ಪಾವಗಡ : 

      ತಾಲ್ಲೂಕಿನ ಗಡಿನಾಡಿನ ಜನತೆಯ ಆಶೋತ್ತರಗಳಿಗೂ ಹಾಗೂ ದಿನನಿತ್ಯದ ಸಮಸ್ಯೆಗಳಿಗೆ ಹೆಲ್ಪ್ ಸೊಸೈಟಿ ಸಂಘಟನೆಯು ಶೀಘ್ರವಾಗಿ ಸ್ಪಂದಿಸುತ್ತಿರುವುದು ಶ್ಲಾಘನೀಯ ಎಂದು ಕೆಎಂಎಫ್ ನಿರ್ದೇಶಕರಾದ ಚನ್ನಮ್ಮನವರ ತಿಳಿಸಿದರು.

ಪಟ್ಟಣದ ಹೊಸ ಬಸ್ ನಿಲ್ದಾಣದ ಸಮೀಪದ ಎಸ್ ಬಿಐ ಬ್ಯಾಂಕ್ ಪಕ್ಕದಲ್ಲಿ ಹೆಲ್ಪ್ ಸೊಸೈಟಿ ಗುರುವಾರ ನೂತನ  ಕಚೇರಿಯ ಉದ್ಘಾಟನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕೆಎಂಎಫ್ ನಿರ್ದೇಶಕರಾದ ಚನ್ನಮಲ್ಲಯ್ಯ ನವರು ಕಚೇರಿಯ
ಉದ್ಘಾಟನೆ ಮಾಡಿ ನಂತರ ಮಾತನಾಡುತ್ತಾ , ತಾಲ್ಲೂಕಿನ ಜನತೆಯ ಸಮಸ್ಯೆಗೆ ಶೀಘ್ರ ಸ್ಪಂದಿಸುತ್ತಿರುವುದರಿಂದ ಜನರಲ್ಲಿ ವಿಶ್ವಾಸಗಳಿಸಿದೆ. ಯಾವುದೇ ಪಲಾಪೇಕ್ಷವಿಲ್ಲದೆ, ಕೊರೋನದ ಸಂಕಷ್ಟ ಸಮಯದಲ್ಲಿ ಜನತೆಗೆ ಮಾಸ್ಕೊ ಹಯ ಆಹಾರ ಕಿಟ್ ಗಳನ್ನು ನೀಡಲಾಗಿದೆ.ಮೂರನೇ ಅಲೆಗೆ ಸಹ ವ್ಯಾಪಕವಾಗಿ ಹರಡುತ್ತಿದ್ದು ಬುಧ ವಾರ 34 ಪ್ರಕರಣಗಳು ದಾಖಲಾಗಿರುವುದರಿಂದ ಜನತೆಯು ಸರ್ಕಾರದ ಕಾರ್ಯಸೂಚಿಯನ್ನು ಕಡ್ಡಾಯವಾಗಿ ಪಾಲಿಸಬೇಕೆಂದು ತಿಳಿಸಿದರು.

ಪುರಸಭೆಯ ಮಾಜಿ ಅಧ್ಯಕ್ಷರಾದ ಮಾನ ವೆಂಕಟಸ್ವಾಮಿ ಅವರು ಮಾತನಾಡುತ್ತಾ ಸಂಘ-ಸಂಸ್ಥೆಗಳು ಜನಪರವಾಗಿ ಕೆಲಸ ಮಾಡಬೇಕು. ಅದೇ ರೀತಿ ಎಲ್ಪ್ರೋ ಸೈಟಿ ಸಂಘಟನೆಯು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು ಮುಂದಿನ ದಿನಗಳಲ್ಲಿ ಇನ್ನೂ ಉತ್ತಮ ಕೆಲಸ ಮಾಡಬೇಕೆಂದು ತಿಳಿಸಿದರು.

ಹೆಲ್ಪ್ ಸೊಸೈಟಿ ಅಧ್ಯಕ್ಷರಾದ ಮಾನಂ ಶಶಿಕಿರಣ್ ಮಾತನಾಡುತ್ತಾ , ತಾಲೂಕಿನ ಜನತೆ ನೀಡಿದ ಸಹಕಾರದಿಂದ ನಮ್ಮ ಸಂಘಟನೆಯೂ ಉತ್ತಮ ಕೆಲಸಗಳನ್ನು ಮಾಡಲು ಸಾಧ್ಯವಾಗಿದೆ. ಇದೇ ರೀತಿ ಜನತೆಯ ಸಹಕಾರ ಇದ್ದರೆ ಇನ್ನು ಹಲವು ಜನಪರ ಕೆಲಸಗಳನ್ನು ಹಮ್ಮಿಕೊಳ್ಳಲಾಗುತ್ತದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ರಾಜ್ಯ ಕೆಪಿಸಿಸಿ ಮುಖಂಡ ಮೈಲಾರ್ ರೆಡ್ಡಿ , ಮಾತೃಶ್ರೀ ಆಸ್ಪತ್ರೆ ವೈದ್ಯರಾದ ಜಗದೀಶ್, ಶ್ರೀ ವೆಂಕಟೇಶ್ವರ ಆಸ್ಪತ್ರೆ ವೈದ್ಯರಾದ ಕಿರಣ್,ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷ ನಾಗರಾಜ,ರೈತ ಸಂಘ ಅಧ್ಯಕ್ಷರಾದ ಪೂಜಾರಪ್ಪ,ತಾಳೆಮರದಹಳ್ಳಿ ನರೇಶ್, ತಾಳೆ ಮರದಹಳ್ಳಿ ನರಸಿಂಹ ಮೂರ್ತಿ,ಪುರಸಭೆ ಸದಸ್ಯರಾದ ಗೊರ್ತಿ ನಾಗರಾಜ, ಹನುಮಂತರಾ ಯಪ್ಪ, ಗುತ್ತಿಗೆದಾರರದ ಪರಮೇಶ್, ತಿರುಮಣಿ ಗ್ಯಾಸ್ ಏಜನ್ಸಿ ಸುರೇಂದ್ರ, ರೈತ ಮುಖಂಡ ಗಂಗಾಧರ್ ನಾಯ್ಡು, ಯುವ ಮುಖಂಡ ಅನಿಲ್, ಬೇಕರಿ ನಾಗರಾಜ ಸಾಯಿ ಸುಮನ್ ಗ್ರಾಮ ಪಂಚಾಯಿತಿ ಸದಸ್ಯರಾದ ದಿನೇಶ್, ಮೋಹನ್, ಹರೀಶ್, ರಾಕೇಶ್,ರಾಜು,ಚಿರು, ಗೌತಮ್ ಮಂಜುನಾಥ ಮತ್ತು ಎಲ್ಲಾ ಹೋಬಳಿ ಮಟ್ಟದ ಹೆಲ್ಪ್ ಸೊಸೈಟಿ ಪದಾಧಿಕಾರಿಗಳು ಹಾಗೂ ಅಭಿಮಾನಿಗಳು ಹಾಜರಿದ್ದರು.

(Visited 34 times, 1 visits today)