ಗುಬ್ಬಿ:


ತಾಲ್ಲೂಕಿನಲ್ಲಿ ನಡೆದಿರುವ 450 ಎಕರೆ ಅಕ್ರಮ ಭೂ ದಾಖಲಾತಿ ವಂಚನೆ ಬಗ್ಗೆ ಯಾರೇ ತಪ್ಪು ಮಾಡಿದ್ದರು ಸಹ ಅವರಿಗೆ ಶಿಕ್ಷೆ ಯಾಗಬೇಕಿದೆ ಮೂಲ ರೈತರಿಗೆ ಅನ್ಯಾಯ ವಾಗಲು ಬಿಡುವುದಿಲ್ಲ ಎಂದು ತಾಲೂಕು ಬಿಜೆಪಿ ಅಧ್ಯಕ್ಷ ಪಂಚಾಕ್ಷರಿ ತಿಳಿಸಿದರು.
ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು ಬಿಜೆಪಿ ಸರಕಾರ ರೈತರ ಪರವಿದ್ದು ಅವರಿಗೆ ಯಾವುದೇ ರೀತಿಯ ಅನ್ಯಾಯವಾಗಲು ಬಿಡುವುದಿಲ್ಲ ಇದರ ಬಗ್ಗೆ ಕಂದಾಯ ಇಲಾಖೆ ಹೊರತು ಪಡಿಸಿ ಬೇರೆಯವರ ಯಾವುದೇ ಸಂಸ್ಥೆಯಿಂದ ತನಿಖೆಯನ್ನು ಸರ್ಕಾರ ಮಾಡುವಂತೆ ಒತ್ತಾಯ ಮಾಡುತ್ತೇವೆ. ಈಗಾಗಲೇ ಹಲವು ಅಧಿಕಾರಿಗಳನ್ನು ಕಾನೂನಿಗೆ ಒಳಪಡಿಸಿದೆ ಇನ್ನೂ ಹಲವು ಮದ್ಯವರ್ತಿ ಗಳನ್ನು ಶಿಕ್ಷೆಗೆ ಒಳಪಡಿಸಿದ್ದು ಇದರ ಬಗ್ಗೆ ಸೂಕ್ತ ತನಿಖೆ ಮಾಡುವಂತೆ ಸರ್ಕಾರಕ್ಕೆ ನಮ್ಮ ಪಕ್ಷದಿಂದ ಒತ್ತಾಯ ಮಾಡುತ್ತೇನೆ ಎಂದು ತಿಳಿಸಿದರು.
ಮುಖಂಡ ಬೆಟ್ಟಸ್ವಾಮಿ ಮಾತನಾಡಿ ಕಾನೂನನ್ನು ಗಾಳಿಗೆ ತೂರಿರುವ ಶಾಸಕರು ಕೇವಲ ರಾಜಕೀಯಕ್ಕಾಗಿ ಹಣಕ್ಕಾಗಿ ಅಧಿಕಾರಿಗಳನ್ನು ಬಳಸಿಕೊಂಡು ತಮಗೆ ಹೇಗೆ ಬೇಕೋ ಹಾಗೆ ತಿದ್ದುಪಡಿ ಮಾಡಿಸಿರುವುದು ಹಾಗೂ ತಮ್ಮ ಹಿಂಬಾಲಕರಿಗೆ ಬಹುತೇಕ ಭಾಗದಲ್ಲಿ ಭೂಮಿಯನ್ನು ನೀಡಿದ್ದಾರೆ ಪಟ್ಟಣದಲ್ಲಿ ಇರುವಂತಹ ಕೆಲವು ಕೌನ್ಸಿಲರ್ ಗಳಿಗೂ ಸಹ ಭೂಮಿ ಕೊಡುವಂತಹ ಕೆಲಸವನ್ನು ಮಾಡಿದ್ದಾರೆ ಶಾಸಕರು ಅವರ ಭ್ರಷ್ಟಾಚಾರವನ್ನ ಮುಚ್ಚಿಹಾಕಲು ಗಾಳಿಯಲ್ಲಿ ಹಲವು ಹೆಸರುಗಳನ್ನು ತೇರಿ ಬಿಡುತ್ತಿರುವುದು ಕೂಡ ಗಮನಕ್ಕೆ ಬಂದಿದೆ ನಾನು ಸ್ವಂತ ಹಣ ಕೊಟ್ಟು ಭೂಮಿ ಖರೀದಿಸಿದ್ದರೆ ಅದನ್ನು ಸುಳ್ಳು ಪ್ರಚಾರ ಮಾಡಿಸುವಂತಹ ಘಟನೆಗಳು ಕೂಡ ನಡೆಯುತ್ತಿವೆ ನಾನೇನಾದರೂ ತಪ್ಪು ಎಸಗಿದ್ದಾರೆ ಕಾನೂನು ಕ್ರಮವನ್ನು ನನ್ನ ಮೇಲೆ ಬೇಕಾದರೆ ಕೈಗೊಳ್ಳಲಿ ಎಂದರು.
ಮುಖಂಡ ಎಸ್.ಡಿ ದಿಲೀಪ್ ಕುಮಾರ್ ಮಾತನಾಡಿ 450 ಎಕರೆ ದಾಖಲಾತಿ ವಂಚನೆ ಪ್ರಕರಣದಲ್ಲಿ ಶಾಸಕರೇ ನೇರವಾಗಿ ಭಾಗಿಯಾಗಿದ್ದು ಅವರೇ ಮೊದಲ ಆರೋಪಿಯಾಗಿದ್ದಾರೆ. ಅವರ ಹಿಂಬಾಲಕರನ್ನು ಬಿಟ್ಟು ಒಂದೇ ಸಮುದಾಯಕ್ಕೆ ಸೇರಿದ ಅವರ ಹಿಂಬಾಲಕರ ಮೂಲಕ ಭೂಮಿ ನೀಡಲು ಸ್ಕೆಚ್ ಹಾಕಿದ್ದರು. ಹಿಂದುಳಿದ ವರ್ಗದವರಿಗೆ ಭೂಮಿ ನೀಡಿದರೆ ಮತ್ತೆ ಅವರಿಂದ ಪಡೆಯಲು ಸಾಧ್ಯವಿಲ್ಲ ಎನ್ನುವ ಕಾರಣಕ್ಕೆ ಮೇಲ್ವರ್ಗದವರಿಂದಲೇ ಈ ದೊಡ್ಡ ಭ್ರಷ್ಟಾಚಾರವನ್ನ ಮಾಡಿಸಿದ್ದಾರೆ ನಮ್ಮ ಬಿಜೆಪಿ ಸರ್ಕಾರವು ಇದನ್ನು ಸೂಕ್ತ ತನಿಖೆ ಮಾಡಲು ಸಿಓಡಿ ತನಿಖೆ ಮಾಡಿಸಲು ಎಲ್ಲಾ ರೀತಿಯ ದಾಖಲಾತಿಗಳನ್ನು ಸಹ ಪಡೆಯಲಾಗುತ್ತಿದೆ.
ಇನ್ನೂ ಬಗರ್ ಹುಕ್ಕುಂ ಅಡಿಯಲ್ಲಿ ಸುಮಾರು 2000 ಎಕರೆ ಎಷ್ಟು ತಾಲೂಕಿನಲ್ಲಿ ಭೂಮಿಯನ್ನು ನೀಡುತ್ತಾರೆ ಇದರಲ್ಲಿಯೂ ಶಾಸಕರ ದೊಡ್ಡ ಭ್ರಷ್ಟಾಚಾರ ನಡೆದಿದೆ. ಅರ್ಜಿಗಳ ಹಾಕದಿದ್ದರೂ ಸಹ ಭೂಮಿಯನ್ನು ಮಂಜೂರು ಮಾಡಲಾಗಿದೆ ಇದರಲ್ಲಿ ಸರಕಾರಿ ಅಧಿಕಾರಿಗಳು, ದೊಡ್ಡ ದೊಡ್ಡ ಸಿರಿವಂತರು, ಶಾಸಕರ ಹಿಂದೆ ಮುಂದೆ ಓಡಾಡುವ ಚೇಲಾಗಳು, ಹಾಗೂ ಸ್ಥಳೀಯರಲ್ಲದ ವರೆಗೂ ಕೂಡ ಬಗರು ಹುಕ್ಕುಂ ಅಡಿಯಲ್ಲಿ ಭೂಮಿ ನೀಡುವ ಮೂಲಕ ಹತ್ತಾರು ವರ್ಷಗಳಿಂದ ಮೂಲ ರೈತರನ್ನು ಒಕ್ಕಲೆಬ್ಬಿಸುವಂತಹ ಪ್ರಯತ್ನವನ್ನು ಮಾಡಿದ್ದಾರೆ ಎಂದು ಆರೋಪಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಭೈರಪ್ಪ, ಮುಖಂಡರಾದ ಚಂದ್ರ ಶೇಖರ್ ಬಾಬು, ಕೆಎಂಎಪ್ ನಿರ್ದೇಶಕ ಚಂದ್ರಶೇಖರ್, ಬಗರ್ ಹುಕ್ಕುಂ ಸಮಿತಿಯ ಸದಸ್ಯ ಚಂದ್ರಮೌಳಿ, ಮುಖಂಡರಾದ ಎನ್.ಸಿ ಪ್ರಕಾಶ್ ನಂಜೇಗೌಡ, ತಾಲೂಕು ಕಾರ್ಯದರ್ಶಿಗಳಾದ ಯತೀಶ್, ಗಂಗಣ್ಣ, ಕಾರ್ಯ ಕುರ್ಚಿ ಸತೀಶ್, ಹೆಚ್. ಟಿ.ಭೈರಪ್ಪ, ಬಿ.ಎಸ್.ಎನ್.ಎಲ್. ಕೃಷ್ಣಮೂರ್ತಿ, ಶಿವಶಂಕರ್ ಬಾಬು, ಕಾರ್ತಿಕ್, ಸೇರಿದಂತೆ ಇನ್ನಿತರರು ಹಾಜರಿದ್ದರು.

(Visited 6 times, 1 visits today)