ತುಮಕೂರು


ಪ್ರಾಮಾಣಿಕತೆ ನೈಜ ಬದುಕಿನ ಸಂಪನ್ನತೆಯನ್ನು ಪೌರಾಣಿಕ ನಾಟಕಗಳು ಹೊಂದಿವೆ ಎಂದು ಕಲಾಶ್ರೀ ಎನ್.ಕೆ. ಮೋಹನ್‍ಕುಮಾರ್ ಹೇಳಿದರು.
ನಗರದ ಗುಬ್ಬಿ ವೀರಣ್ಣ ರಂಗಮಂದಿರದಲ್ಲಿ ಜಿಲ್ಲಾ ರಂಗಭೂಮಿ ಕಲಾ ಸಂಘ, ಬತ್ಸಂದ್ರ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ಪುರಾಣ ಪ್ರಾತಿನಿಧಿಕ ನಾಟಕಗಳ ಪ್ರದರ್ಶನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಬೆಳೆಯುತ್ತಿರುವ ವೈಚಾರಿಕ ಯುಗದಲ್ಲಿ ಕೇವಲ ಆರ್ಥಿಕ ಭದ್ರತೆಯಿಂದ ಮಾನವನ ಶಾರೀರಿಕ ಭೌತಿಕ ವಿಕಾಸವಾಗದು. ಪ್ರಸ್ತುತ ಮನುಷ್ಯನ ಜೀವನ ಶೈಲಿಯನ್ನು ನೋಡಿದರೆ ತಾನು ಮಾನಸಿಕವಾಗಿ ಆರೋಗ್ಯಪೂರ್ಣನಾಗಬೇಕಿದೆ. ಈ ನಿಟ್ಟಿನಲ್ಲಿ ಪುರಾಣ ಪರಂಪರೆಯ ಗ್ರಂಥಗಳ ಅವಲೋಕನ ಪ್ರಾತಿನಿಧಿಕ ರಾಮಾಯಣ ಮಹಾಭಾರತ ಅನೇಕ ಸತ್ಪಭರಿತ ನಾಟಕಗಳ ಕುರಿತಾದ ರಂಗಪ್ರಯೋಗ ಸಂಗೀತ ಕಾವ್ಯಗಳಲ್ಲಿ ತೊಡಗಿಸಿಕೊಂಡು ತಾನು ಅರ್ಪಣೆ ಮಾಡಿಕೊಂಡು ಪ್ರಾಮಾಣಿಕತೆಯಿಂದ ತಾನು ನಡೆದರೆ ಸಮಾಜದಲ್ಲಿ ವಿಶ್ವ ಶಾಂತಿ ಮಂತ್ರ ಸಂಪನ್ನವಾಗುತ್ತದೆ ಎಂದರು.
ಡಾ, ಲಕ್ಷ್ಮಣ್‍ದಾಸ್ ಮಾತನಾಡಿ, ಪುರಾಣದ ಕಥಾವಸ್ತುವಿನಲ್ಲಿ ಬರಬಹುದಾದ ಪಾತ್ರಗಳು ಜಗತ್ತಿಗೆ ಹೀಗೆ ಇರಬೇಕೆಂದು ಹೇಳುತ್ತವೆ. ರಾಮಾಯಣದಲ್ಲಿ ರಾಮ, ಲಕ್ಷಣ, ಭರತ, ಶತ್ರುಘ್ನ ಅಂದರೆ ಇಲ್ಲಿ ಸೋದರತ್ವ ಬ್ರಾತೃತ್ವ ಎಲ್ಲ ತ್ಯಾಗಮಯ ಜೀವನದ ಅರ್ಥ ಕೊಡುತ್ತವೆ. ಮಹಾಭಾರತದಲ್ಲಿ ದುರ್ಯೋಧನ ದುಶ್ಯಾಸನ ಶಕುನಿ ಕಡೆಗೆ ಧರ್ಮರಾಯನಂತೆಯೂ ಇರಬಾರದು ಎಂಬ ಸತ್ವವನ್ನು ತಿಳಿಯಬೇಕಾದರೆ ತಮ್ಮ ಅಮೂಲ್ಯ ಜೀವನದ ದಿಸೆಯಲ್ಲಿ ಒಂದು ಭಾಗವಾಗಿ ಪುರಾಣ ಪರಂಪರೆ ಇತಿಹಾಸದ ನಾಟಕಗಳಲ್ಲಿ ತೊಡಗಿದರೆ ಮಾನವ ವ್ಯಕ್ತಿ ವಿಕಸನವಾಗುತ್ತದೆ ಎಂದರು.
ಇದೇ ಸಂದರ್ಭದಲ್ಲಿ ಕಲಾ ಸಂಘದ ನಾಗಭೂಷಣ ದೇವರಾಜು, ಮಂಜುನಾಥ್, ಕರ್ನಾಟಕ ಕಲಾಶ್ರೀ ಪುರಸ್ಕೃತರಾದ ಸೋಮಶೇಖರ್ ದಾಸ್, ಮೋಹನಕುಮಾರ್ ದಾಸ್ ಹಾಗೂ ವಿವಿಧ ಸಾಂಸ್ಕೃತಿಕ ಕ್ಷೇತ್ರದಲ್ಲಿ ತೊಡಗಿರುವ ಸಾಧಕರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಗುರುಸಿದ್ದೇಗೌಡ, ಹನುಮದಾಸ್, ರಂಗರಾಜು, ದೇವರಾಜು, ಚಿದಾನಂದಮೂರ್ತಿ, ಶ್ರೀನಿವಾಸರಂಗಯ್ಯ, ಕೆಂಗನಹಳ್ಳಿ ಕೃಷ್ಣಮೂರ್ತಿ ಮತ್ತಿತರರು ಉಪಸ್ಥಿತರಿದ್ದರು.

(Visited 2 times, 1 visits today)