ತುಮಕೂರು : ಜಿಲ್ಲೆಯಾದ್ಯಂತ ಮಾರ್ಚ್ 23 ರಿಂದ ಮಾರ್ಚ್ 27 ರವರೆಗೆ ತುಂತುರು ಮಳೆಯಾಗುವ ಸಂಭವವಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ರೈತರು ಮಾಗಿ ಉಳುಮೆ ಮಾಡುವುದರಿಂದ ಕೃಷಿಭೂಮಿ ಸಡಿಲವಾಗಿ ಮಳೆ ನೀರು ಸಾಕಷ್ಟು ಪ್ರಮಾಣದಲ್ಲಿ ಭೂಮಿಯಲ್ಲಿ ಇಂಗುತ್ತದೆ. ಇದರಿಂದಾಗಿ ಹುಳುಗಳ ವಿವಿಧ ಹಂತಗಳು ನಾಶವಾಗುತ್ತವೆ ಮತ್ತು ಕಳೆಗಳ ನಾಶಕ್ಕೂ ಸಹಕಾರಿಯಾಗುತ್ತದೆ.

ರೈತರು ತಮಗೆ ಲಭ್ಯವಿರುವಂತಹ ಮಳೆಯ ನೀರನ್ನು ಬಳಸಿಕೊಂಡು ಉಳುಮೆಯನ್ನು ಮಾಡಬಹುದಾಗಿದೆ. ಪೂರ್ವ ಮುಂಗಾರು ಬೆಳೆ ಬಿತ್ತನೆಗಾಗಿ ಭೂಮಿಯನ್ನು ಸಿದ್ದಪಡಿಸಬಹುದು ಎಂದು ತಿಳಿಸಲಾಗಿದೆ.

ಬದುಗಳಲ್ಲಿ ಮೇವಿನ ಹುಲ್ಲಿನ ಬೀಜಗಳನ್ನು ಬಿತ್ತನೆ ಮಾಡಿ ಇದರಿಂದ ಬದುಗಳು ಭದ್ರ ವಾಗಿರುವಂತೆ ಮಾಡಬಹುದು. ಇದರಿಂದಾಗಿ ಜಮೀನುಗಳಲ್ಲಿ ನೀರಿನ ತೇವಾಂಶವನ್ನು ಕಾಪಾಡುತ್ತದೆ. ಇನ್ನು ಇಳಿಜಾರಿಗೆ ಅಡ್ಡಲಾಗಿ ಉಳಿಮೆ ಮಾಡುವುದರ ಮೂಲಕ ಮಳೆ ನೀರನ್ನು ಸಂರಕ್ಷಣೆ ಮಾಡಬಹುದು ಎಂದು ಜಿಲ್ಲಾ ಕೃಷಿ ಹವಾಮಾನ ಘಟಕ ರೈತರಿಗೆ ಮಾಹಿತಿಯನ್ನು ತಿಳಿಸಿದೆ.

(Visited 16 times, 1 visits today)