ಕೊರಟಗೆರೆ:

      ಶ್ರೀಕೃಷ್ಣ ಜಯಂತಿಯನ್ನು ಸರಕಾರಿ ರಜೆಯನ್ನಾಗಿ ರಾಜ್ಯ ಸರಕಾರ ಘೋಷಣೆ ಮಾಡಬೇಕು ಮತ್ತು ಸಮುದಾಯಕ್ಕೆ ನಿಗಮ ಮಂಡಳಿ ಸ್ಥಾಪಿಸಿಬೇಕು ಎಂದು ಚಿತ್ರದುರ್ಗದ ಯಾದವ ಪೀಠದ ಪೀಠಾಧ್ಯಕ್ಷಯಾದವನಂದ ಸ್ವಾಮೀಜಿ ಸರಕಾರಕ್ಕೆಒತ್ತಾಯ ಮಾಡಿದರು.

      ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕೊರಟಗೆರೆ ಯಾದವ ಸಂಘದಿಂದ ಬುಧವಾರ ಹಮ್ಮಿಕೊಂಡಿದ್ದ ಗುರುವಂದನೆ ಕಾರ್ಯಕ್ರಮದ ಪೂರ್ವಭಾವಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

      ಯಾದವ ಸಮುದಾಯದ ಸಮುದಾಯ ಭವನ, ವಿದ್ಯಾರ್ಥಿ ನಿಲಯ, ದೇವಾಲಯಗಳಿಗೆ ಅನುಧಾನ ನೀಡದ ಹಿನ್ನಲೆಯಲ್ಲಿ ಕಾಮಗಾರಿಗಳು ಹಲವಾರು ವರ್ಷಗಳಿಂದ ಸ್ಥಗೀತವಾಗಿವೆ. ರಾಜ್ಯ ಸರಕಾರಕೂಡಲೇಯಾದವ ಸಮುದಾಯದ ಅಭಿವೃದ್ದಿಗೆ ಸರಕಾರದಿಂದ ವಿಶೇಷ ಅನುಧಾನ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.

     ಯಾದವ ಸಂಘದರಾಜ್ಯಧ್ಯಕ್ಷ ಶ್ರೀನಿವಾಸ್ ಮಾತನಾಡಿ ಯಾದವ ಸಮುದಾಯಆರ್ಥಿಕ, ಸಾಮಾಜಿಕ ಮತ್ತು ರಾಜಕೀಯವಾಗಿ ಹಿಂದುಳಿದಿದೆ.ಯಾದವ ಸಮಾಜದ ಅಭಿವೃದ್ದಿಗೆ ರಾಜಕೀಯ ಮತ್ತು ಆರ್ಥಿಕವಾಗಿ ರಾಜ್ಯ ಮತ್ತುಕೇಂದ್ರ ಸರಕಾರದ ಅನುಧಾನ ಮತ್ತು ಅಭಿವೃದ್ದಿ ಶೂನ್ಯವಾಗಿದೆ. ಸಮುದಾಯದ ಪ್ರಮುಖರಿಗೆ ಸರಕಾರದಲ್ಲಿ ಸೂಕ್ತ ಸ್ಥಾನಮಾನ ನೀಡಬೇಕು ಎಂದುಆಗ್ರಹ ಮಾಡಿದರು.

      ಕೊರಟಗೆರೆ ಯಾದವ ಸಂಘದ ಕಾರ್ಯದರ್ಶಿ ಮಹಾಲಿಂಗಪ್ಪ ಮಾತನಾಡಿ, ಯಾದವ ಸಂಘದ ವತಿಯಿಂದ ಬೃಹತ್‍ ಗುರುವಂದನಾ ಕಾರ್ಯಕ್ರಮವನ್ನುತುಮಕೂರು ನಗರದಲ್ಲಿ ಆಯೋಜಿಸಲು ಸಮುದಾಯದ ಮುಖಂಡರು ಒಪ್ಪಿಗೆ ಸೂಚಿಸಿದ್ದಾರೆ.ಪಕ್ಷಾತೀತವಾಗಿ ಸಮುದಾಯ ಜನರು ಪಾಲ್ಗೋಂಡು ಕಾರ್ಯಕ್ರಮ ಯಶಸ್ವಿ ಗೊಳಿಸಬೇಕು ಎಂದು ಮನವಿ ಮಾಡಿದರು.

 

(Visited 17 times, 1 visits today)