ಮಧುಗಿರಿ:

     ಮಧುಗಿರಿ ಜಿಲ್ಲೆಯಾಗಲು ಎಲ್ಲಾ ಅರ್ಹತೆ ಇದ್ದು ಸರ್ಕಾರವನ್ನು ಕೇಳೋರು ಇಲ್ಲದ ಕಾರಣ ನೆನೆಗುದಿಗೆ ಬಿದ್ದಂತಾಗಿದೆ ಎಂದು ಮಾಜಿ ಶಾಸಕ ಕೆ .ಎನ್. ರಾಜಣ್ಣ ತಿಳಿಸಿದರು.

      ಪಟ್ಟಣದಲ್ಲಿರುವ ಅವರ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಸ್ವಾತಂತ್ರ ಪೂರ್ವದಲ್ಲೇ ಉಪವಿಭಾಗಾಧಿಕಾರಿ ಕಚೇರಿ ಇದ್ದು.ಡಾ. ನಂಜುಂಡಪ್ಪ ವರದಿ ಆಧಾರಿತ ಅತಿ ಹಿಂದುಳಿದ ತಾಲ್ಲೂಕುಗಳಾದ ಮಧುಗಿರಿ- ಪಾವಗಡ- ಶಿರಾ- ಕೊರಟಗೆರೆ ತಾಲ್ಲೂಕುಗಳು ಸೇರಿ ಉಪವಿಭಾಗ ಕೇಂದ್ರವಾಗಿದ್ದು, ಈಗಾಗಲೇ ಶೈಕ್ಷಣಿಕ ಜಿಲ್ಲೆ ಆಗಿರುವುದರಿಂದ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಜಿಲ್ಲಾ ಖಜಾನೆ ಕಚೇರಿ ಹೊರತುಪಡಿಸಿ ಎಲ್ಲಾ ಇಲಾಖೆಗಳು ಕಾರ್ಯನಿರ್ವಹಿಸುತ್ತಿದ್ದು, ರಾಜ್ಯದ ಮೂವತ್ತೊಂದನೇ ಜಿಲ್ಲೆಯಾಗಿ ವಿಜಯನಗರ ಘೋಷಣೆಯಾಗಿದ್ದು ತುಂಕೂರು ಜಿಲ್ಲೆ ಅತಿ ದೊಡ್ಡ ಜಿಲ್ಲೆ ಯಾಗಿದೆ. ಇದನ್ನು ವಿಭಜಿಸಿ ಮಧುಗಿರಿ ಜಿಲ್ಲೆಯನ್ನಾಗಿಸಿ ಎಂದು ಸರ್ಕಾರವನ್ನು ಕೇಳಬೇಕಾದ ಇಲ್ಲಿನ ಶಾಸಕರು ಸಿಲ್ಲಿ ವಿಚಾರವಾಗಿ ಚಂದ್ರಗಿರಿ ಗ್ರಾಮಪಂಚಾಯಿತಿ ಬಗ್ಗೆ ಪ್ರಸ್ತಾಪ ಮಾಡಿ ಶಾಸಕ ಸ್ಥಾನದ ಗೌರವವನ್ನು ಕಳೆದಿದ್ದಾರೆಂದು ಆರೋಪಿಸಿದರು.

ತುಮಕೂರು- ರಾಯದುರ್ಗ ನಡುವಿನ ರೈಲ್ವೆ ಕಾಮಗಾರಿ ಯೋಜನೆಯ ಭೂಸ್ವಾಧೀನ ಪ್ರಕ್ರಿಯೆ ಬಗ್ಗೆ ತಡವಾಗುತ್ತಿರುವುದು, ಎತ್ತಿನಹೊಳೆ ಯೋಜನೆ ಕಾಮಗಾರಿ ಮಂದಗತಿಯಲ್ಲಿ ಸಾಗುತ್ತಿರುವ ಬಗ್ಗೆ ಮತ್ತು ಮಧುಗಿರಿ ಕ್ಷೇತ್ರದಲ್ಲಿನ ಜ್ವಲಂತ ಸಮಸ್ಯೆಯ ಬಗ್ಗೆ ಬೆಳಕು ಚೆಲ್ಲುವ ಯಾವುದೇ ಚರ್ಚೆ ಮಾಡದೆ, ಪೂರ್ವ ಪೀಡಿತರಾದವರಂತೆ ಚಂದ್ರಗಿರಿ ಗ್ರಾಮಪಂಚಾಯಿತಿ ಬಗ್ಗೆ ಕೇಳುತ್ತಾರೆ. ಇವರ ಆರೋಪದಲ್ಲಿ ಸತ್ಯಾಂಶವಿದ್ದರೆ ಪ್ರಸ್ತುತ ಆಡಳಿತ ನಡೆಸುವುದಕ್ಕೆ ಮತದಾರ ಲಕ್ಷ್ಮಿನಾರಾಯಣ್ ಮತ್ತು ತಂಡವನ್ನು ಅಭೂತಪೂರ್ವವಾಗಿ ಗೆಲ್ಲಿಸಿದ್ದಾರೆ. ಶಾಸಕರ ಆರೋಪದಲ್ಲಿ ಹುರುಳಿಲ್ಲ ಎಂಬುದನ್ನು ಸಾಬೀತಾಗಿದ್ದು ಜನರ ತೀರ್ಪು ಅಂತಿಮ ಎಂದರು.

ಜಿಲ್ಲೆಯಲ್ಲಿ ತಿಪಟೂರು ನ್ನು ಜಿಲ್ಲಾ ಕೇಂದ್ರವನ್ನಾಗಿಸುವ ಒತ್ತಾಯ ಕೇಳಿಬರುತ್ತಿದ್ದು, ತಿಪಟೂರಿಗೆ ಚಿಕ್ಕನಾಯಕನಹಳ್ಳಿ ತುರುವೇಕೆರೆ ಅರಸೀಕೆರೆ ಸೇರಿಸಿ ಎನ್ನುತ್ತಾರೆ. ಆದರೆ ಹಾಸನದವರು ಅರಸೀಕೆರೆಯನ್ನು ಬಿಟ್ಟು ಕೊಡುತ್ತಾರೆಯೇ ಎಂದರು.

ರೈತಪರ ಹೋರಾಟ:

      ಕೇಂದ್ರ ಸರ್ಕಾರ ರೈತರಿಗೆ ಮಾರಕವಾಗುವಂಥ ಖಾಯಿದೆಗಳನ್ನು ಜಾರಿಗೊಳಿಸುವುದರ ವಿರುದ್ಧ ಮಧುಗಿರಿಯಲ್ಲಿ ಕಾಂಗ್ರೆಸ್ ವತಿಯಿಂದ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿ ಉಪವಿಭಾಗಾಧಿಕಾರಿಗಳಿಗೆ ಮನವಿ ಸಲ್ಲಿಸುವುದಾಗಿ ಮಾಜಿ ಶಾಸಕ ಕೆ. ಎನ್. ರಾಜಣ್ಣ ತಿಳಿಸಿದರು.

ಗ್ರಾ,ಪಂ.ಸಧಸ್ಯರುಗಳಿಗೆ ಸನ್ಮಾನ: ಮಧುಗಿರಿ ವಿಧಾನಸಭಾ ಕ್ಷೇತ್ರದ 28 ಗ್ರಾಪಂಗಳಲ್ಲಿ ಕಾಂಗ್ರೆಸ್ ಬೆಂಬಲಿತರು ಅಧ್ಯಕ್ಷ ಉಪಾಧ್ಯಕ್ಷರಾಗಿ ಚುನಾಯಿತರಾಗಿದ್ದು, ಜೆಡಿಎಸ್ ಗೆ ಮಿಡಿಗೇಶಿ ಮತ್ತು ಬೇಡತ್ತೂರು ಹೊರತುಪಡಿಸಿ ಯಾವುದೇ ಗ್ರಾಪಂ ಸ್ಪಷ್ಟ ಬಹುಮತ ಇರಲಿಲ್ಲ.

      ಗರಣಿ ಬಿಜವರ ದೊಡ್ಡಯಲ್ಕೂರು ನಲ್ಲಿ ಸ್ಥಳೀಯ ಕಾಂಗ್ರೆಸ್ಸಿಗರ ಒಳ ಪೆಟ್ಟಿನಿಂದಾಗಿ ಅಧಿಕಾರ ವಂಚಿತರಾಗಿದ್ದೇವೆ ಅಷ್ಟೆ ಕಳೆದ ಬಾರಿ ನಾನು ಶಾಸಕನಾಗಿದ್ದಾಗ ಡಿವಿ ಹಳ್ಳಿ ದಬ್ಬೆಘಟ್ಟ ದೊಡ್ಡೇರಿ ಬಡವನಹಳ್ಳಿ ಗ್ರಾಪಂಗಳು ಜೆಡಿಎಸ್ ಪಾಲಾಗಿದ್ದು ಈಗ ಕಾಂಗ್ರೆಸ್ ಪಾಲಾಗಿದೆ ಎಂದರು.

      ಫೆಬ್ರವರಿ 28ರಂದು ನನ್ನ ಕ್ಷೇತ್ರ ಮತ್ತು ಪುರವರ ಹೋಬಳಿಯ ಅವರು ಸೇರಿದಂತೆ ಐನೂರಕ್ಕೂ ಹೆಚ್ಚು ಗ್ರಾ ಪಂ ಸದಸ್ಯರುಗಳಿಗೆ ಸನ್ಮಾನ ಕಾರ್ಯಕ್ರಮವನ್ನು ಕಾಂಗ್ರೆಸ್ ಸಮಿತಿ ವತಿಯಿಂದ ಏರ್ಪಡಿಸಲು ತೀರ್ಮಾನಿಸಲಾಗಿದ್ದು, ಈ ಕಾರ್ಯಕ್ರಮಕ್ಕೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ,ಕೆಪಿಸಿಸಿ ಅಧ್ಯಕ್ಷ ಡಿಕೆಶಿವಕುಮಾರ್, ಮಾಜಿ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್, ಎಂ. ಆರ್. ಸೀತಾರಾಂ, ಶಿವಶಂಕರ್ ರೆಡ್ಡಿ ಜಿಲ್ಲೆಯ ಎಲ್ಲಾ ಮುಖಂಡರುಗಳು ಮಧುಗಿರಿ ತಾಲ್ಲೂಕಿನ ಕಾಂಗ್ರೆಸ್ ಪಕ್ಷದ ಜನಪ್ರತಿನಿಧಿಗಳನ್ನು ಆಹ್ವಾನಿಸಲಾಗುವುದು ಎಂದರು.

(Visited 22 times, 1 visits today)