ಕೊರಟಗೆರೆ:

      ರಾಜ್ಯದಲ್ಲಿ ಪ್ರವಾಹದಿಂದ ನಲುಗಿರುವ ನೆರೆ ಸಂತ್ರಸ್ಥರ ಬಗ್ಗೆ ನಿರ್ಲಕ್ಷ, ಕೇಂದ್ರ ಸರಕಾರದ ದ್ವೇಷದ ರಾಜಕಾರಣ ಮತ್ತು ಕೇಂದ್ರ ಸರಕಾರದ ಹತ್ತಾರು ಏಕಪಕ್ಷೀಯ ನಿರ್ಧಾರಗಳಿಂದ ಆಗಿರುವ ವೈಫಲ್ಯಗಳ ವಿರುದ್ದ ಬ್ಲಾಕ್ ಕಾಂಗ್ರೇಸ್ ವತಿಯಿಂದ ಗುರುವಾರ ಪ್ರತಿಭಟನೆ ನಡೆಸಲಾಯಿತು.

      ಪಟ್ಟಣದ ಸರಕಾರಿ ಬಸ್ ನಿಲ್ದಾಣದಿಂದ ಮುಖ್ಯರಸ್ತೆಯಲ್ಲಿ ಮೆರವಣಿಗೆ ಮೂಲಕ ಕೊರಟಗೆರೆ ಬ್ಲಾಕ್ ಕಾಂಗ್ರೇಸ್ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಕೇಂದ್ರ ಸರಕಾರದ ವಿರುದ್ದ ಘೋಷಣೆಗಳನ್ನು ಕೂಗುತ್ತಾ ಕೊರಟಗೆರೆ ತಹಶೀಲ್ದಾರ್ ಗೋವಿಂದರಾಜು ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದ್ದಾರೆ.

      ರಾಜ್ಯ ಕೆಪಿಸಿಸಿ ಕಾರ್ಯದರ್ಶಿ ಬಿ.ಎಸ್.ದಿನೇಶ್ ಮಾತನಾಡಿ ಕೇಂದ್ರ ಸರಕಾರದ ವೈಫಲ್ಯ ಮರೆಮಾಚಲು ಹಾಗೂ ಜನತೆಯ ಗಮನ ಬೇರೆಡೆ ಸೆಳೆಯಲು ಕೇಂದ್ರ ಸರಕಾರ ಸ್ವತಂತ್ರ ಸ್ವಾಯತ್ತತೆ ಸಂಸ್ಥೆಗಳಾದ ಐಟಿ, ಈಡಿ ಹಾಗೂ ಸಿಬಿಐ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಂಡಿದೆ. ದ್ವೇಷದ ರಾಜಕಾರಣದ ಮೂಲಕ ಕೇಂದ್ರ ಮಾಚಿ ಸಚಿವ ಚಿದಂಬರಂ ಹಾಗೂ ಡಿ.ಕೆ.ಶಿವಕುಮಾರ್ ಬಂಧಿಸಿ ವಿರೋಧ ಪಕ್ಷದ ನಾಯಕರಿಗೆ ಬೆದರಿಕೆ ಹಾಕುವ ಕೆಲಸ ಮಾಡುತ್ತೀದೆ ಎಂದು ತಿಳಿಸಿದರು.

      ಗ್ರಾಮಾಂತರ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಅರಕೆರೆಶಂಕರ್ ಮಾತನಾಡಿ ನಮ್ಮ ರಾಜ್ಯದ 18ಜಿಲ್ಲೆಯಲ್ಲಿ ಪ್ರವಾಹದಿಂದ ಅಪಾರ ಪ್ರಮಾಣದ ಆಸ್ತಿ-ಪಾಸ್ತಿಗಳಿಗೆ ಹಾನಿ ಉಂಟಾಗಿದೆ. ರಸ್ತೆ-ಸೇತುವೆ-ಶಾಲಾ ಕಾಲೇಜು ಕುಸಿದು ಹೋಗಿದೆ. ಕೇಂದ್ರ ಸರಕಾರದಲ್ಲಿ ನಮ್ಮ ರಾಜ್ಯದ 3ಜನ ಸಚಿವರು ಸೇರಿದಂತೆ 25ಜನ ಸಂಸದರಿದ್ದಾರೆ. ಆದರೂ ನಮ್ಮ ರಾಜ್ಯಕ್ಕೆ ಕೇಂದ್ರ ಸರಕಾರದಿಂದ ಪರಿಹಾರ ಮಾತ್ರ ಶೂನ್ಯವಾಗಿದೆ ಎಂದು ಆರೋಪ ಮಾಡಿದರು.

       ನಗರ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಅಶ್ವತ್ಥನಾರಾಯಣ ಮಾತನಾಡಿ ಕೇಂದ್ರ ಸರಕಾರದ ಅಸಮರ್ಪಕ ಆರ್ಥಿಕ ನಿರ್ವಹಣೆಯಿಂದ ಜಿಡಿಪಿ ಕುಸಿತಗೊಂಡು ದೇಶದ ಪ್ರತಿಷ್ಟಿತ ಕೈಗಾರಿಕೆಗಳಾದ ಪಾರ್ಲೇಜೀ, ಆಟೋಮೊಬೈಲ್, ಬಿಎಸ್‍ಎನ್‍ಎಲ್, ಐಬಿಎಂ, ಏರ್ ಇಂಡಿಯಾ ಕಂಪನಿಗಳು ನಷ್ಟದಲ್ಲಿವೆ. 15ಲಕ್ಷಕ್ಕೂ ಹೆಚ್ಚು ಉದ್ಯೋಗಿಗಳು ಬೀದಿಗೆ ಬಂದು ನಿರುದ್ಯೋಗಿಗಳ ಸಂಖ್ಯೆ ಪ್ರತಿದಿನವು ಹೆಚ್ಚಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

 

(Visited 12 times, 1 visits today)