ತುಮಕೂರು :

      ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿರುವ ಮಾಲೀಕರು ತಮ್ಮ ಆಸ್ತಿ ತೆರಿಗೆಯನ್ನು ಏಪ್ರಿಲ್ ಮಾಹೆಯೊಳಗೆ ಪಾವತಿಸಿದಲ್ಲಿ ಪಾವತಿಸಬೇಕಾಗಿರುವ ಆಸ್ತಿ ತೆರಿಗೆ ಮೇಲೆ ಶೇ. 5 ರಷ್ಟು ರಿಯಾಯತಿಯನ್ನು ನೀಡಲಾಗುವುದು ಎಂದು ಆಯುಕ್ತೆ ರೇಣುಕಾ ತಿಳಿಸಿದ್ದಾರೆ.

      ಆಸ್ತಿ ತೆರಿಗೆ, ನೀರಿನ ಶುಲ್ಕ, ಯುಜಿಡಿ ಶುಲ್ಕವನ್ನು ಪಾಲಿಕೆಯ ಅಧಿಕೃತ ವೆಬ್‍ಸೈಟ್ www.tumkurucitycorp.org  ಮೂಲಕ ತುಮಕೂರು ಒನ್ ಕೇಂದ್ರ/ ಮಹಾನಗರಪಾಲಿಕೆ ಕಚೇರಿಯಲ್ಲಿ ಪಾವತಿಸಬಹುದಾಗಿದೆ.

     ನಾಗರಿಕರು ಸಕಾಲದಲ್ಲಿ ಆಸ್ತಿ ತೆರಿಗೆಯನ್ನು ಪಾವತಿಸಿ ನಗರದ ಅಭಿವೃದ್ಧಿಗೆ ಸಹಕರಿಸಬೇಕೆಂದು ಅವರು ಮನವಿ ಮಾಡಿದ್ದಾರೆ.

(Visited 15 times, 1 visits today)