ಕೊರಟಗೆರೆ : 

      ರೈತರ ಅಡಿಕೆ ತೋಟಕ್ಕೆ ರಾತ್ರೋರಾತ್ರಿ ಲಗ್ಗೆಯಿಟ್ಟು 2ಕ್ವಿಂಟಲ್‍ಗೂ ಅಧಿಕ ಅಡಿಕೆ ಗೊನೆಗಳನ್ನೇ ಕಳ್ಳತನ ಮಾಡಿದ್ದ 6ಜನ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಕೊರಟಗೆರೆ ಸಿಪಿಐ ನಧಾಪ್ ಮತ್ತು ಪಿಎಸೈ ಮುತ್ತುರಾಜು ನೇತೃತ್ವದ ಪೊಲೀಸರ ತಂಡ ಶುಕ್ರವಾರ ಯಶಸ್ವಿ ಆಗಿದ್ದಾರೆ.

      ಕೊರಟಗೆರೆ ತಾಲೂಕು ಚನ್ನರಾಯನದುರ್ಗ ಹೋಬಳಿ ಜೆಟ್ಟಿಅಗ್ರಹಾರ ಗ್ರಾಪಂ ವ್ಯಾಪ್ತಿಯ ಥರಟಿ ಗ್ರಾಮದ ರೈತ ಗೋವಿಂದಪ್ಪನ ಅಡಿಕೆ ತೋಟದಲ್ಲಿ ಡಿ.22ರಂದು ಮಧ್ಯರಾತ್ರಿ 2ಕ್ವಿಂಟಲ್‍ನಷ್ಟು ಅಡಿಕೆ ಗೊನೆಗಳನ್ನು 6ಜನ ಕಳ್ಳರ ತಂಡ ಕಳ್ಳತನ ಮಾಡಿಕೊಂಡು ಪರಾರಿ ಆಗಿರುವ ಬಗ್ಗೆ ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

      ಪ್ರಕರಣದ ಪತ್ತೆಗೆ ತುಮಕೂರು ಎಸ್ಪಿ ಡಾ.ಕೋನವಂಶಿಕೃಷ್ಣ, ಹೆಚ್ಚುವರಿ ಎಸ್ಪಿ ಉದೇಶ್, ಮಧುಗಿರಿ ಡಿವೈಎಸ್ಪಿ ರಾಮಕೃಷ್ಣ ಮಾರ್ಗದರ್ಶನದಲ್ಲಿ ಕೊರಟಗೆರೆ ಸಿಪಿಐ ನಧಾಪ್, ಪಿಎಸೈ ಮುತ್ತುರಾಜು ನೇತೃತ್ವದ ವಿಶೇಷ ತಂಡವು 6ಜನ ಆರೋಪಿಗಳನ್ನು ಬೈರೇನಹಳ್ಳಿ ಮಧ್ಯದ ಅಂಗಡಿಯಲ್ಲಿ ವಶಕ್ಕೆ ಪಡೆದಿದ್ದಾರೆ. ಚಿಕ್ಕನಹಳ್ಳಿಯ ರವಿಕುಮಾರ, ವೆಂಕಟೇಶ್, ನಾರಾಯಣಸ್ವಾಮಿ, ಅರಸಾಪುರದ ಅಹಮ್ಮದ್ ಅಲಿಸಾಬ್, ಕುಪ್ಪೂರಿನ ನಾಗೇಶ್, ಕೆಂಚರಾಯ ಎಂಬ 6ಜನ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ. ಕೊರಟಗೆರೆ ಪಿಎಸೈ ಮುತ್ತುರಾಜು, ಸಿಬ್ಬಂದಿಗಳಾದ ಮಂಜುನಾಥ, ಸಿದ್ದಲಿಂಗಪ್ರಸನ್ನ, ವೆಂಕಟೇಶ್, ಚನ್ನಮಲ್ಲಿಕಾರ್ಜುನ, ರಾಜಶೇಖರ್, ಸೋಮನಾಥ, ಪ್ರಶಾಂತ, ವಿಷ್ಣುಕದಂಬ, ರಂಗನಾಥ ತಂಡವನ್ನು ತುಮಕೂರು ಎಸ್ಪಿ ಅಭಿನಂದಿಸಿದ್ದಾರೆ.

 

(Visited 33 times, 1 visits today)