ಕೊರಟಗೆರೆ:

     ವಾಹನ ಚಾಲಕರು ಕಡ್ಡಾಯವಾಗಿ ರಸ್ತೆ ನಿಯಮ ಪಾಲಿಸುವುದರ ಮೂಲಕ ರಸ್ತೆ ಅಪಘಾತವನ್ನು ತಡೆಗಟ್ಟಿ ದೇವರು ಕೊಟ್ಟಿರುವ ಅಮೂಲ್ಯವಾದ ಜೀವ ರಕ್ಷಿಸಿಕೊಳ್ಳಿ ಎಂದು ಎ.ಎಸ್.ಐ ಯೋಗೇಶ್ ತಿಳಿಸಿದರು.

      ಪಟ್ಟಣದ ಎಸ್.ಎಸ್.ಆರ್ ಸರ್ಕಲ್ ನ ಬಸ್ಸ್ ನಿಲ್ದಾಣದಲ್ಲಿ ಗುರುವಾರ ನೂರಾರು ಆಟೋ ಚಾಲಕರು, ದ್ವಿಚಕ್ರ ವಾಹನ ಸವಾರು ಮತ್ತು ಶಾಲಾ-ಕಾಲೇಜು ವಿದ್ಯಾರ್ಥಿಗಳ ಒಂದೆಡೆ ಸೇರಿಸಿ ರಸ್ತೆ ಸುರಕ್ಷಾ ಸಪ್ತಾಹದ ಬಗ್ಗೆ ಅರಿವು ಮೂಡಿಸಿ ಮಾತನಾಡಿದರು.

      ವಾಹನ ಚಾಲಕ ನಮ್ಮ ಪಾಲಿನ ದೇವರು. ಶ್ರೀಕೃಷ್ಣ ರಥವನ್ನು ಮುನ್ನಡಿಸಿದಂತೆ ತಾವು ವಾಹನವನ್ನು ಚಲಾಯಿಸುತ್ತೀರಿ. ಕಡ್ಡಾಯವಾಗಿ ವಾಹನ ಚಾಲನಾ ಪತ್ರವನ್ನು ಪಡೆದುಕೊಂಡು ಚಲಾಯಿ ಸಬೇಕು. ಚಾಲನಾ ಪರವಾನಿಗೆ ಇಲ್ಲದೆ ಹಾಗೂ ಅಪ್ರಾಪ್ತ ಬಾಲಕರು ವಾಹನ ಚಾಲನೆ ಮಾಡುವುದು ಕಾನೂ ನು ಅಪರಾಧ ವಾಗಿದೆ. ವಾಹನಗಳಿಗೆ ಖಡ್ಡಾಯವಾಗಿ ವಿಮಾಪಾಲಿಸಿ ತಮ್ಮ ಕುಟುಂಬಗಳನ್ನು ರಕ್ಷಿಸಿ ಕೊಳ್ಳಲು ಹೆಚ್ಚಿನ ಪ್ರಾಮುಖ್ಯತೆ ನೀಡಬೇಕು ಎಂದು ಹೇಳಿದರು.

      ಅನಿರೀಕ್ಷಿತವಾಗಿ ಅಪಘಾತ ಸಂಭವಿಸಿದರೆ ಯಾವುದೆ ತೊಂದರೆ ಇಲ್ಲ. ಸಾರಿಗೆ ಇಲಾಖೆಯ ಸಂಚಾರಿ ನಿಯಮಗಳನ್ನು ಚಾಚು ತಪ್ಪದೆ ಪಾಲಿಸಿದರೆ ಅಪಘಾತ ಸಂಭವಿಸವುದು ಅತೀ ವಿರಳ. ಅನಾವಶ್ಯಕವಾಗಿ ಅವಸರ ಮಾಡಿ ಮುಂದಿನ ವಾಹವನ್ನು ಹಿಂದಕ್ಕಲು ಹೋಗಿ ಅಪಘಾತ ಆಗುತ್ತದೆ. ತುಸು ನಿರ್ಲಕ್ಷ್ಯತೆವಹಿಸಿದರೆ ಮತ್ತೊಬ್ಬರ ಜೀವ ತೆಗೆದುಕೊಳ್ಳುತ್ತದೆ ಎಂಬುವುದು ಎಲ್ಲರಿಗೂ ಅರಿವು ಇರಬೇಕು ಎಂದು ಪ.ಪಂ ಸದಸ್ಯ ಓಬಳರಾಜು ತಿಳಿಸಿದರು.

     ಇದೇ ಸಂದರ್ಭದಲ್ಲಿ ಪ.ಪಂ ಸದಸ್ಯ ಲಕ್ಷ್ಮೀ ನಾರಾಯಣ, ಆಟೋ ಚಾಲಕರು, ಟ್ಯಾಕ್ಸಿ ಚಾಲಕರು, ವಿದ್ಯಾರ್ಥಿಗಳು ಸೇರಿದಂತೆ ಸಾರ್ವಜನಿಕರು ಭಾಗವಹಿಸಿದರು.

(Visited 13 times, 1 visits today)