ಬಿಜೆಪಿ ಪಕ್ಷದಿಂದ ಸೇಡಿನ ರಾಜಕಾರಣ – ಜಿ.ಪರಮೇಶ್ವರ್ ಆರೋಪ

ಕೊರಟಗೆರೆ:

      ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ಐಟಿ ಮತ್ತು ಇಡಿ ಇಲಾಖೆಯನ್ನು ಬಳಸಿಕೊಂಡು ಕಾಂಗ್ರೇಸ್ ಪಕ್ಷದ ನಾಯಕರ ವಿರುದ್ದ ಸೇಡಿನ ರಾಜಕೀಯ ಮಾಡುತ್ತಾ ವಿರೋದ ಪಕ್ಷವನ್ನು ಹಣಿಯುವ ಪ್ರಯತ್ನ ಮಾಡುತ್ತೀದೆ ಎಂದು ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ ಆಕ್ರೋಶ ವ್ಯಕ್ತಪಡಿಸಿದರು.

      ಅವರು ಪಟ್ಟಣದ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದಲ್ಲಿ ಕಾಂಗ್ರೇಸ್ ಮತ್ತು ಜೆಡಿಎಸ್ ಪಕ್ಷದ ವತಿಯಿಂದ ಡಿ.ಕೆ.ಶಿವಕುಮಾರ ಬಂಧನವನ್ನು ವಿರೋದಿಸಿ ಗುರುವಾರ ಏರ್ಪಡಿಸಲಾಗಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು.

      ನಮ್ಮ ದೇಶದ ಜನರು ಕಾನೂನು ರೀತಿಯಲ್ಲಿ ಕೆಲಸ ನಿರ್ವಹಣೆ ಮಾಡುವಂತೆ ನರೇಂದ್ರ ಮೋದಿಗೆ ಜನಾದೇಶ ನೀಡಿದ್ದಾರೆ. ಆದರೇ ಇಲಾಖೆಗಳ ಮೂಲಕ ಪ್ರತಿಪಕ್ಷದ ನಾಯಕರನ್ನು ಹತ್ತೀಕ್ಕುವ ಕೆಲಸದಲ್ಲಿ ತೊಡಗಿದೆ. ದೇಶದ ಆರ್ಥಿಕತೆ ಕೆಳಮಟ್ಟಕ್ಕೆ ಇಳಿದಿದೆ. ಲಕ್ಷಾಂತರ ಜನರು ಇರುವ ಉದ್ಯೋಗ ಇಲ್ಲದೇ ನಿರುದ್ಯೋಗಿಗಳಾಗಿ ತಿರುಗಾಡುತ್ತೀದ್ದಾರೆ ಎಂದು ಆರೋಪ ಮಾಡಿದರು.

      ದೇಶದ ಮಾಜಿ ಹಣಕಾಸು ಸಚಿವ ಚಿಂದಂಬರ ಮತ್ತು ರಾಜ್ಯದ ಭವಿಷ್ಯದ ನಾಯಕ ಶಿವಕುಮಾರ್‍ರನ್ನು ಇಡಿ ಇಲಾಖೆಯ ಮೂಲಕ ಕಿರುಕುಳ ನೀಡಿ ಬಂದಿಸಿರುವುದು ಖಂಡನೀಯವಾಗಿದೆ. ನಮ್ಮ ದೇಶದಲ್ಲಿ ಕಾನೂನು ರೀತಿಯಲ್ಲಿ ತಪ್ಪು ಮಾಡಿದವರ ಮೇಲೆ ಕ್ರಮ ಕೈಗೊಳ್ಳುವುದು ನ್ಯಾಯಸಮ್ಮತವೇ ಹೊರತು ಸೇಡಿನ ರಾಜಕೀಯದ ಮೂಲಕ ಬಂದನ ಮಾಡಿರುವುದು ಕಾನೂನು ಬಾಹಿರವಾಗಿದೆ ಎಂದು ಹೇಳಿದರು.

      ತುಮಕೂರು ಜಿಲ್ಲಾ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಮಹಾಲಿಂಗಪ್ಪ ಮಾತನಾಡಿ ಕೇಂದ್ರ ಸರಕಾರ ಸಿಬಿಐ ಮತ್ತು ಇಡಿ ಇಲಾಖೆ ಬಳಸಿಕೊಂಡು ಬಿಜೆಪಿ ಪಕ್ಷವನ್ನು ಬಲಪಡಿಸಿಕೊಳ್ಳುವ ಪ್ರಯತ್ನ ಮಾಡುತ್ತೀವೆ. ಶಿವಕುಮಾರ್ ವಿರುದ್ದ ಅಮೀತ್‍ಷಾ ಸೇಡಿನ ರಾಜಕಾರಣ ಮಾಡಿ ಅವರ ಮೇಲೆ ಸುಳ್ಳು ಪ್ರಕರಣ ದಾಖಲಿಸುವ ಪ್ರಯತ್ನ ನಡೆಸಿ ಇಲಾಖೆಗಳ ಮೂಲಕ ಬಂದನ ಮಾಡಿಸಿದ್ದಾರೆ ಎಂದು ಆರೋಪ ಮಾಡಿದರು.

      ಪ್ರತಿಭಟನೆಯಲ್ಲಿ ಜಿಪಂ ಸದಸ್ಯ ಶಿವರಾಮಯ್ಯ, ಮಾಜಿ ಸದಸ್ಯ ಪ್ರಸನ್ನಕುಮಾರ, ತಾಪಂ ಸದಸ್ಯ ಚಿಕ್ಕನರಸಯ್ಯ, ಮಾಜಿ ಸದಸ್ಯ ಪ್ರಕಾಶ್, ರವಿಕುಮಾರ್, ಜೆಡಿಎಸ್ ಪಕ್ಷದ ಕಾರ್ಯಧ್ಯಕ್ಷ ನರಸಿಂಹರಾಜು, ಯುವ ಕಾಂಗ್ರಸ್ ಮಾಜಿ ಅಧ್ಯಕ್ಷ ನಟರಾಜು, ಪಿಎಲ್‍ಡಿ ಬ್ಯಾಂಕ್ ಅಧ್ಯಕ್ಷ ಸಿದ್ದರಾಜು, ಮುಖಂಡರಾದ ಸಂಜೀವರೆಡ್ಡಿ, ಯತ್ತಗಾನಹಳ್ಳಿ ನಾಗರಾಜು, ಕಾಕಿಮಲ್ಲಯ್ಯ, ರಂಗನಾಥ್, ಅಶ್ವತ್ಥಪ್ಪ, ವೀರಣ್ಣ ಸೇರಿದಂತೆ ಇತರರು ಇದ್ದರು.

(Visited 7 times, 1 visits today)

Related posts

Leave a Comment