ಗುಬ್ಬಿ :

     ತಾಲ್ಲೂಕಿನ ಸೋಮಲಾಪುರದ ರೈತರು ಭೂಮಿಯನ್ನು ಕಳೆದುಕೊಂಡು ನೀರನ್ನು ಕಾಣದೇ ಹತಾಶರಾಗಿ ವಿಷ ಸೇವಿಸುವ ಹಂತಕ್ಕೆ ತಲುಪಿದ್ದು ವಿಷಾದನೀಯ.

      ಹೇಮಾವತಿ ಕಾಲುವೆ 15ಸಿ ಒಂದರಲ್ಲಿ ಉಪಕಾಲುವೆಗಳ ಮುಖಾಂತರ ಸುಮಾರು 10-15 ಹಳ್ಳಿಗಳಿಗೆ ಕುಡಿಯುವ ನೀರಿಗೆ ಸರಬರಾಜು ಮಾಡುವ ಈ ಕಾಲುವೆಯು ಅವೈಜ್ಞಾನಿಕ ಹಾಗೂ ಕಳಪೆ ಕಾಮಗಾರಿಯಿಂದ ಕಾಲುವೆಯ ಮೇಲ್ಭಾಗದಲ್ಲಿದ್ದ ಮಣ್ಣು ಕಾಲುವೆಗೆ ಬಿದ್ದು ಇಡೀ ಕಾಲುವೆಯು ಮುಚ್ಚಿದ್ದು ಪೈಪ್‍ಲೈನ್ ಮಾಡಿದ್ದು ಯಾವ ಪುರುಷಾರ್ಥಕ್ಕೆ ಎಂದು ಸ್ಥಳಿಯ ಮುಖಂಡರು ದೂರಿದ್ದಾರೆ.

      ಪ್ರತಿ ವರ್ಷವೂ 3-4 ಲಕ್ಷ ರೂ. ಖರ್ಚು ಮಾಡಿ ಬಿದ್ದಂತಹ ಮಣ್ಣನ್ನು ಮೇಲಕ್ಕೆ ತೆಗೆದು ಕಾಲುವೆಯನ್ನು ದುರಸ್ತಿ ಮಾಡುತ್ತಿದ್ದೇವೆ ಎಂದು ರೈತರುಗಳು ತಿಳಿಸಿದ್ದಾರೆ. ಮುಂದಿನ ದಿನಗಳಲ್ಲಿ ಕಾಲುವೆಯನ್ನು ದುರಸ್ತಿ ಮಾಡದೇ ಹೋದಲ್ಲಿ ಬೀದಿಗಿಳಿದು ಹೋರಾಟ ನಡೆಸಬೇಕಾಗುತ್ತದೆ ಎಂದು ತಿಳಿಸಿದರು.

      ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳನ್ನು ರಾಜಕೀಯ ಮುಖಂಡರುಗಳನ್ನು ಸಂಪರ್ಕಿಸಿ ಕಾಲುವೆಯನ್ನು ದುರಸ್ತಿ ಮಾಡಲು ಮನವಿ ಮಾಡಿದರು.

      ಇಲ್ಲಿಯವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಹೇಮಾವತಿ ಕಚೇರಿಯ ಮುಂದೆ ಮುಷ್ಕರ ನಡೆಸುದಾಗಿ ಗ್ರಾಮ ಪಂಚಾಯ್ತಿ ಅಧ್ಯಕ್ಷ ಕೆಂಪಯ್ಯ ತಿಳಿಸಿದರು.

(Visited 5 times, 1 visits today)