ಕೊರಟಗೆರೆ:

      ಪ್ರತಿನಿತ್ಯ ದುಡಿದು ಜೀವನ ಸಾಗಿಸಲು ಕೈಲಾಗದ ವಯಸ್ಸು. ಕೈಕಾಲು ಇಲ್ಲದೇ ಕಣ್ಣು-ಕಿವಿ ಕೇಳಿಸದಿರುವ ವಿಶೇಷ ಚೇತನರ ಬದುಕು ಬೀದಿಪಾಲು. ಮಕ್ಕಳ ಆಸರೇ ಇಲ್ಲದಿರುವ ಹಿರಿಯ ನಾಗರೀಕರ 3 ಸಾವಿರಕ್ಕೂ ಹೆಚ್ಚು ಬಡಜನತೆಗೆ ಸರಕಾರದ ಪಿಂಚಣಿ ಮತ್ತು ಮಾಶಾಸನ 6 ತಿಂಗಳಿಂದ ಮರೀಚಿಕೆಯಾಗಿ ಅಂಚೆ ಇಲಾಖೆ ಮತ್ತು ಉಪಖಜಾನೆಗೆ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಕಲ್ಪತರು ನಾಡು ಕೊರಟಗೆರೆ ತಾಲೂಕು ಹೊಳವನಹಳ್ಳಿ ಹೋಬಳಿ ವ್ಯಾಪ್ತಿಯ 8 ಅಂಚೆ ಇಲಾಖೆ ವ್ಯಾಪ್ತಿಯ 80 ಗ್ರಾಮದ 5500 ಕ್ಕೂ ಹೆಚ್ಚು ಬಡಜನರಿಗೆ ಪ್ರತಿ ತಿಂಗಳು ಕೇಂದ್ರ ಮತ್ತು ರಾಜ್ಯ ಸರಕಾರದಿಂದ ರಾಷ್ಟ್ರೀಯ ಕುಟುಂಬ, ಅಂತ್ಯ ಸಂಸ್ಕಾರ, ಸಂಧ್ಯಾ ಸುರಕ್ಷಾ, ಇಂದಿರಾಗಾಂಧಿ ರಾಷ್ಟ್ರೀಯ ವೃದ್ಧಾಪ್ಯ, ನಿರ್ಗತಿಕ ವಿಧವಾ, ವಿಶೇಷ ಚೇತನ, ಮನಸ್ವಿನಿ ಯೋಜನೆಯಡಿ 45 ಲಕ್ಷಕ್ಕೂ ಅಧಿಕ ಪಿಂಚಣಿ ಹಣ ಬರಲಿದೆ.

      ಕೊರಟಗೆರೆ ಉಪಖಜಾನೆಯಿಂದ ಪ್ರತಿ ತಿಂಗಳು 20 ರೊಳಗೆ ಕೊರಟಗೆರೆಯ ಎಲ್ಲಾ ಅಂಚೆ ಇಲಾಖೆಗೆ ಬಡವರ ಹಣ ವರ್ಗಾವಣೆ ಆಗಲಿದೆ. ಅಂಚೆ ಇಲಾಖೆಗೆ ವರ್ಗಾವಣೆ ಆಗಿರುವ ಮಾಶಾಸನ ಮತ್ತು ಪಿಂಚಣಿ ಹಣ ಎಲ್ಲಿಗೆ ಹೋಗಿದೆ. ಹೊಳವನಹಳ್ಳಿ, ಅರಸಾಪುರ, ಕೋಡ್ಲಹಳ್ಳಿ, ಬಿ.ಡಿ.ಪುರ, ಅಕ್ಕಿರಾಂಪುರ, ಚಿಕ್ಕನಹಳ್ಳಿ, ಕ್ಯಾಶವಾರ, ಸೋಂಪುರ, ತೋಗರಿಘಟ್ಟ ಅಂಚೆ ಕಚೇರಿಯ ಶಾಖೆಯಲ್ಲಿ 6 ತಿಂಗಳ ಹಣ ನೀಡದಿರಲು ಕಾರಣವೇನು ಎಂಬುದೇ ಯಕ್ಷಪ್ರಶ್ನೆಯಾಗಿದೆ.

      ಬಡವರ ರಕ್ಷಣೆಗಾಗಿ ಸರಕಾರ ವಿತರಣೆ ಮಾಡುವ ಪಿಂಚಣಿ ಹಣ ವರ್ಗಾವಣೆ ಮಾಡುವ ಉಪಖಜಾನೆ ಮತ್ತು ಅಂಚೆ ಇಲಾಖೆಯ ಅಧಿಕಾರಿಗಳ ನಡುವೆ ಸಮನ್ವಯ ಕೊರತೆಯಿದೆ. ಬಡವರ ಕೆಲಸ ಮಾಡಬೇಕಾದ ಅಧಿಕಾರಿ ವರ್ಗದ ಬಳಿ ಪಿಂಚಣಿದಾರರ ಅಂಕಿಅಂಶದ ಮಾಹಿತಿ ಯೇ ಇಲ್ವಂತೆ. ಮಾಹಿತಿ ಕೇಳಿದರೇ ಹೊಳವನಹಳ್ಳಿ-ಕೊರಟಗೆರೆಯಿಂದ ತುಮಕೂರಿಗೆ ಹೋಗಿ ಎನ್ನುವಂತಹ ಉತ್ತರ ಪ್ರತಿಯೊಬ್ಬ ಅಧಿಕಾರಿಗಳ ಬಳಿಯು ಬಹುಬೇಗ ಸಿಗಲಿದೆ.

ಕಮಿಷನ್ ನೀಡಿದರೇ ಮಾತ್ರ ಪಿಂಚಣಿ:

      ಕೇಂದ್ರ ಮತ್ತು ರಾಜ್ಯ ಸರಕಾರ ಕೈಕಾಲು ಇಲ್ಲದ ವಿಶೇಷ ಚೇತನ ಹಾಗೂ ವಯಸ್ಸಾದ ಹಿರಿಯ ನಾಗರೀಕರ ರಕ್ಷಣೆಗಾಗಿ ನೀಡುವ 500 ರೂ 30 ರೂ ಮತ್ತು 1 ಸಾವಿರಕ್ಕೂ 50 ರೂ ಕಮಿಷನ್ ನೀಡಬೇಕಾಗಿದೆ. ಕಮಿಷನ್ ವಿರುದ್ಧವಾಗಿ ಮಾತನಾಡಿದರೇ ಮನೆ ಬಾಗಿಲು ಹಾಕಿದೆ. ಗ್ರಾಮದಲ್ಲಿ ವಾಸವಿಲ್ಲ ಎಂಬ ಗುರುತರಹದ ಕಾರಣ ಬರೆದು ಪಿಂಚಣಿ ಹಣ ಸರಕಾರಕ್ಕೆ ಕಳುಹಿಸುವ ಅಂಚೆ ಇಲಾಖೆಯ ಪಿಂಚಣಿ ಹಣ ವಿತರಿಸುವ ಸಾವಿರಾರು ಅರ್ಜಿಗಳು ಕೊರಟಗೆರೆ ಉಪಖಜಾನೆಯಲ್ಲಿ ಶೇಖರಣೆಯಾಗಿವೆ.

(Visited 8 times, 1 visits today)