ಕೊರಟಗೆರೆ: 

      ಕೊರೋನಾ ಕಾರಣಕ್ಕೆ ಆಗುತೋ…ಇಲ್ಲವೋ…ಎಂದು ಅನುಮಾನ ಮೂಡಿಸಿದ್ದ ಗ್ರಾಮ ಪಂಚಾಯಿತಿಚುನಾವಣೆ ದಿನಾಂಕ ನಿಗಧಿಯಾಗಿ ಗ್ರಾಮಗಳ ಅಭಿವೃದ್ದಿ ಮಂತ್ರಪಟಿಸುತ್ತಿರುವ ಮತದಾರಉತ್ತಮಅಭ್ಯರ್ಥಿಗಳ ಹುಡುಕಾಟದಲ್ಲಿತೊಡಗಿರುವುದುಕಂಡು ಬಂದಿತು.

      ಬಹು ನಿರೀಕ್ಷಿತ ಗ್ರಾಮಪಂಚಾಯಿತಿ ಚುನಾವಣೆಗೆ ಮೂಹೂರ್ತ ನಿಗಧಿಯಾಗಿದ್ದು, 2ಹಂತಗಳಲ್ಲಿ ಚುನಾವಣೆ ನಡೆಸಲು ರಾಜ್ಯಚುನಾವಣೆ ಆಯೋಗ ನಿರ್ಧರಿಸಿದ್ದು, ಮೊದಲ ಹಂತದಲ್ಲಿಯೇ ಕೊರಟಗೆರೆ ತಾಲ್ಲೂಕಿನ 24ಗ್ರಾಮಪಂಚಾಯಿತಿಗಳಲ್ಲಿ ಆಕಾಂಕ್ಷಿ ಅಭ್ಯರ್ಥಿಗಳು ಈಗಾಗಲೇ ಪ್ರಚಾರಕಿಳಿದು ನಮ್ಮ ಎದುರಾಳಿ ಪ್ರತಿಸ್ಫರ್ಧಿಯಾರು ಎಂಬ ಗೊಂದಲದಲ್ಲಿಯೇಚುನಾವಣೆಯ ಕಾವು ಗರಿಗೇದರಿದೆ.

      ತಾಲ್ಲೂಕಿನ4ಹೋಬಳಿಗಳಲ್ಲಿ 24 ಗ್ರಾಮಪಂಚಾಯಿತಿಗಳನ್ನ ಒಳಗೊಂಡಿದ್ದು, 175 ಮತಗಟ್ಟೆಗಳನ್ನು ಹೊಂದಿದ್ದು,ಅದರಲ್ಲಿ64,037ಪುರುಷಮತದಾರರು, 63,527ಮಹಿಳಾಮತದಾರರು ಹಾಗೂ ಇತರೆ 17ಮತದಾರರಿದ್ದು, ಹೊಸ ಸೇರ್ಪಡೆ ಪ್ರಕ್ರಿಯೆ ನಡೆಯುತ್ತಿದ್ದುಇನ್ನೂ ಹೆಚ್ಚಿನ ಮತಗಳು ಪಟ್ಟಿಯಲ್ಲಿ ಸೇರಲಿವೆ. ಮತದಾರ ಪಟ್ಟಿಯಲ್ಲಿತಮ್ಮ ಹೆಸರುಗಳನ್ನು ಸೇರಿಸಲುಆಯಾ ಗ್ರಾಮಗಳ ಬಿ.ಎಲ್.ಓ ಗಳನ್ನು ಸಂರ್ಪಕಿಸಬಹುದಾಗಿದೆ.

      ರಾಜ್ಯಚುನಾವಣಾಆಯೋಗ ಗ್ರಾಮಪಂಚಾಯಿತಿಗಳಚುನಾವಣೆಯನ್ನು ಡಿ.22 ಮತ್ತು ಡಿ.27ಕ್ಕೆ ದಿನಾಂಕವನ್ನು ನಿಗಧಿಮಾಡಿ 2ಹಂತಗಳಲ್ಲಿ ಚುನಾವಣೆ ನಡೆಸಲು ನಿರ್ಮಾನಿಸಿದೆ. ಕೊರಟಗೆರೆತಾಲ್ಲೂಕಿನಚುನಾವಣೆಯು ಮೊದಲ ಹಂತದಲ್ಲಿಯೇ ನಡೆಯಲಿದ್ದು, ಡಿ.22ರಂದು ಚುನಾವಣೆ ನಡೆಯುವುದು ಬಹುತೇಕಖಚಿತವಾಗಿದೆ.ಇಂದಿನಿಂದಲೇಚುನಾವಣೆ ನೀತಿ ಸಂಹಿತೆಯನ್ನುಜಾರಿ ಮಾಡಿ ಮೂಹೂರ್ತ ಫಿಕ್ಸ್ ಮಾಡಿದೆ.

      ಮತದಾನ ಪ್ರಭುಗಳು ನಮ್ಮಗ್ರಾಮದಅಭಿವೃದ್ದಿಗೆಉತ್ತಮ ವ್ಯಕ್ತಿಯನ್ನುಆಯ್ಕೆ ಮಾಡಬೇಕುಎಂದುಎಲ್ಲಲ್ಲಿ ಜಗಲಿಗಳ ಕಟ್ಟೆಗಳ ಮೇಲೆ ಕೂಳಿತು ಚರ್ಚೆಗಿಳಿದಿರುವುದು ಕಂಡು ಬರುತ್ತಿದೆ.ಇನ್ನೂಚುನಾವಣೆಗೆ ಸ್ಫರ್ಧಿಸುವ ಅಭ್ಯರ್ಥಿಗಳು ಜನರಲ್ಲಿ ಬೆರತು ಗ್ರಾಮಗಳ ಅಭಿವೃದ್ಧಿ ಚಿಂತನೆಗಳು ನಡೆಸುವುದರೊಂದಿಗೆ ಭರವಸೆಗಳು ನೀಡುತ್ತಿದ್ದಾರೆ.

(Visited 21 times, 1 visits today)