ಗುಬ್ಬಿ


75 ನೇ ವರ್ಷದ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಹರ್ ಘರ್ ತಿರಂಗಾ ಅಭಿಯಾನ ಯಶಸ್ವಿಗೊಳಿಸಲು ತಾಲ್ಲೂಕಿನ ಜನತೆ ದೇಶಭಕ್ತಿ ಜೊತೆ ಭಾಗಿ ಆಗುವಂತೆ ತಹಸೀಲ್ದಾರ್ ಬಿ ಆರತಿ ಅವರು ಕರೆ ನೀಡಿದರು.
ಪಟ್ಟಣದ ತಾಲೂಕು ಕಚೇರಿಯ ಕಂದಾಯ ಭವನದಲ್ಲಿ ಹಮ್ಮಿಕೊಂಡಿದ್ದ ಸ್ವಾತಂತ್ರ್ಯ ದಿನಾಚರಣೆ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು 75ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವ ಅಂಗವಾಗಿ ಈಗಾಗಲೇ ಹರ ಘರ್ ತಿರಂಗಾ ರಾಷ್ಟ್ರ ಧ್ವಜಗಳನ್ನ ಪಟ್ಟಣ ಪಂಚಾಯಿತಿ ವತಿಯಿಂದ ಎರಡು ಸಾವಿರ ಧ್ವಜಗಳನ್ನು ವಿತರಿಸಲಾಗುತ್ತಿದೆ ಎಂದರು.
ಪ್ರತಿ ಗ್ರಾಮ ಪಂಚಾಯಿತಿಗಳಿಗೆ 450 ಮತ್ತು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಶಾಲೆ, ಅಂಗನವಾಡಿ, ಆಸ್ಪತ್ರೆ ಸೇರಿ ಎಲ್ಲಾ ಕಟ್ಟಡಗಳಲ್ಲಿ ಧ್ವಜ ಹಾಕುವ ಜೊತೆಗೆ ಪ್ರತಿ ಮನೆಯ ಮೇಲೂ ರಾಷ್ಟ್ರ ಧ್ವಜ ಹಾಕುವಂತೆ ಸೂಚನೆ ಇದೆ. ಗ್ರಾಮೀಣಾ ಭಾಗದಲ್ಲಿ 487 ನಗರದಲ್ಲಿ 15 ಶಾಲೆಗಳು ಬರಲಿದ್ದು, ರಾಷ್ಟ್ರ ಧ್ವಜವನ್ನು ವಿತರಿಸಲಾಗುತ್ತಿದೆ ಎಂದು ತಿಳಿಸಿದರು.
ನಗರಸಭೆ ವತಿಯಿಂದ ಅಮೃತ ಮಹೋತ್ಸವ ಅಂಗವಾಗಿ ಸಸಿಯನ್ನು ನೆಡುವ ಕಾರ್ಯಕ್ರಮ ಆಯೋಜಿಸಲು ನಿರ್ಧಾರ ಮಾಡಲಾಗಿದೆ ಎಂದ ಅವರು ಅಮೃತ ಮಹೋತ್ಸವದ ಅಂಗವಾಗಿ ಆಗಸ್ಟ್.13 ರಿಂದ 15 ರವರೆಗೆ 3 ದಿನಗಳವರೆಗೆ ಸಾರ್ವಜನಿಕರು ತಮ್ಮ ಮನೆಗಳ ಮೇಲೆ ರಾಷ್ಟ್ರ ಧ್ವಜವನ್ನು ಹಾರಿಸಿ ರಾಷ್ಟ್ರಕ್ಕೆ ಗೌರವ ಸಲ್ಲಿಸಬೇಕೆಂದ ಅವರು ಹರ ಘರ ತಿರಂಗಾ ಕುರಿತು ಜಾಗೃತಿ ಮೂಡಿಸಲು ಆಗಸ್ಟ್ 13 ರಂದು ಹಿತರಕ್ಷಣಾ ಸಮಿತಿಯು 2500 ಶಾಲಾ ಮಕ್ಕಳು ಹಾಗೂ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಜೊತೆಗೆ ಸರ್ಕಾರಿ ನೌಕರರು ಸಹ ಪಾಲ್ಗೊಳ್ಳಲು ಸೂಚಿಸಿದ್ದು, ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಮನವಿ ಮಾಡಿದರು.
ಈ ಸಭೆಯಲ್ಲಿ ಪ. ಪಂ ಅಧ್ಯಕ್ಷ ಅಣ್ಣಪ್ಪಸ್ವಾಮಿ, ತಾಪಂ ಇಓ ಪರಮೇಶ್, ಬಿಇಓ ಸೋಮಶೇಖರ್, ವೃತ್ತ ನಿರೀಕ್ಷಕ ನಧಾಫ್, ಪ ಪಂ ಮುಖ್ಯಾಧಿಕಾರಿ ಮಂಜುಳಾದೇವಿ ಸೇರಿದಂತೆ ಎಲ್ಲಾ ತಾಲೂಕು ಮಟ್ಟದ ಅಧಿಕಾರಿಗಳು ಸಂಘ ಸಂಸ್ಥೆಗಳ ಪದಾಧಿಕಾರಿಗಳು ರಾಷ್ಟ್ರ ಅಭಿಮಾನಿಗಳು ಭಾಗವಹಿಸಿದ್ದರು.

(Visited 1 times, 1 visits today)