ಕೊರಟಗೆರೆ:
ಜೆಡಿಎಸ್ ಪಕ್ಷದ ಪಂಚರತ್ನ ರಥಯಾತ್ರೆಯು ಗ್ರಾಮೀಣ ಜನತೆಯ ಅಭಿವೃದ್ದಿಯ ದಿಕ್ಸೂಚಿ.. ಶಿಕ್ಷಣ, ಆರೋಗ್ಯ, ರೈತಚೈತನ್ಯ, ವಸತಿ, ಯುವಮಾರ್ಗ ಮತ್ತು ಮಹಿಳಾ ಕ್ಷೇತ್ರದ ಅಭಿವೃದ್ದಿಯೇ ಕುಮಾರಣ್ಣನ ಬಹುದೊಡ್ಡ ಕನಸು.. ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬಂದ 24ಗಂಟೆಯೊಳಗೆ ಕುಮಾರಣ್ಣ ಮಹಿಳೆಯರ ಸ್ತ್ರೀಶಕ್ತಿಸಾಲ ಸಂಪೂರ್ಣ ಮನ್ನಾ ಮಾಡುತ್ತಾರೆ ಎಂದು ಮಾಜಿ ಶಾಸಕ ಪಿ.ಆರ್.ಸುಧಾಕರಲಾಲ್ ತಿಳಿಸಿದರು.
ಕೊರಟಗೆರೆ ಪಟ್ಟಣದ ಕಾಮಧೇನು ಸಭಾಂಗಣದಲ್ಲಿ ಕೊರಟಗೆರೆ ಜಾತ್ಯಾತೀತ ಜನತಾದಳ ಪಕ್ಷದ ವತಿದಿಂದ ಬುಧವಾರ ಏರ್ಪಡಿಸಲಾಗಿದ್ದ ಸುದ್ದಿಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿದರು.
ಶಿಕ್ಷಣವೇ ಆಧುನಿಕ ಶಕ್ತಿ, ಆರೋಗ್ಯವೇ ಸಂಪತ್ತು, ರೈತ ಚೈತನ್ಯ, ವಸತಿಯ ಆಸರೆ, ಯುವನವ ಮಾರ್ಗ ಮತ್ತು ಮಹಿಳಾ ಸಬಲೀಕರಣ ಪಂಚರತ್ನ ರಥಯಾತ್ರೆಯ ಪ್ರಮುಖ ಅಂಶವಾಗಿದೆ. ಕರ್ನಾಟಕ ರಾಜ್ಯದ ಪ್ರತಿಮನೆಗೂ ಸರಕಾರದ ಸೌಲಭ್ಯ ಕಲ್ಪಿಸುವುದು ಮತ್ತು ದುರ್ಬಲ ಸಮುಧಾಯದ ಒಳಿತು ಕಲ್ಪಿಸುವ ಮೂಲಕ ಕರ್ನಾಟಕ ಸಮಗ್ರ ಅಭಿವೃದ್ದಿಗೆ ಪರಿಪೂರ್ಣ ಪರಿಹಾರ ನೀಡುವುದೇ ಕುಮಾರಣ್ಣನ ಬಹುದೊಡ್ಡ ಕನಸಾಗಿದೆ ಎಂದು ಹೇಳಿದರು.
ಕೊರಟಗೆರೆ ಜೆಡಿಎಸ್ ಕಾರ್ಯಧ್ಯಕ್ಷ ನರಸಿಂಹರಾಜು ಮಾತನಾಡಿ ಜೆಡಿಎಸ್ ಭದ್ರಕೋಟೆ ಕೊರಟಗೆರೆ ಕ್ಷೇತ್ರದಲ್ಲಿ ಪಂಚರತ್ನ ರಥಯಾತ್ರೆ ಸಂಚರಿಸಲಿದೆ. 2023ರ ಕೊರಟಗೆರೆ ವಿಧಾನಸಭಾ ಚುನಾವಣೆಗೆ ರಥಯಾತ್ರೆ ಕಾರ್ಯಕ್ರಮವು ದಿಕ್ಸೂಚಿ ಆಗಲಿದೆ. ನವಕರ್ನಾಟಕ ನಿರ್ಮಾಣಕ್ಕಾಗಿ ಗ್ರಾಮೀಣ ಭಾಗದ ಯುವಜನತೆ ಕುಮಾರಣ್ಣನ ಕೈಬಲ ಪಡಿಸಬೇಕಾಗಿ ಮನವಿ ಮಾಡುತ್ತೇವೆ ಎಂದರು.
ಕೋಳಾಲ ಜಿಪಂ ಮಾಜಿ ಸದಸ್ಯ ಶಿವರಾಮಯ್ಯ ಮಾತನಾಡಿ ಕೊರಟಗೆರೆ ಕ್ಷೇತ್ರದ ಪುರವಾರದಿಂದ ಪ್ರಾರಂಭ ಆಗುವ ಪಂಚರತ್ನ ರಥಯಾತ್ರೆ ಹೊಳವಹಳ್ಳಿ, ಕೋಳಾಲ, ಕೊರಟಗೆರೆ ಪಟ್ಟಣದಿಂದ ತೋವಿನಕೆರೆಯ ಮೂಲಕ ರಥಯಾತ್ರೆ ಸಾಗಲಿದೆ. ರೈತನಾಯಕ ಕುಮಾರಣ್ಣ ಬೆಂಬಲಿಸಲು ಸಾವಿರಾರು ಸಂಖ್ಯೆಯಲ್ಲಿ ಜೆಡಿಎಸ್ ಮುಖಂಡರು ಮತ್ತು ಕಾರ್ಯಕರ್ತರು ಆಗಮಿಸಲಿದ್ದಾರೆ ಎಂದು ತಿಳಿಸಿದರು.
ಸುದ್ದಿಗೋಷ್ಟಿಯಲ್ಲಿ ಜೆಡಿಎಸ್ ಜಿಲ್ಲಾ ಸಂಘಟನಾ ಕಾರ್ಯದರ್ಶಿ ವೀರಕ್ಯಾತರಾಯ, ಕೊರಟಗೆರೆ ಕಾರ್ಯದರ್ಶಿ ಲಕ್ಷ್ಮಣ್, ವಕ್ತಾರ ಲಕ್ಷ್ಮೀಶ್, ಯುವಧ್ಯಕ್ಷ ವೆಂಕಟೇಶ್, ತಾಪಂ ಮಾಜಿ ಸದಸ್ಯರಾದ ಪ್ರಕಾಶ್, ಸಾಕರಾಜು, ರಾಮಣ್ಣ, ಮುಖಂಡರಾದ ಕಾಂತರಾಜು, ಕಾಮರಾಜು, ಸಿದ್ದಮಲ್ಲಪ್ಪ, ಲಕ್ಷ್ಮೀನಾರಾಯಣ್, ರಮೇಶ್, ಸಂತೋಷಗೌಡ, ಲಕ್ಷ್ಮೀನರಸಯ್ಯ, ಬಸವರಾಜು, ಕಾಳಿಚರಣ್, ಅಮರ್ ಸೇರಿದಂತೆ ಇತರರು ಇದ್ದರು.

(Visited 8 times, 1 visits today)