ತುಮಕೂರು:

       ಪ್ರತಿದಿನ ದೇಶದೆಲ್ಲೆಡೆ ಕೊರೊನಾ ಅಟ್ಟಹಾಸ ಮರೆದಿದ್ದು, ಸೋಂಕಿತರ ಸಂಖ್ಯೆ ಹೆಚ್ಚುತ್ತಲೆ ಹೋಗುತ್ತಿದೆ. ಬಂದುಬಳಗ, ರಕ್ತಸಂಬಂಧಿಗಳು ಸತ್ತರು ಹತ್ತಿರ ಹೋಗಿ ಮರಣೋತ್ತರ ಕಾರ್ಯವನ್ನು ಮಾಡಲು ಹಿಂದೇಟು ಹಾಕುತ್ತಿದ್ದಾರೆ. ಇಂತಹದೇ ಒಂದು ಘಟನೆ ಸೀಲ್ಡ್ ಡೌನ್ ಪ್ರದೇಶವಾಗಿರುವ ಕೆ ಎಚ್ ಬಿ ಕಾಲೋನಿಯಲಿ ತುಮಕೂರಿನಲ್ಲಿ ನಡೆದಿದೆ. ಆದರೇ ಇಲ್ಲಿ ಮುಸ್ಲೀಂ ಯುವಕರು ಮೃತ ವೃದ್ಧನ ಶವನ್ನು ಸಾಗಿಸಿ ಮಾನವೀಯತೆ ಮರೆದಿದ್ದಾರೆ.

      ತುಮಕೂರಿನ ಕೆ ಎಚ್ ಬಿ ಕಾಲೋನಿಯಲ್ಲಿ ಕರೊನಾ ಸೊಂಕಿತ ಪಿ 535 ವೃದ್ಧ ಸಾವನ್ನಪ್ಪಿದ್ದು, ಈತನಿಂದ ಪಕ್ಕದ ಮನೆಯ ದಂಪತಿಗಳಿಬ್ಬರಿಗೂ ಸೊಂಕು ತಗುಲಿತ್ತು. ಇದರಿಂದ ಕೆ ಎಚ್ ಬಿ ಕಾಲೋನಿಯನ್ನು ಸೀಲ್ಡ್ ಡೌನ್ ಮಾಡಲಾಗಿತ್ತು. ಈ ಸೀಲ್ಡ್ ಡೌನ್ ಏರಿಯಾದಲ್ಲಿ ಕಳೆದ ರಾತ್ರಿ ಮತ್ತೊಬ್ಬ ವೃದ್ಧ ಅನಾರೋಗ್ಯದಿಂದ ಸಹಜವಾಗಿ ಸಾವನ್ನಪ್ಪಿದ್ದು, ಮುಸಲ್ಮಾನ್ ಯುವಕರು ಅಂತ್ಯಕ್ರಿಯೆ ನೆರವೇರಿಸಲು ಸಹಾಯ ಮಾಡಿದ್ದಾರೆ.

      ನಗರದ ಎರಡನೇ ಕಂಟೈನ್ಮೆಂಟ್ ಝೋನ್ ಕೆ ಎಚ್ ಬಿ ಕಾಲೋನಿಯಲ್ಲಿ ವಾಸವಿದ್ದ 60 ವರ್ಷದ ವೃದ್ಧ ಹೆಚ್ ಎಸ್ ನಾರಾಯಣ ರಾವ್ ಅನಾರೋಗ್ಯದಿಂದ ಕಳೆದ ರಾತ್ರಿ ಸಾವನ್ನಪ್ಪಿದ್ದರು. ಟೈಲರ್ ವೃತ್ತಿಯನ್ನ ಮಾಡುತ್ತಿದ್ದ ಇವರಿಗೆ ಪತ್ನಿ, ಇಬ್ಬರು ಗಂಡು ಮಕ್ಕಳು, ಒಬ್ಬರು ಹೆಣ್ಣು ಮಗಳಿದ್ದು ಆರ್ಥಿಕವಾಗಿ ಸಂಕಷ್ಟದಲ್ಲಿದ್ದರು. ಮೊದಲೇ ಒಂದು ಕಾಲು ಕಳೆದುಕೊಂಡು ವಿಶೇಷ ಚೇತನರಾಗಿದ್ದ ವೃದ್ಧ ಅನಾರೋಗ್ಯದಿಂದ ಬಳಲುತ್ತಿದ್ದರು. ಕಳೆದ ನಾಲ್ಕು ದಿನಗಳ ಹಿಂದೆ ಇವರಿಗೆ ಕೊವಿಡ್ 19 ಪರೀಕ್ಷೆ ಮಾಡಲಾಗಿದ್ದು ವರದಿ ನೆಗೆಟಿವ್ ಬಂದಿತ್ತು.

       ವೃದ್ಧ ಸಾವನ್ನಪ್ಪಿದ ಸಂದರ್ಭದಲ್ಲಿ ಏರಿಯಾ ಸಂಪೂರ್ಣ ಸೀಲ್ಡ್ ಡೌನ್ ಆಗಿದ್ದರಿಂದ ಕುಟುಂಬದವರನ್ನು ಬಿಟ್ಟರೆ, ಸಂಬಂಧಿಕರು ಯಾರೂ ಸ್ಥಳಕ್ಕೆ ಹೋಗಲು ಸಾಧ್ಯವಾಗಿಲ್ಲ. ಹೀಗಾಗಿ ಅಂತ್ಯಸಂಸ್ಕಾರ ಮಾಡಲು ಪರದಾಡುತ್ತಿದ್ದ ಇವರನ್ನು ಕಂಡು ಕರೊನಾ ವಾರಿಯರ್ ಗಳಾದ ಮಹಮದ್ ಖಲಿದ್, ಇಮ್ರಾನ್, ಟಿಪ್ಪು, ಶೇರು, ಶಾರುಖ್, ತೋಫಿಕ್ ಸಾದ್, ಖತೀಭ್ ಹಾಗೂ ಮನ್ಸೂರ್ ಅಂತ್ಯಸಂಸ್ಕಾರಕ್ಕೆ ಜಿಲ್ಲಾಡಳಿತದ ಅನುಮತಿಯನ್ನ ಪಡೆದು, ಆ್ಯಯಂಬುಲೆನ್ಸ್ ವ್ಯವಸ್ಥೆಯ ಜೊತೆಗೆ ಧನ ಸಹಾಯವನ್ನು ಮಾಡಿದ್ದಾರೆ, ಮೃತದೇಹವನ್ನ ಚಿತಾಗಾರಕ್ಕೆ ಕಳುಹಿಸಿಕೊಟ್ಟಿದ್ದಾರೆ. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಮಾನವೀಯತೆ ಮೆರೆದ ಯುವಕರ ಕಾರ್ಯಕ್ಕೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗಿದೆ.

       ಬಳಿಕ ಪತ್ನಿ ಹಾಗೂ ಮಕ್ಕಳು ಸೇರಿ ಗಾರ್ಡನ್ ಏರಿಯಾದಲ್ಲಿರುವ ಸರ್ಕಾರಿ ವಿದ್ಯುತ್ ಚಿತಾಗಾರದಲ್ಲಿ ಇಂದು ವೃದ್ಧನ ಅಂತ್ಯಕ್ರಿಯೇ ಯನ್ನ ನೆರವೇರಿಸಿದ್ದಾರೆ.

(Visited 26 times, 1 visits today)