ತುಮಕೂರು:

      ಆಸ್ತಿ ವಿಚಾರವಾಗಿ ತಂದೆಯೇ ಮಗಳ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ತುಮಕೂರು ಜಿಲ್ಲೆಯ ತಿಪಟೂರು ತಾಲ್ಲೂಕಿನ ಗೊಪಾಲಪುರ ಗ್ರಾಮದಲ್ಲಿ ನಡೆದಿದೆ.

      6 ವರ್ಷಗಳ ಹಿಂದೆ ಮದುವೆಯಾಗಿ ಬೆಂಗಳೂರಿನಲ್ಲಿ ವಾಸವಿದ್ದ ಅಮೃತಾ ಮತ್ತು ಸುನೀಲ್ ಮಾರ್ಚ್ ನಲ್ಲಿ ಗೋಪಾಲಪುರ ಗ್ರಾಮದ ತಂದೆ ಮನೆಗೆ ಬಂದಿದ್ದರು. ಲಾಕ್ ಡೌನ್ ಆದ ಹಿನ್ನೆಲೆಯಲ್ಲಿ ಗ್ರಾಮದಲ್ಲೇ ಉಳಿದುಕೊಂಡಿದ್ದರು. ಈ ವೇಳೆ ತಂದೆ ಭೈರಪ್ಪ ಜಮೀನಿನಲ್ಲಿ ಮಣ್ಣು ತೆಗೆಸಿ ಮಾರಿಕೊಂಡಿದ್ದಾರೆ ಎಂದು ಅಮೃತಾ ತಂದೆಯನ್ನ ಪ್ರಶ್ನಿಸಿದ್ದಾರೆ. ಈ ವಿಚಾರಕ್ಕೆ ತಂದೆ ಮಗಳ ನಡುವೆ ಗಲಾಟೆ ಶುರುವಾಗಿ ಕೊನೆಗೆ ಅಮೃತಾ ನೊಣವಿನಕೆರೆ ಪೆÇಲೀಸ್ ಠಾಣೆಗೆ ದೂರು ನೀಡಿದ್ದಾರೆ.

      ಪೊಲೀಸ್ ಠಾಣೆಯಿಂದ ಮನೆಗೆ ಬಂದ ಅಮೃತಾ ಹಾಗೂ ತಂದೆ ಬೈರಪ್ಪ ನಡುವೆ ಮತ್ತೆ ಜಗಳ ಶುರುವಾಗಿದ್ದು ವಿಕೋಪಕ್ಕೆ ತಿರುಗಿದೆ. ತಂದೆ ಬೈರಪ್ಪ ಹಾಗೂ ಅಣ್ಣ ತಮ್ಮಂದಿರು ಸೇರಿ ಮಾರಕಾಸ್ತ್ರಗಳಿಂದ ಅಮೃತಾ ಮೇಲೆ ಹಲ್ಲೆ ನಡೆಸಿದ್ದಾರೆ. ಜಗಳ ಬಿಡಿಸಲು ಮದ್ಯೆ ಪ್ರವೇಶಿಸಿದ ಪತಿ ಸುನಿಲ್ ಮೇಲೂ ಹಲ್ಲೆ ನಡೆಸಿದ್ದಾರೆ ಎಂದು ಅಮೃತಾ ಆರೋಪಿಸಿದ್ದಾರೆ. ಅಮೃತಾ ತಲೆಗೆ ಗಂಭೀರ ಗಾಯಗಳಾಗಿದ್ದು ಸುನಿಲ್ ಗೆ ಸಣ್ಣ ಪುಟ್ಟ ಗಾಯಗಳಾಗಿದೆ ಇಬ್ಬರು ತಿಪಟೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

      ತಂದೆ ಬೈರಪ್ಪ ಗೋಪಾಲಪುರ ಗ್ರಾಮ ಪಂಚಾಯಿತಿ ಸದಸ್ಯನಾಗಿದ್ದು, ಅಕ್ರಮ ಸಂಬಂಧಗಳನ್ನ ಇಟ್ಟುಕೊಂಡು, ಕುಟುಂಬದ ಬಗ್ಗೆ ಜವಾಬ್ದಾರಿ ಇರಲಿಲ್ಲ. ಇದ್ದ ಎರಡು ಹೆಣ್ಣು ಮಕ್ಕಳನ್ನ ಸರಿಯಾಗಿ ಸಾಕದೆ ಹಿರಿಯ ಮಗಳನ್ನ ಹೊಟೆಲ್ ನಲ್ಲಿ ಜೀತಕ್ಕೆ ಮಾರಿಕೊಂಡಿದ್ದರು, ಕಿರಿಯ ಮಗಳು ಅಮೃತಾಳನ್ನ ಅನಾಥಾಶ್ರಮದಲ್ಲಿ ಬಿಟ್ಟಿದ್ದರು. ಪತ್ನಿ ನಾಗಮ್ಮನ ಮೇಲೂ ಹಲ್ಲೆ ನಡೆಸುತ್ತಿದ್ದು, ಅಕ್ರಮ ಸಂಬಂಧಕ್ಕೆ ಜಮೀನಿನಲ್ಲಿರುವ ಮಣ್ಣನ್ನು ಮಾರಿಕೊಂಡಿದ್ದ ಎಂದು ಅಮೃತಾ ಆರೋಪಿಸಿದ್ದಾರೆ. ಜೊತೆಗೆ ಹಿಂದಿನಿಂದಲೂ ನನ್ನ ತಂದೆ ಭೈರಪ್ಪ ನಮಗೆ ಅನ್ಯಾಯ ಮಾಡಿದ್ದು ನ್ಯಾಯ ಕೊಡಿಸಬೇಕು ಎಂದು ಮನವಿ ಮಾಡಿದ್ದಾರೆ.

      ಈ ಬಗ್ಗೆ ನೊಣವಿನಕೆರೆ ಪೊಲಿಸ್ ಠಾಣೆಯಲ್ಲಿ ತಂದೆ ಬೈರಪ್ಪ ವಿರುದ್ದ ದೂರು ನೀಡಿದ್ದಾರೆ. ಗ್ರಾಮಸ್ಥರು ತಂದೆ ಮಗಳ ಜಗಳ, ಪ್ರಕರಣ ದಾಖಲಿಸದೆ ರಾಜಿ ಸಂಧಾನ ಮಾಡಿಸುವಂತೆ ಪೊಲೀಸರ ಮೇಲೆ ಒತ್ತಡ ಹೇರುತ್ತಿದ್ದಾರೆ. ಹೀಗಾಗಿ ನೊಣವಿನಕೆರೆ ಪೊಲೀಸರು ಇಬ್ಬರನ್ನ ಕರೆಸಿ ರಾಜಿಸಂಧಾನ ಮಾಡಲು ಮುಂದಾಗಿದ್ದಾರೆ.

 

(Visited 10 times, 1 visits today)