ಕೊರಟಗೆರೆ:

      ಮನೆಯಿಂದ ಹೊರಗಡೆ ಹೋಗದೇ ಕಳೆದ 3ತಿಂಗಳಿಂದ ಮನೆಯಲ್ಲಿಯೇ ವಿಶ್ರಾಂತಿ ಪಡೆಯುತ್ತೀದ್ದ 9ವರ್ಷದ ಇಬ್ಬರು ಮಕ್ಕಳಿಗೆ ಕೊರೊನಾ ಗಂಟಲು ದ್ರವ ಪರೀಕ್ಷೆಯಲ್ಲಿ ಪಾಸಿಟಿವ್ ವರದಿಯ ಆತಂಕದ ವಾತವರಣ ಕೊರಟಗೆರೆ ಅಧಿಕಾರಿಗಳ ಜೊತೆ ಜನತೆಯ ಭಯಕ್ಕೆ ಕಾರಣವಾದ ಹಿನ್ನಲೆ ಎರಡು ಗ್ರಾಮವನ್ನು ಸಿಲ್‍ಡೌನ್ ಮಾಡಲಾಗಿದೆ.

      ಕೊರಟಗೆರೆ ತಾಲೂಕಿನ ಹೊಳವನಹಳ್ಳಿ ಹೋಬಳಿ ಕ್ಯಾಮೇನಹಳ್ಳಿ ಗ್ರಾಪಂ ವ್ಯಾಪ್ತಿಯ ಶಕುನಿತಿಮ್ಮನಹಳ್ಳಿ ಗ್ರಾಮದ 9ವರ್ಷ ಹೆಣ್ಣುಮಗು ಮತ್ತು ಚನ್ನರಾಯನದುರ್ಗ ಹೋಬಳಿ ತೋವಿನಕೆರೆ ಗ್ರಾಪಂ ವ್ಯಾಪ್ತಿಯ ದೇವರಹಳ್ಳಿಯ 9ವರ್ಷದ ಮಗುವಿನ ಗಂಟಲು ದ್ರವ ಪರೀಕ್ಷೆ 25ರಂದು ನಡೆದಿದ್ದು ಜೂ.28ರಂದು ಕೊರೊನಾ ಪಾಸಿಟಿವ್ ವರದಿ ಬಂದಿದೆ.

      ದೇವರಹಳ್ಳಿಯ ಮಗುವಿನ ಪ್ರಥಮ ಸಂಪರ್ಕದ 12ಜನ ಮತ್ತು ಶಕುನಿತಿಮ್ಮನಹಳ್ಳಿ ಮಗುವಿನ ಪ್ರಥಮ ಸಂಪರ್ಕದ 16ಜನರ ಗಂಟಲು ಪರೀಕ್ಷೆ ನಡೆಸಿ ರೆಡ್ಡಿಕಟ್ಟೆ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಸ್ಥಾನಿಕ ಕ್ವಾರಂಟೈನ್ ಮಾಡಲಾಗಿದೆ. ಇನ್ನೂಳಿದ ದ್ವಿತೀಯ ಸಂಪರ್ಕ ಸುಮಾರು 50ಜನರನ್ನು ಅವರ ಮನೆಯಲ್ಲಿಯೇ ಹೋಂ ಕ್ವಾರಂಟೈನ್ ಮಾಡಲಾಗಿದೆ.

      ಪ್ರಯಾಣದ ಮಾಹಿತಿ ಇಲ್ಲದಿರುವ ಪರಿಣಾಮ ಅಧಿಕಾರಿಗಳ ಜೊತೆ ಸ್ಥಳೀಯರಿಗೆ ಭಯದ ಆತಂಕ ಎದುರಾಗಿದೆ. ಮನೆಯಲ್ಲಿಯೇ ಇದ್ದಂತಹ ಪುಟಾಣಿ ಮಕ್ಕಳಿಗೆ ಜ್ವರ ಬಂದಿರುವ ಹಿನ್ನಲೆಯಲ್ಲಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ ನಂತರ ಕೊರಟಗೆರೆ ಸರಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ವೈದ್ಯರ ಪರೀಕ್ಷೆಯ ನಂತರ ಇಬ್ಬರು ಮಕ್ಕಳಿಗೂ ಪಾಸಿಟಿವ್ ವರದಿ ಬಂದಿದೆ.

      ತೋವಿನೆರೆ ಸಮೀಪದ ದೇವರಹಳ್ಳಿ ಮತ್ತು ಕ್ಯಾಮೇನಹಳ್ಳಿಯ ಶಕುನಿತಿಮ್ಮನಹಳ್ಳಿ ಸಂಪರ್ಕ ಕಲ್ಪಿಸುವ ರಸ್ತೆಯನ್ನು ಸಿಲ್‍ಡೌನ್ ಮಾಡಲಾಗಿದೆ. ಸ್ಥಳಕ್ಕೆ ಮಧುಗಿರಿ ಎಸಿ ಡಾ.ನಂದಿನಿದೇವಿ, ಕೊರಟಗೆರೆ ತಹಶೀಲ್ದಾರ್, ಸಿಪಿಐ ನದಾಫ್, ಟಿಎಚ್‍ಓ ವಿಜಯಕುಮಾರ್, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆ ಬೇಟಿ ನೀಡಿ ಪರಿಶೀಲನೆ ನಡೆಸಿ ಮುಂಜಾಗ್ರತಾ ಕ್ರಮ ಕೈಗೊಂಡಿದ್ದಾರೆ.

(Visited 110 times, 1 visits today)