ತುಮಕೂರು:

      ಕೊಬ್ಬರಿಗೆ ಕನಿಷ್ಠ 20 ಸಾವಿರ ಘೋಷಿಸಬೇಕು,ನೀರಾ ಇಳಿಸಲು ಅನುಮತಿ ನೀಡಬೇಕು,ತೆಂಗಿನ ಮೌಲ್ಯವರ್ಧಿತ ಉತ್ಪನಗಳ ಮಾರಾಟಕ್ಕೆ ಹೆಚ್ಚಿನ ಉತ್ತೇಜನ ನೀಡಬೇಕೆಂದು ಆಗ್ರಹಿಸಿ ಇಂದು ಟೌನಾಹಾಲ್ ವೃತ್ತದಲ್ಲಿ ಮಾಜಿ ಸಂಸದ ಮುದ್ದಹನುಮೇಗೌಡ ನೇತೃತ್ವದಲ್ಲಿ ಪ್ರತಿಭಟನಾ ಧರಣಿ ನಡೆಸಿ,ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

      ಮಾಜಿ ಶಾಸಕರಾದ ಕೆ.ಎನ್.ರಾಜಣ್ಣ,ಡಾ.ಎಸ್.ರಫೀಕ್ ಅಹಮದ್,ಅರೆ ಶಂಕರ ಮಠದ ಶ್ರೀಚೈತನ್ಯ ಸಿದ್ದರಾಮೇಶ್ವರ ಸ್ವಾಮೀಜಿ ಸೇರಿದಂತೆ ಹಲವರು ಮುಖಂಡರು ಭಾಗವಹಿಸಿದ್ದ ಪ್ರತಿಭಟನೆಗೆ ಕರ್ನಾಟಕ ಪ್ರಾಂತ ರೈತ ಸಂಘ, ಹಲವು ಸಂಘ ಸಂಸ್ಥೆಗಳ ಬೆಂಬಲ ವ್ಯಕ್ತಪಡಿಸಿ ಧರಣಿಯಲ್ಲಿ ಪಾಲ್ಗೊಂಡಿದ್ದರು.
ಧರಣಿ ನಿರಂತರನ್ನು ಉದ್ದೇಶಿಸಿ ಮಾತನಾಡಿದ ಮಾಜಿ ಶಾಸಕರಾದ ಕೆ.ಎನ್.ರಾಜಣ್ಣ, ತೆಂಗು ಬೆಳೆಗಾರರು ಇಂದು ಅತ್ಯಂತ ಸಂಕಷ್ಟದಲ್ಲಿದೆ.ಕೇಂದ್ರ ಸರಕಾರ ತೆಂಗಿಗೆ 9200 ರೂ ಬೆಂಬಲ ಬೆಲೆ ಘೋಷಿಸಿದೆ. ಆದರೆ ಮಾರುಕಟ್ಟೆಯಲ್ಲಿ ಒಂದು ಕ್ವಿಂಟಾಲ್ ಕೊಬ್ಬರಿ 9600 ರೂಗಳಿಗೆ ಮಾರಾಟವಾಗುವ ಮೂಲಕ ವ್ಯಾಪಾರಸ್ತರು ಹಾವು ಸಾಯಬಾರದು, ಕೊಲು ಮುರಿಯಬಾರದು ಎಂಬಂತಹ ನೀತಿ ಅನುಸರಿಸುತ್ತಿದ್ದಾರೆ.

      ಕೊಬ್ಬರಿ ಕನಿಷ್ಠ 20 ಸಾವಿರ ಬೆಂಬಲ ಬೆಲೆಯನ್ನು ಕೇಂದ್ರ ಸರಕಾರ ನಿಗದಿ ಮಾಡಬೇಕು, ಹಾಗೆಯೇ ಈ ನಿಟ್ಟಿನಲ್ಲಿ ರಾಜ್ಯ,ಕೇಂದ್ರ ಸರಕಾರಕ್ಕೆ ಶಿಫಾರಸ್ಸು ಕಳುಹಿಸಿ ರಾಜ್ಯದ ತೆಂಗು ಬೆಳೆಗಾರರ ಹಿತ ಕಾಯುಬೇಕು. ಒಂದು ವೇಳೆ ಕೇಂದ್ರ ಸರಕಾರ ತೆಂಗು ಬೆಳೆಗಾರರ ಸಂಕಷ್ಟಕ್ಕೆ ಸ್ಪಂದಿಸದಿದ್ದಲ್ಲಿ ರಾಜ್ಯದ ಎಲ್ಲಾ ತೆಂಗು ಬೆಳೆಗಾರರೊಂದಿಗೆ ಸೇರಿ ಉಗ್ರ ಹೋರಾಟ ನಡೆಸಲಾಗುವುದು ಎಂದರು.

      ಪ್ರತಿಭಟನಾ ಧರಣಿಯ ನೇತೃತ್ವ ವಹಿಸಿದ್ದ ಮಾಜಿ ಸಂಸದ ಎಸ್.ಪಿ.ಮುದ್ದಹನುಮೇಗೌಡ ಮಾತನಾಡಿ,ಭಾರತದ ತೆಂಗು ಕ್ಷೇತ್ರಕ್ಕೆ ಕರ್ನಾಟಕದ ಕೊಡುಗೆ ಅಪಾರ.ತುಮಕೂರು ಜಿಲ್ಲೆಯ 1.42 ಲಕ್ಷ ಹೆಕ್ಟೇರ್ನ ಲ್ಲಿ ತೆಂಗು ಬೆಳೆಯಲಾಗುತ್ತದೆ.ಕೇಂದ್ರ ಕೃಷಿ ಬೆಲೆ ನೀತಿ ಆಯೋಗವೇ ಒಂದು ಕ್ವಿಂಟಾಲ್ ತೆಂಗು ಬೆಳೆಯಲು 11334 ರೂ ಖರ್ಚಾಗುತ್ತದೆ ಎಂದು ವರದಿ ನೀಡಿದ್ದರೂ, ಕೇಂದ್ರ ಮಾತ್ರ ಬೆಂಬಲ ಬೆಲೆಯನ್ನು 9200 ರೂಗಳಿಂದ ಹೆಚ್ಚಳ ಮಾಡಿಲ್ಲ.
ಇದನ್ನೇ ನೆಪವಾಗಿಟ್ಟುಕೊಂಡು ವ್ಯಾಪಾರಸ್ಥರು ತೆಂಗು ಬೆಳೆಗಾರರನ್ನು ಶೋಷಣೆ ಮಾಡುತ್ತಿದ್ದು, ಕೇಂದ್ರ ಸರಕಾರ ಇತ್ತ ಗಮನಹರಿಸಿ, ಕೊಬ್ಬರಿ ಬೆಳೆಗಾರರ ಸಂಕಷ್ಟಕ್ಕೆ ಸ್ಪಂದಿಸಬೇಕೆಂದರು.

      ತೆಂಗಿನ ಉಪ ಉತ್ಪನ್ನಗಳಾದ ನೀರಾವನ್ನು ಇಳಿಸಲು ಕಾನೂನು ಬದ್ದ ಅವಕಾಶವನ್ನು ರೈತರಿಗೆ ನೀಡಬೇಕು.ಅಲ್ಲದೆ ತೆಂಗಿನ ಉತ್ಪನ್ನಗಳ ಮೌಲ್ಯ ವರ್ಧನೆಗೆ ಹೆಚ್ಚಿನ ಅವಕಾಶ ಕಲ್ಪಿಸಬೇಕು.

      ಕರ್ನಾಟಕದ ತೆಂಗು ಅದರಲ್ಲಿಯೂ ಮಧ್ಯಕರ್ನಾಟಕ ಜಿಗುಟು ಕೊಬ್ಬರಿಗೆ ಜಿಯೋ ಟ್ಯಾಗ ಮಾಡುವ ಮೂಲಕ ಪ್ರಪಂಚದಾದ್ಯಂತ ಬ್ರಾಂಡ್ಯ ವ್ಯೂಲು ದೊರೆಯುವಂತೆ ಕೇಂದ್ರ ಸರಕಾರ ಮಾಡಬೇಕು ಎಂದು ಮಾಜಿ ಸಂಸದ ಎಸ್.ಪಿ.ಮುದ್ದಹನುಮೇಗೌಡ ಒತ್ತಾಯಿಸಿದರು.

      ಪ್ರತಿಭಟನಾಧರಣಿಯಲ್ಲಿ ಶ್ರೀ ಹನುಮಂತನಾಥ ಸ್ವಾಮೀಜಿ, ಮುಖಂಡರಾದ ಕೆ.ಎ.ದೇವರಾಜು, ಚಿಕ್ಕವೆಂಕಟಯ್ಯ, ಜಯರಾಮ್, ರಾಯಸಂದ್ರ ರವಿಕುಮಾರ್, ಕೆಸ್ತೂರು ಗಂಗಾಧರಯ್ಯ, ಮೇಯರ್ ಫರೀಧಾ ಬೇಗಂ, ಪಾಲಿಕೆ ಸದಸ್ಯರಾದ ನಯಾಜ್,ಮೆಹಬೂಬ್, ವಿಜಯಕುಮಾರ್, ಕಾಮರಾಜು, ಚೌದ್ರಿರಂಗಪ್ಪ, ಜಯರಾಮ್, ಆಟೋರಾಜು,ಮಲ್ಲೇಶ್, ಸರೋಜಗೌಡ, ನಾಗಮಣಿ, ಗಿರೀಶ್, ಕುಚ್ಚಂಗಿ ರಮೇಶ್ ಸೇರಿದಂತೆ ಹಲವು ಮುಖಂಡರು ಭಾಗವಹಿಸಿದ್ದರು.

(Visited 23 times, 1 visits today)