ಪಾವಗಡ:
ತಾಲ್ಲೂಕಿನ ಗುಮ್ಮಘಟ್ಟ ಗ್ರಾಮದಲ್ಲಿ  ಮಳೆ ಹಾಗೂ ಗಾಳಿ ಆರ್ಭಟಕ್ಕೆ  ಮೂರು ಕುಟುಂಬಗಳ  ಮನೆಯ ಚಾವಣಿ ಶೀಟ್‍ಗಳು ಹಾರಿ ಹೋಗಿದ್ದು, ಮೂರು ಕುಟುಂಬಗಳು ನೇಕಾರ ವೃತ್ತಿಯನ್ನು ಅವಲಂಬಿಸಿದ್ದು, ಈಗ ಎರಡು ಲಕ್ಷಕ್ಕೂ ಅಧಿಕ ಪ್ರಮಾಣದ ನಷ್ಟ ಉಂಟಾಗಿದೆ.
ದೊಮ್ಮತಮರಿ ಗ್ರಾ.ಪಂ.ವ್ಯಾಪ್ತಿಯ ಗುಮ್ಮಘಟ್ಟ ಗ್ರಾಮದ ಮುರುಳಿ, ಶ್ರೀನಿವಾಸ,  ಶಂಕರ ಅವರಿಗೆ ಸೇರಿದ ಮನೆ ಚಾವಣಿಯ ಸಿಮೆಂಟ್ ಸೀಟುಗಳು ಇದ್ದಕ್ಕಿದ್ದಂತೆ ಬೀಸಿದ ಗಾಳಿಗೆ ಹಾರಿ ಪುಡಿಪುಡಿಯಾಗಿವೆ. ನೇಕಾರರಾದ ಮುರುಳಿ ಮತ್ತು   ಶ್ರೀನಿವಾಸ್ ಅವರ ಮನೆಗಳ ಚಾವಣಿ ಶೀಟ್‍ಗಳು ವಿದ್ಯುತ್ ಮಗ್ಗದ ಮೇಲೆ ಬಿದ್ದಿದ್ದು, ಡಿಸೈನ್ ಕಾರ್ಡ್, ವಾರ್ಪು, ಪಾಗಡಿಗಳು, ರೇಷ್ಮೆ, ಕೋನ್ ಗಳು ಸಂಪೂರ್ಣ ಹಾಳಾಗಿದ್ದು, ಅಪಾರ ನಷ್ಟವಾಗಿದೆ. ಇದರಿಂದಾಗಿ ನೇಕಾರರ ಕುಟುಂಬ ಬೀದಿಗೆ ಬಿದ್ದಂತಾಗಿದೆ.
ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವಿಜಯ್ ಕುಮಾರ್, ರೆವಿನ್ಯೂ ಸೆಕರೇಟರಿ ಶ್ರೀನಿವಾಸ್, ತಾಲ್ಲೂಕು  ಆರ್ ಎಂಸಿ ಮಾಜಿ ಅಧ್ಯಕ್ಷ ಹಾಗೂ ಕಾಂಗ್ರೆಸ್ ಮುಖಂಡ ಡಿ.ಎನ್. ವಿಶ್ವೇಶ್ವರಯ್ಯ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಸೂಕ್ತ ಪರಿಹಾರವನ್ನು ಘೋಷಿಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

(Visited 47 times, 1 visits today)