ತುಮಕೂರು:

       ತಾಲೂಕಿನ ಊರ್ಡಿಗೆರೆ ಹೋಬಳಿ ದೇವರಾಯನದುರ್ಗ ಗ್ರಾಮದ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಾಲಯಕ್ಕೆ ಬರುವ ಭಕ್ತಾದಿಗಳ ಪಾದರಕ್ಷೆಗಳನ್ನು ಕಾಯುವ ಹಕ್ಕು ಭಾದ್ಯತೆಯನ್ನು ಪಡೆಯುವ ಬಗ್ಗೆ ಆಗಸ್ಟ್ 29ರಂದು ಬೆಳಿಗ್ಗೆ 11-30 ಗಂಟೆಗೆ ದೇವಾಲಯದ ಆವರಣದಲ್ಲಿ ಹರಾಜು (2020ರ ಸೆಪ್ಟೆಂಬರ್ 1ರಿಂದ 2021ರ ಫೆಬ್ರುವರಿ 28ರವರೆಗಿನ ಆರು ತಿಂಗಳ ಅವಧಿಗೆ)ನಡೆಸಲಾಗುವುದು.

      ಶ್ರೀ ಕ್ಷೇತ್ರದಲ್ಲಿ 2 ದೇವಾಲಯಗಳಿದ್ದು, ಸದರಿ ದೇವಾಲಯಗಳ ಹತ್ತಿರ ಇರುವ ಪಾದರಕ್ಷೆ ಕಾಯುವ ಹರಾಜನ್ನು ಪ್ರತ್ಯೇಕವಾಗಿ ಕೂಗಬೇಕು. ಈ ಬಾರಿ ಶ್ರೀ ಯೋಗ ಲಕ್ಷ್ಮೀನರಸಿಂಹಸ್ವಾಮಿ ದೇವಾಲಯದ ಬಳಿ ಇರುವ ಪಾದರಕ್ಷೆ ಕಾಯುವ ಹರಾಜನ್ನು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಮಾತ್ರ ಮೀಸಲಿಡಲಾಗಿದೆ. ಹರಾಜು ಹಕ್ಕಿನ ಗುತ್ತಿಗೆ ಪಡೆಯಲಿಚ್ಛಿಸುವವರು 5000 ರೂ.ಗಳ ಮುಂಗಡ ಠೇವಣಿ ಇಡಬೇಕು.

      ಹರಾಜಿನಲ್ಲಿ ಭಾಗವಹಿಸಲಿಚ್ಛಿಸುವವರು ತಮ್ಮ ಸಂಪೂರ್ಣ ವಿಳಾಸದ ದಾಖಲೆ, ಫೋಟೊ, ಐಡಿ ದಾಖಲೆ(ಆಧಾರ್ ಕಾರ್ಡ್, ಚುನಾವಣೆ ಕಾರ್ಡ್, ಆಹಾರ ಪಡಿತರ ಚೀಟಿ, ಇತ್ಯಾದಿ)ಯ ಛಾಯಾ ಪ್ರತಿಗಳನ್ನು ಸಲ್ಲಿಸಬೇಕು. ಯಶಸ್ವಿ ಹರಾಜುದಾರರು ಪಾದರಕ್ಷೆ ಕಾಯುವ ಹಕ್ಕನ್ನು ಯಾವುದೇ ಕಾರಣಕ್ಕೂ ಉಪ ಟೆಂಡರ್ ನೀಡತಕ್ಕದ್ದಲ್ಲ. ಈ ಷರತ್ತನ್ನು ಉಲ್ಲಂಘನೆ ಮಾಡಿದ ಪ್ರಸಂಗದಲ್ಲಿ ಯಾವುದೇ ಸೂಚನೆಯನ್ನು ನೀಡದೆ ಗುತ್ತಿಗೆಯನ್ನು ರದ್ದುಗೊಳಿಸಿ, ಇಎಂಡಿ ಮೊಬಲಗು ಮತ್ತು ಪಾವತಿಸಿರುವ ಮೊಬಲಗನ್ನು ದೇವಾಲಯಕ್ಕೆ ಮುಟ್ಟುಗೋಲು ಹಾಕಿಕೊಂಡು ಮರುಟೆಂಡರ್ ಕರೆಯಲಾಗುವುದು ಎಂದು ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಸವಿತಾ ತಿಳಿಸಿದ್ದಾರೆ.

(Visited 28 times, 1 visits today)