ಮಧುಗಿರಿ:

      ಪಟ್ಟಣದ ಕೆಅರ್ ಬಡಾವಣೆಯ ಚಾಲಕರೊಬ್ಬರಿಗೆ ಪಾಸಿಟಿವ್ ಬಂದಿದ್ದು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

      ಸೋಂಕಿನಿಂದ ಮೃತಪಟ್ಟ ಟೈಲರ್ ಬಳಿ ಬಟ್ಟೆ ಹಾಕಿದ್ದ ಗಿರಾಕಿಗಳು ಅನುಮಾನದ ಮೇರೆಗೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಪರೀಕ್ಷೆ ಮಾಡಿಸಿದ್ದು, ಜೊತೆಯಲ್ಲಿ ಬಂದಿದ್ದ ವಾಹನ ಚಾಲಕನಿಗೂ ಕರೋನಾ ಪರೀಕ್ಷೆ ಮಾಡಿಸಿದ್ದು, ವರದಿಯಲ್ಲಿ ಕರೋನಾ ಪಾಸಿಟೀವ್ ಎಂದು ಬಂದಿದೆ. ಟೈಲರ್ ಬಳಿ ಬಟ್ಟೆ ಹಾಕಿದ್ದ ಗಿರಾಕಿಗಳಿಗೆ ನೆಗೆಟೀವ್ ಬಂದಿದ್ದು, ಆದರೆ ಜೊತೆಯಲ್ಲಿ ಹೋಗಿದ್ದ ವಾಹನ ಚಾಲಕನಿಗೆ ಪಾಸಿಟೀವ್ ಬಂದಿದ್ದಾದರೂ ಹೇಗೆ ಎಂಬ ಅನುಮಾನಗಳು ವ್ಯಕ್ತವಾಗುತ್ತಿದೆ. ಸೊಂಕಿತನೊಂದಿಗೆ ಸಂಪರ್ಕವೇ ಇಲ್ಲದ ವ್ಯಕ್ತಿಗೆ ಪಾಸಿಟೀವ್ ಬಂದಿರುವುದು ಸೋಂಕು ಸಾಮೂಹಿಕವಾಗಿ ಹರಡಲು ಆರಂಭಿಸಿದೆಯಾ ಎನ್ನುವ ಅನುಮಾನಗಳು ವ್ಯಕ್ತವಾಗುತ್ತಿರುವುದು ತಾಲೂಕು ಆಡಳಿತಕ್ಕೆ ತಲೆ ನೋವಾಗಿ ಪರಿಣಮಿಸಿದೆ.

         ಗೂಳೂರು ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಹರಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೈರಸಂದ್ರ ಗ್ರಾಮದಲ್ಲಿ ಕೋರೋನೋ ಪಾಸಿಟಿವ್ ಬಂದಿರುವ ಗ್ರಾಮವು ಸೀಲ್ ಡೌನ್ ಮಾಡಿರುವ ಸಂದರ್ಭದಲ್ಲಿ ಗ್ರಾಮಾಂತರ ಶಾಸಕರಾದ ಡಿ.ಸಿ.ಗೌರಿಶಂಕರ್ ರವರ ನೇತುತ್ವದಲ್ಲಿ ಬೈರಸಂದ್ರ ಗ್ರಾಮದ ಮನೆಗಳಿಗೆ ಪ್ರತಿನಿತ್ಯ ಹಾಲು ನೀರು ಹಾಗೂ ಇಂದು ಆಹಾರದ ಕಿಟ್ ವಿತರಣೆ ಅಕ್ಕಿ ಉಪ್ಪು ತೊಗರಿಬೇಳೆ ಸಕ್ಕರೆ ಗೋಧಿ ಹಿಟ್ಟು ಎಣ್ಣೆ ಹಾಗೂ ಎಲ್ಲಾ ವಿಧವಾದ ತರಕಾರಿಗಳು ಹಾಗೂ ಪೊಲೀಸ್ ಸಿಬ್ಬಂದಿ ವರ್ಗ ಹಾಗೂ ಆಶಾ ಕಾರ್ಯಕರ್ತೆಯರಿಗೆ ಹಾಗೂ ವೈದ್ಯಕೀಯ ಸಿಬ್ಬಂದಿಗಳಿಗೆ ದಿನನಿತ್ಯ ತಿಂಡಿ ಮಧ್ಯಾಹ್ನ ಊಟ ಸಂಜೆ ಊಟ ಹಾಗೂ ಎಲ್ಲಾ ವ್ಯವಸ್ಥೆಯನ್ನು ಕಲ್ಪಿಸುತ್ತಿರುವ ಗೂಳೂರು ಜಿಲ್ಲಾ ಪಂಚಾಯಿ ವ್ಯಾಪ್ತಿಯ ಜೆಡಿಎಸ್ ಅಧ್ಯಕ್ಷರಾದ ಜಿ ಪಾಲನೇತ್ರಯ್ಯ ನವರು ಹಾಗೂ ಹರಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ *ಶಾಂತಾ ಸುರೇಶ್ ಹಾಗೂ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದ ರೇಣುಕಪ್ಪ ನವರು ಹಾಗೂ ಎಲ್ಲಾ ಜೆಡಿಎಸ್ ಮುಖಂಡರುಗಳು ಇದ್ದರು.

(Visited 215 times, 1 visits today)