ಕೊರಟಗೆರೆ :

      ಪರಿಸರ ಹಾನಿ ಹಾಗೂ ಭೂಮಾಲಿನ್ಯವನ್ನ ತಪ್ಪಿಸಲು ಕಸ ಸಂಗ್ರಹಣೆ ಕಾರ್ಯ ಪ್ರಾರಂಭಿಸಿದ್ದು, ಗ್ರಾಮವನ್ನ ಸ್ವಚ್ಛವಾಗಿ 

      ತಾಲೂಕಿನ ಹೊಳವನಹಳ್ಳಿ ಗ್ರಾಪಂಯಲ್ಲಿ ಸ್ವಚ್ಛಮೇವ ಜಯತೇ ಅಂದೋಲನದಡಿ ಕಸವನ್ನ ಸಂಗ್ರಹಣೆ ಮಾಡಲು ಕಸದ ಬುಟ್ಟಿಯನ್ನ ಹಂಚಿಕೆ ಮಾಡಿ ಮಾತನಾಡಿದರು.

      ನಮ್ಮ ಗ್ರಾಪಂಯನ್ನ ಸ್ವಚ್ಛಮೇವ ಜಯತೇ ಅಂದೋಲನದಲ್ಲಿ ಘನ ತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣವಾಗಿದ್ದು, ಪ್ರತಿ ಮನೆಗಳಿಂದ ಕಸ ಸಂಗ್ರಹಣೆ ಆರಂಭಿಸಲಾಗಿದ್ದು. ಗ್ರಾಮದ ಪ್ರತಿ ಮನೆಗೂ ತೆರಳಿ ಕಸ ವಿಂಗಡಣೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲಾಗಿದೆ. ಹೊಳವನಹಳ್ಳಿ ಗ್ರಾಮದ ಪ್ರತಿಯೊಂದು ವಾರ್ಡ್‍ಗಳಿಗೂ ಹಸಿ ಹಾಗೂ ಒಣ ಕಸವನ್ನ ತೆಗೆದುಕೊಳ್ಳಲು ವಾಹನ ಬರುತ್ತದೆ ವಾಹನ ಬಂದಾಗ ಆ ಕಸವನ್ನ ವಾಹನವನ್ನ ಹಾಕಬೇಕು ಎಂದು ತಿಳಿಸಿದರು.
ಗ್ರಾಪಂ ಮಾಜಿ ಸದಸ್ಯ ಜಯರಾಮು ಮಾತನಾಡಿ ನಮ್ಮ ಹೊಳವನಹಳ್ಳಿ ಗ್ರಾಮ ಸುಮಾರು ಹತ್ತು ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಹೊಂದಿದ್ದು, ಗ್ರಾಪಂಗೆ ಬರುವ ಅನುದಾನ ಕಡಿಮೆಯಾಗಿದ್ದು ಹೊಳವನಹಳ್ಳಿ ಅಭಿವೃದ್ಧಿ ಕುಂಠಿತವಾಗಿದೆ. ಗ್ರಾಪಂಯನ್ನ ಮೇಲ್ದಾರ್ಜೆಗೆ ಏರಿಸುವ ಮೂಲಕ ಇಲ್ಲಿನ ಜನಸಂಖ್ಯೆಯ ಅನುಗುಣವಾಗಿ ಅನುದಾನ ಬಂದರೆ ವಾರ್ಡ್‍ಗಳ ಅಭಿವೃದ್ಧಿ ಸಾಧ್ಯ ಎಂದು ಹೇಳಿದರು.

      ಗ್ರಾಪಂ ಸದಸ್ಯ ರಾಮಕೃಷ್ಣಯ್ಯ ಮಾತನಾಡಿ ಸ್ವಚ್ಛಮೇವ ಜಯತೇ ಅಂದೋಲನದಡಿ ಗ್ರಾಪಂಯಲ್ಲಿ ಹಸಿ ಮತ್ತು ಒಣ ಕಸವನ್ನ ಭೇರ್ಪಡಿಸುವ ಕಾರ್ಯಕ್ಕೆ ಚಾಲನೆ ನೀಡಿದ್ದು. ಸಾರ್ವಜನಿಕರು ಎಲ್ಲೆಂದರಲ್ಲಿ ಕಸವನ್ನ ಎಸೆಯುತ್ತಿದ್ದರಿಂದ ಆಗುತ್ತಿದ್ದ ಪರಿಸರ ಹಾಗೂ ಭೂಮಾಲಿನ್ಯ ತಪ್ಪಿಸಲು ಸರಕಾರ ಈ ಯೋಜನೆಯನ್ನ ಜಾರಿ ಮಾಡಿದ್ದು, ಇದರ ಉಪಯೋಗವನ್ನ ಪ್ರತಿಯೊಬ್ಬ ನಾಗರಿಕನೂ ಪಡೆಯಬೇಕು ಎಂದು ಹೇಳಿದರು.

      ಇದೇ ವೇಳೆ ಗ್ರಾಪಂ ಸದಸ್ಯ ಶಂಶಾದ್ ಅಲಿ, ಮುಖಂಡರಾದ ಪುಟ್ಟರಾಜು, ಮಹೇಶ್, ಗ್ರಾಪಂ ನೌಕರರಾದ ನರೇಂದ್ರ, ಮಡಿಯಪ್ಪ, ಹನುಮಂತರಾಯಪ್ಪ, ಆಶ್ವಥ್ ಸೇರಿದಂತೆ ಇತರರು ಇದ್ದರು.

(Visited 76 times, 1 visits today)