ಹುಳಿಯಾರು:

ಪಟ್ಟಣದ 4ನೇವಾರ್ಡ್ ಇಂದಿರನಗರ ಬಡಾವಣೆಯ ರಸ್ತೆಯಲ್ಲಿ ಮತ್ತು ಮನೆಯ ಮುಂಭಾಗ ಒಳಚರಂಡಿಯ ಕೊಳಚೆ ನೀರು ಮತ್ತು ಮಳೆಯ ನೀರು ನಿಂತು ಜನ ಸಂಚಾರಕ್ಕೆ ತೊಂದರೆಯಾಗುತ್ತಿದ್ದು ಕೂಡಲೆ ಸಂಬಂದಪಟ್ಟ ಅಧಿಕಾರಿಗಳು ಸರಿಪಡಿಸುವಂತೆ ಸ್ಥಳಿಯ ನಿವಾಸಿಗಳು ಒತ್ತಾಯಿಸಿದ್ದಾರೆ.
ಹುಳಿಯಾರು ಇಂಧಿರನಗರ ಬಡಾವಣೆಯ ಈ ರಸ್ತೆಯಲ್ಲಿ ಒಳಚರಂಡಿ ಮತ್ತು ಸಿಸಿರಸ್ತೆ ಕಾಮಗಾರಿಯನ್ನ ನಡೆಸಲಾಗಿದೆ. ಆದರೆ ಈ ರಸ್ತೆಯ ಅಕ್ಕಪಕ್ಕದಲ್ಲಿ ಒಳಚರಂಡಿ ಕಾಮಗಾರಿಯನ್ನ ನಡೆಸಿರುವ ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಈ ಒಳಚರಂಡಿಯಲ್ಲಿ ಹರಿಯುವ ಕೊಳಚೆ ನೀರು ಕೊನೆಗೆ ಎಲ್ಲಿಗೆ ಹೋಗಿ ಸೆರಬೇಕು ಎಂದು ದಾರಿತೊರಿಸಿಲ್ಲ.
ಅಲ್ಲದೆ ಈ ರಸ್ತೆಯಲ್ಲಿ ನಿರ್ಮಾಣವಾಗಿರುವ ಒಳಚರಂಡಿ ಕಾಮಗಾರಿಯು ಪೂರ್ತಿಗೊಳ್ಳದೆ ಸ್ವಲ್ಪಭಾಗ ಕಾಮಗಾರಿಯೆ ನಡೆದಿಲ್ಲಾ. ಪರಿಣಾಮ ನೂತನವಾಗಿ ನಿರ್ಮಾಣಗೊಂಡಿರುವ ಒಳಚರಂಡಿ ಯಿಂದ ಹರಿಯುವ ಕೊಳಚೆ ನೀರು ಕಾಮಗಾರಿ ನಡೆಯದೆ ಇರುವ ಭಾಗದ ಮನೆಗಳ ಮುಂದೆ ಮತ್ತು ತಿರುಗಾಡುವ ರಸ್ತೆಯಲ್ಲಿ ನಿಲ್ಲುತ್ತ ದುರ್ವಾಸನೆ ಬೀರುತ್ತ ಇಲ್ಲಿನ ನಿವಾಸಿಗಳಿಗೆ ಮತ್ತು ರಸ್ತೆ ಸಂಚಾರಕ್ಕೆ ತೊಂದರೆಯಾಗಿದೆ.
ಜೋತೆಗೆ ಮಳೆಗಾಲದಲ್ಲಿ ಬರುವ ಮಳೆಯ ನೀರಿಗೆ ಒಳಚರಂಡಿ ತುಂಬಿ ಹರಿಯುವ ಕೊಳಚೆ ನೀರು ಮನೆಗಳ ಮುಂದೆ ನಿಂತು ಸಾಕಷ್ಟು ತೊಂದರೆಯಾಗುತ್ತಿದೆ. ಈ ಬಗ್ಗೆ ಸಂಬಂದಪಟ್ಟ ಅಧಿಕಾರಿಗಳ ಗಮನಕ್ಕೆ ತಂದರು ಸಹಾ ಯಾವುದೆ ಪ್ರಯೋಜನವಾಗಿಲ್ಲ ಎಂದು ನಿವಾಸಿಗಳು ಆರೋಪಿಸಿದ್ದಾರೆ.
ಈಗಲಾದರು ಸಂಬಂದಪಟ್ಟ ಅಧಿಕಾರಿಗಳು ಇತ್ತ ಗಮನಹರಿಸಿ ಇಲ್ಲಿನ ಸಮಸ್ಯೆಯನ್ನ ಸರಿಪಡಿಸುವಂತೆ ಸ್ಥಳಿಯ ನಿವಾಸಿಗಳು ಮನವಿಮಾಡಿದ್ದಾರೆ.
ಹೇಳಿಕೆ:
ಈರಸ್ತೆಯಲ್ಲಿ ಉಳಿದಿರುವ ಸ್ವಲ್ಪಭಾಗದಲ್ಲಿ ಒಳಚರಂಡಿ ಕಾಮಗಾರಿಯನ್ನ ನಡೆಸಿದರೆ ಹರಿಯುವ ಕೊಳಚೆ ನೀರು ಮನೆಗಳ ಮುಂದೆ ಮತ್ತು ರಸ್ತೆಯಲ್ಲಿ ನಿಲ್ಲದೆ ಸರಾಗವಾಗಿ ಹರಿದು ಹೋಗುತ್ತದೆ. ಈ ಬಗ್ಗೆ ಪಪಂ.ಮುಖ್ಯಾಧಿಕಾರಿಗಳಿಗೆ ಹಾಗೂ ಇಂಜೀನಿಯ ರವರ ಗಮನಕ್ಕೆ ತಂದರು ಯಾವುದೆ ಪ್ರಯೋಜನವಾಗಿಲ್ಲ.
ಸಿದ್ದಿಕ್, ಪಪಂ.ಸದಸ್ಯ, ಹುಳಿಯಾರು.





