರಿಸುವ ಬೈಕ್ ಸವಾರನ್ನು ಅಟ್ಟಿಸಿಕೊಂಡು ಬರುವ ನಾಯಿಗಳಿಂದ ಹಲವರು ಗಾಬರಿಗೊಂಡು ಬಿದ್ದು ಪೆಟ್ಟುಮಾಡಿಕೊಂಡಿದ್ದಾರೆ. ಇವುಗಳ ಜೊತೆಗೆ ಹುಚ್ಚುನಾಯಿಗಳು ಕೆಲವು ಸೇರಿಕೊಂಡು ಕಂಡಕಂಡವರನ್ನು ಕಚ್ಚಿಗಾಯಗೊಳಿಸಿದ್ದರೆ, ಕೆಲವು ಗಾಯಗೊಂಡು ವಾಸನೆ ಹತ್ತಿದ ನಾಯಿಗಳು ಕಂಡಕಂಡ ಮನೆಗಳಿಗೆ ನುಗ್ಗಿ ರಂಪಾಟ ನಡೆಸಿವೆ.

      ಈಚೆಗೆ ನಾಯಿಗಳ ಕಡಿತಕ್ಕೆ ಹತ್ತಕ್ಕೂ ಹೆಚ್ಚುಮಂದಿ ಇಲ್ಲಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಇಂತಹ ನಾಯಿಗಳನ್ನು ನಿಯಂತ್ರಿಸುವುದಕ್ಕೆ ಪ್ರಾಣಿದಯಾಸಂಘದವರಿಂದ ಅಡ್ಡಿ ಯಾಗುತ್ತಿದೆ ಎಂಬ ನೆಪದಿಂದ ಪುರಸಭೆ ನಿದ್ರ್ಯಾಕ್ಷಣ್ಯಕ್ರಮ ಜರುಗಿಸುವಲ್ಲಿ ಹಿಂಜರಿದಿದ್ದು ಕೇವಲ ನಾಯಗಳನ್ನು ಕೆಲವು ಏಜೆನ್ಸಿಯವರಿಗೆ ಗುತ್ತಿಗೆ ನೀಡಿ ಹಿಡಿಸುವುದರಿಂದ ಯಾವುದೇ ಪ್ರಯೋಜನ ಆಗಿಲ್ಲ, ಇಂತಹ ಕಾರ್ಯಾಚರಣೆಯಲ್ಲಿ ಹಿಡಿದ ನಾಯಿಗಳು ಕೆಲವೇ ದಿನಗಳಲ್ಲಿ ಮತ್ತೆ ಊರಿನಲ್ಲಿ ಕಾಣಿಸಿಕೊಳ್ಳುತ್ತಿರುವುದರಿಂದ ಪುರಸಭೆ ನಾಯಿಗಳ ನಿಯಂತ್ರಣದ ಬಗ್ಗೆ ಈವರೆಗೆ ಯಾವುದೇ ಕ್ರಮ ಕೈಗೊಳ್ಳದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

(Visited 16 times, 1 visits today)