BenkiyabaleBenkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
Facebook Instagram YouTube WhatsApp RSS
Trending
  • ಮಳೆಗಾಲದಲ್ಲೇ ಕುಡಿಯುವ ನೀರಿಗೆ ಹಾಹಾಕಾರ
  • ತುಮಕೂರಿನಲ್ಲಿ ಮಣ್ಣಿನ ಗಣೇಶನಿಗೆ ಮಕ್ಕಳ ಕೈಚಳಕ
  • ಮಠ ಮಾನ್ಯಗಳ ನೆರವಿನ ಫಲವಾಗಿ ವೀರಶೈವ, ಲಿಂಗಾಯಿತ ಸಮುದಾಯ ಶೈಕ್ಷಣಿಕವಾಗಿ ಮುಂದುವರೆದಿದೆ ಶಾಸಕ ಜಿ.ಬಿ.ಜೋತಿಗಣೇಶ್ ಅಭಿಪ್ರಾಯ
  • ಗ್ರಾಮೀಣ ಪ್ರದೇಶದ ಕುಟುಂಬಗಳಿಗೆ ಉದ್ಯೋಗ ಭದ್ರತೆ : ಪಿಡಿಒ ಮುದ್ದಲಿಂಗಯ್ಯ
  • ಇತಿಹಾಸ ಮರುನಿರ್ಮಾಣದಲ್ಲಿ ಶಿಲ್ಪಿಗಳ ಪಾತ್ರ ಮಹತ್ವದ್ದು
  • ಶಿಕ್ಷಕ ರಾಷ್ಟç ನಿರ್ಮಾಣದ ಶಿಲ್ಪಿ: ಡಾ.ಶಿವಕುಮಾರಯ್ಯ
  • ಸೂರಿಲ್ಲದವರಿಗೆ ೧೫ ಲಕ್ಷಕ್ಕೂ ಹೆಚ್ಚು ನಿವೇಶನ: ಡಾ: ಜಿ.ಪರಮೇಶ್ವರ
  • ಮಕ್ಕಳಿಗೆ ಶ್ರೀಕೃಷ್ಣನ ವಿಚಾರಧಾರೆ ತಿಳಿಸಿ: ಬಿ.ಕೆ.ಗೀತಕ್ಕ
Facebook Twitter Instagram YouTube RSS
Benkiyabale Benkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
BenkiyabaleBenkiyabale
Home » ಶಿರಾ ಉಪಚುನಾವಣೆ ಹಿನ್ನೆಲೆ : ಇಂದಿನಿಂದ ಪ್ರತಿಯೊಬ್ಬರ ಮನೆಬಾಗಿಲಿಗೆ ಮತಗಟ್ಟೆ!!
Trending

ಶಿರಾ ಉಪಚುನಾವಣೆ ಹಿನ್ನೆಲೆ : ಇಂದಿನಿಂದ ಪ್ರತಿಯೊಬ್ಬರ ಮನೆಬಾಗಿಲಿಗೆ ಮತಗಟ್ಟೆ!!

By News Desk BenkiyabaleUpdated:October 24, 2020 6:24 pm

ತುಮಕೂರು : 

      ಶಿರಾ ಕ್ಷೇತ್ರದ ಐದು ಸಾವಿರ ಮತದಾರರಿಗೆ ಮನೆ ಬಾಗಿಲಿಗೆ ಬರುವ ಮತಗಟ್ಟೆಯಲ್ಲಿ ಮತದಾನ ಮಾಡುವ ಅವಕಾಶ ಸಿಗಲಿದೆ. ಚುನಾವಣಾ ಇತಿಹಾಸದಲ್ಲಿ ಇದೇ ಮೊದಲ ಸಲ ಇವರ ಮನೆ ಬಾಗಿಲಿಗೆ ಮತಗಟ್ಟೆ ಹೋಗುತ್ತಿದೆ, ಅದೂ ಚುನಾವಣೆ ಮತದಾನ ದಿನಾಂಕ ಇನ್ನೂ ವಾರ ಇರುವ ಮೊದಲೇ ಇವರೆಲ್ಲ ಅವರಿಗೆ ಬೇಕಾದವರಿಗೆ ಮತ ಹಾಕಲಿದ್ದಾರೆ. ಇದು ಅಂಚೆ ಮತದಾನಕ್ಕಿಂತಲು ಭಿನ್ನವಾಗಿದೆ ಎಂಬುದು ಕುತೂಹಲಕಾರಿ ವಿಷಯ.

      ಪ್ರತಿ ಮನೆಗೂ ಮತಗಟ್ಟೆಯೊಂದಿಗೆ ಚುನಾವಣಾ ಸಿಬ್ಬಂದಿ ತೆರಳಿ ಮತ ಹಾಕಿಸಿಕೊಂಡು ಬರಲಿದ್ದಾರೆ. ಯಾವುದೇ ಮತದಾರ ಮತದಾನದಿಂದ ಹೊರಗುಳಿಯಬಾರದು ಎಂಬ ಉದ್ದೇಶದಿಂದ ಚುನಾವಣಾ ಆಯೋಗ ಈ ನಿರ್ಧಾರಕ್ಕೆ ಬಂದಿದೆ.

      ಕೋವಿಡ್-19 ಸಂಕಷ್ಟದಲ್ಲಿ ಮೊದಲಬಾರಿಗೆ ರಾಜ್ಯದಲ್ಲಿ ಎದುರಾಗಿರುವ ಉಪಚುನಾವಣೆಯಲ್ಲಿ ಕೋವಿಡ್ ಪಾವಿಟಿವ್ ವ್ಯಕ್ತಿ, 80 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ಮತ್ತು ವಿಕಲಚೇತನರಿಗೆ ಸುಗಮವಾಗಿ ಮತ ಚಲಾಯಿಸಲು ಚುನಾವಣಾ ಆಯೋಗ ಇಂತಹ ಅವಕಾಶ ನೀಡಿರುವುದು ಮತದಾರರ ಮೆಚ್ಚುಗೆಗೆ ಪಾತ್ರವಾಗಿದೆ.

      ಸಿರಾ ವಿಧಾನಸಭಾ ಕ್ಷೇತ್ರಕ್ಕೆ ನವೆಂಬರ್ 3ರಂದು ನಡೆಯುತ್ತಿರುವ ಮತದಾನಕ್ಕೆ ಮೊದಲೇ ಈ ಪ್ರಕ್ರಿಯೆ ಪೂರ್ಣಗೊಳಿಸಲು ಸಂಪೂರ್ಣ ಸಿದ್ದತೆಯನ್ನು ಮಾಡಿಕೊಳ್ಳಲಾಗಿದೆ.

      ಈ ಬಗ್ಗೆ ಎರಡೂ ವಿಧಾನಸಭಾ ಕ್ಷೇತ್ರದಲ್ಲಿ ಸಿಬ್ಬಂದಿಗಳಿಗೆ ತರಬೇತಿ ನೀಡಿದ್ದು, ಇದಕ್ಕೂ 15 ದಿನಗಳ ಮೊದಲೇ ಮತಗಟ್ಟೆ ಅಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ಕಂಡುಬರುವ ಕೋವಿಡ್ ಪಾಸಿಟಿವ್, 80ವರ್ಷ ಮೇಲ್ಪಟ್ಟ ಹಾಗೂವಿಕಲಚೇತನರ ಮಾಹಿತಿಯನ್ನು ಚುನಾವಣಾಧಿಕಾರಿಗಳಿಗೆ ನೀಡಿ, ಅವರಲ್ಲಿ ಸ್ವ-ಇಚ್ಛೆಯಿಂದ ಮತಗಟ್ಟೆ ಕೇಂದ್ರಕ್ಕೆ ಖುದ್ದಾಗಿ ಬಂದು ಮತದಾನದಂದೇ ಮತ ಚಲಾಯಿಸಲು ಒಪ್ಪಿರುವ ಹಾಗೂ ತಿರಸ್ಕರಿಸಿರುವ ಮತದಾರರ ಪಟ್ಟಿಯನ್ನು ನೀಡಿ, ಅಂತಿಮವಾಗಿ ಪಟ್ಟಿ ತಯಾರಿಸಲಾಗಿದೆ.

      ಇದೇ ತಿಂಗಳ 25 ರಿಂದ 27ರವರೆಗೆ ಮೊದಲನೇ ಸುತ್ತಿನ ಮತದಾನ ನಡೆಯಲಿದ್ದು, ದಿ:29 ರಿಂದ 31ರವೆರೆಗೆ ಎರಡನೇ ಸುತ್ತಿನಲ್ಲಿ ಮತದಾನ ಮಾಡಲು ಅವಕಾಶ ಕಲ್ಪಿಸಲಾಗಿದೆ.

       ಪ್ರತಿ ಪತಗಟ್ಟೆಯಲ್ಲೂ ಮತಗಟ್ಟೆ ಹಂತದ ಅಧಿಕಾರಿಗಳು ಸಂಬಂಧಿಸಿದ ಮತದಾರರಿಗೆ ಮೊದಲೇ ತಿಳುವಳಿಕೆ ಪತ್ರ ತಲುಪಿಸಿದ್ದು, ಅದರಲ್ಲಿ ಮತದಾನ ಅಧಿಕಾರಿಗಳು ಮನೆಗೆ ಬರುವ ದಿನಾಂಕ ಮತ್ತು ಸಮಯವನ್ನು ನಿಗದಿಪಡಿಸಲಾಗಿದೆ. ಅದರಂತೆ ಮತದಾರರು ಮನೆಯಲ್ಲಿ ಹಾಜರಿದ್ದು ನಿಯಮಗಳ ಅನುಸಾರ ಘೋಷಣಾ ಪತ್ರಕ್ಕೆ ಸಹಿ ಹಾಕಿ, ವಯಸ್ಸಿನ ದಾಖಲೆ ಹಾಗೂ ಸೂಕ್ತ ಗುರುತಿನ ದಾಖಲೆ ಸಲ್ಲಿಸಿ, ಮತದಾನ ಮಾಡಬಹುದಾಗಿದೆ.ಪ್ರತಿ ಮತದಾರನಿಗೂ 10-12 ನಿಮಿಷ ಸಮಯ ನಿಗದಿ ಮಾಡಿದ್ದು, ಮತದಾನದ ಎಲ್ಲಾ ಹಂತದ ಪ್ರಕ್ರಿಯೆಗಳನ್ನು ಸಂಪೂರ್ಣವಾಗಿ ವಿಡಿಯೋ ಚಿತ್ರೀಕರಣ ಮಾಡಲಾಗುತ್ತದೆ.

      ತಂಡದಲ್ಲಿ ಇಬ್ಬರು ಮತದಾನ ಅಧಿಕಾರಿಗಳು, ಬಿಎಲ್‍ಓ, ಒಬ್ಬರು ಪೊಲೀಸ್ ಸಿಬ್ಬಂದಿ ಸೇರಿದಂತೆ ವಿಡಿಯೋಗ್ರಾಫರ್ ಸೇರಿದಂತೆ 5 ಜನ ಸಿಬ್ಬಂದಿ ಇರುವರು. ಈ ಸಂದರ್ಭದಲ್ಲಿ ಕೋವಿಡ್ ಸಂಬಂಧಿಸಿದಂತೆ ಸರ್ಕಾರ ನಿಗದಿಪಡಿಸಿರುವ ಎಲ್ಲಾ ಸುರಕ್ಷತಾ ನಿಯಮಗಳನ್ನು ಅನುಸರಿಸುವುದು ಕಡ್ಡಾಯ.ಒಂದು ತಂಡಕ್ಕೆ 150 ಮತದಾರರ ಪಟ್ಟಿ ನೀಡಲಿದ್ದು, ಪ್ರತಿದಿನ 50 ಮತದಾರರಿಂದ ಮಾತ್ರ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿದೆ.

      ಅಂದಿನ ಮತದಾನದ ಬಗ್ಗೆ ಅಂದು ಸಂಜೆಯೇ ಮಾಹಿತಿ ನೀಡುವುದು. ಒಂದು ವೇಳೆ ಅಧಿಕಾರಿಗಳು ಭೇಟಿ ನೀಡಿದ ಸಂದರ್ಭದಲ್ಲಿ ಮತದಾರ ಹಾಜರಿರಲಿಲ್ಲವಾದರೆ, ಮತ್ತೊಂದು ಸುತ್ತಿನಲ್ಲಿ ಮತದಾನಕ್ಕೆ ಅವಕಾಶ ಕಲ್ಪಿಸಿದ್ದು, ಅಂದೂ ಸಹ ಮತದಾನ ಮಾಡದಿದ್ದರೆ ನವೆಂಬರ್ 3 ರಂದು ನಡೆಯುವ ಮತದಾನ ಸಂದರ್ಭದಲ್ಲಿ ಮತದಾನ ಮಾಡಲು ಅರ್ಹತೆಯನ್ನು ಕಳೆದುಕೊಳ್ಳುವರು.

      ಈ ವ್ಯವಸ್ಥೆಯನ್ನು ಪ್ರಾಯೋಗಿಕವಾಗಿ ಜಾರಿ ಮಾಡಿರುವ ಚುನಾವಣಾ ಆಯೋಗ, ಇಂತಹ ಮತದಾರರಿಗೆ ನೀಡುವ ಮತಪತ್ರಗಳನ್ನು ಪೆÇೀಸ್ಟಲ್ ಬ್ಯಾಲೆಟ್ (ಅಂಚೆ ಮತಪತ್ರ) ಎಂದು ಪರಿಗಣಿಸಿ, ಸಂಬಂಧಿಸಿದ ಮತದಾರರ ಪಟ್ಟಿಯಲ್ಲಿ PB PWD, PB 80+ ಎಂಬ SEAL ಹಾಕಲಾಗುತ್ತದೆ.

      ಕೋವಿಡ್ ಪಾಸಿಟಿವ್ ಬಂದಿರುವ ವ್ಯಕ್ತಿಗೂ ಮತದಾನಕ್ಕೆ ಅವಕಾಶ ಕಲ್ಪಿಸಿದ್ದು, ಒಬ್ಬರು ಆರೋಗ್ಯ ಸಿಬ್ಬಂದಿಯ, ಪಿಪಿಇ ಕಿಟ್ ಧರಿಸಿ, ಸುರಕ್ಷತಾ ಕ್ರಮಗಳೊಂದಿಗೆ ಮತ ಚಲಾಯಿಸಲು ಅವಕಾಶ ಕಲ್ಪಿಸಲಾಗಿದೆ. ಈ ರೀತಿಯ ಮತದಾನ ವೇಳೆ ಎಲ್ಲಾ ಮತದಾರರು ಮತ್ತು ಚುನಾವಣಾ ಸಿಬ್ಬಂದಿ ಎಸ್.ಓ.ಪಿ. (ಪ್ರಮಾಣಿತ ಕಾರ್ಯಾಚರಣಾ ವಿಧಾನ) ಅನುಸರಿಸಬೇಕು.ಒಂದು ವೇಳೆ ಮತದಾನದ ಸಂದರ್ಭದಲ್ಲಿ ಮಳೆ ಸುರಿಯುತ್ತಿದ್ದರೆ, ಅದನ್ನು ವಿಡಿಯೋ ಚಿತ್ರೀಕರಣ ಮಾಡಿ, ಮನೆಯ ಒಳಗೆ ಮತದಾನಕ್ಕೆ ಅವಕಾಶ ಕಲ್ಪಿಸಲಾಗುತ್ತದೆ.

      ಸಿರಾ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಒಟ್ಟು 330 ಮತಗಟ್ಟೆಗಳಲ್ಲಿ 4941 ಮತದಾರರು ಹಿರಿಯ ನಾಗರಿಕರು, 3566 ವಿಕಲಚೇತನರು ಹಾಗೂ 200 ಮಂದಿ ಮತದಾರರು ಕೋವಿಡ್-19 ಪಾಸಿಟಿವ್ ವ್ಯಕ್ತಿಗಳನ್ನು ಗುರುತಿಸಿದ್ದು, ಅವರಲ್ಲಿ 2790 ಹಿರಿಯ ನಾಗರಿಕರು, 2093 ಮಂದಿ ವಿಕಲಚೇತನರು, 136 ಮಂದಿ ಕೋವಿಡ್ ಬಾಧಿತ ಮತದಾರರು ಸೇರಿದಂತೆ ಒಟ್ಟು 5019 ಮಂದಿ ತಾವಿರುವಲ್ಲಿಯೇ ಮತದಾನ ಮಾಡುತ್ತಿದ್ದು, ಈ ಬಾರಿಯ ಉಪಚುನಾವಣೆಯ ವಿಶೇಷವಾಗಿದೆ.

(Visited 6 times, 1 visits today)
Previous Articleಚಿ.ನಾ.ಹಳ್ಳಿ : ಘನತ್ಯಾಜ್ಯ ವಸ್ತು ನಿರ್ವಹಣೆ ವಿಧಿ ಪಾಲಿಸದವರಿಗೆ ದಂಡ!!
Next Article ಹುಳಿಯಾರಿನಲ್ಲಿ ಹಬ್ಬದ ಖರೀದಿ ಭರಾಟೆ : ಅಂತರ ಮರೆತ ಜನ
News Desk Benkiyabale

Related Posts

ಮಳೆಗಾಲದಲ್ಲೇ ಕುಡಿಯುವ ನೀರಿಗೆ ಹಾಹಾಕಾರ

September 07, 2026 5:14 pm news

ತುಮಕೂರಿನಲ್ಲಿ ಮಣ್ಣಿನ ಗಣೇಶನಿಗೆ ಮಕ್ಕಳ ಕೈಚಳಕ

September 07, 2026 4:56 pm news

ಮಠ ಮಾನ್ಯಗಳ ನೆರವಿನ ಫಲವಾಗಿ ವೀರಶೈವ, ಲಿಂಗಾಯಿತ ಸಮುದಾಯ ಶೈಕ್ಷಣಿಕವಾಗಿ ಮುಂದುವರೆದಿದೆ ಶಾಸಕ ಜಿ.ಬಿ.ಜೋತಿಗಣೇಶ್ ಅಭಿಪ್ರಾಯ

September 07, 2026 4:54 pm news
ತಾಜಾ ಸುದ್ಧಿಗಳು
news

ಮಳೆಗಾಲದಲ್ಲೇ ಕುಡಿಯುವ ನೀರಿಗೆ ಹಾಹಾಕಾರ

September 07, 2026 5:14 pm
news

ತುಮಕೂರಿನಲ್ಲಿ ಮಣ್ಣಿನ ಗಣೇಶನಿಗೆ ಮಕ್ಕಳ ಕೈಚಳಕ

September 07, 2026 4:56 pm
news

ಮಠ ಮಾನ್ಯಗಳ ನೆರವಿನ ಫಲವಾಗಿ ವೀರಶೈವ, ಲಿಂಗಾಯಿತ ಸಮುದಾಯ ಶೈಕ್ಷಣಿಕವಾಗಿ ಮುಂದುವರೆದಿದೆ ಶಾಸಕ ಜಿ.ಬಿ.ಜೋತಿಗಣೇಶ್ ಅಭಿಪ್ರಾಯ

September 07, 2026 4:54 pm
news

ಗ್ರಾಮೀಣ ಪ್ರದೇಶದ ಕುಟುಂಬಗಳಿಗೆ ಉದ್ಯೋಗ ಭದ್ರತೆ : ಪಿಡಿಒ ಮುದ್ದಲಿಂಗಯ್ಯ

September 07, 2026 4:52 pm
news

ಇತಿಹಾಸ ಮರುನಿರ್ಮಾಣದಲ್ಲಿ ಶಿಲ್ಪಿಗಳ ಪಾತ್ರ ಮಹತ್ವದ್ದು

September 07, 2026 4:51 pm
news

ಶಿಕ್ಷಕ ರಾಷ್ಟç ನಿರ್ಮಾಣದ ಶಿಲ್ಪಿ: ಡಾ.ಶಿವಕುಮಾರಯ್ಯ

September 07, 2026 4:49 pm
Our Youtube Channel
Our Picks

ಮಳೆಗಾಲದಲ್ಲೇ ಕುಡಿಯುವ ನೀರಿಗೆ ಹಾಹಾಕಾರ

September 07, 2026 5:14 pm

ತುಮಕೂರಿನಲ್ಲಿ ಮಣ್ಣಿನ ಗಣೇಶನಿಗೆ ಮಕ್ಕಳ ಕೈಚಳಕ

September 07, 2026 4:56 pm

ಮಠ ಮಾನ್ಯಗಳ ನೆರವಿನ ಫಲವಾಗಿ ವೀರಶೈವ, ಲಿಂಗಾಯಿತ ಸಮುದಾಯ ಶೈಕ್ಷಣಿಕವಾಗಿ ಮುಂದುವರೆದಿದೆ ಶಾಸಕ ಜಿ.ಬಿ.ಜೋತಿಗಣೇಶ್ ಅಭಿಪ್ರಾಯ

September 07, 2026 4:54 pm

ಗ್ರಾಮೀಣ ಪ್ರದೇಶದ ಕುಟುಂಬಗಳಿಗೆ ಉದ್ಯೋಗ ಭದ್ರತೆ : ಪಿಡಿಒ ಮುದ್ದಲಿಂಗಯ್ಯ

September 07, 2026 4:52 pm

ಇತಿಹಾಸ ಮರುನಿರ್ಮಾಣದಲ್ಲಿ ಶಿಲ್ಪಿಗಳ ಪಾತ್ರ ಮಹತ್ವದ್ದು

September 07, 2026 4:51 pm
News Tags
Accident Ambedkar Araga jnanendra BJP Chikkanayakanahalli Congress crime DC dcm dr.g.parameshwar gs basavaraju Gubbi Jds kannada news karnataka kodigenahalli Koratagere kunigal local news madhugiri Mla Mla jyothiganesh mlc r.rajendra pavagada Police Protest SIR tumakur tumkur Tumkur dc yspatil Tumkur mahanagara palike tumkur news turuvekere University ಕಾಂಗ್ರೆಸ್ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಕೊರಟಗೆರೆ: ಚಿಕ್ಕನಾಯಕನಹಳ್ಳಿ ಜಿಲ್ಲಾಡಳಿತ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತುಮಕೂರು: ತುಮಕೂರು ವಿವಿ ತುಮಕೂರು ವಿಶ್ವವಿದ್ಯಾನಿಲಯ ತುರುವೇಕೆರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹುಳಿಯಾರು
About us
About us

BBNews 24×7 is Kannada Online News Portal from Benkiyabale Kannada News Paper Team. Benkiyabale is very popular Daily Newspaper publishing from Tumkur City.

Email us: benkiyabale@gmail.com
Contact: +1-320-0123-451


• Terms of Service
• Privacy Policy

Facebook Instagram YouTube WhatsApp RSS
ಅಂಕಣಗಳು

ಬಡವರ ಗೋಳು ಕೇಳುವರ‍್ಯಾರು

June 15, 2026 5:20 pm

ಬಡವರ ಕಣ್ಣೀರು ತರಿಸುತ್ತಿರುವ ಪಡಿತರ

November 21, 2024 6:06 pm

ಶಕ್ತಿ ಯೋಜನೆ : ರಸ್ತೆ ಸಾರಿಗೆ ನಿಗಮಕ್ಕೆ ೨೪.೪೨ ಕೋಟಿ ಆದಾಯ

August 03, 2023 4:59 pm

ಜಿಲ್ಲೆಯಲ್ಲಿ ಕಸಾಪ ಸಾಹಿತ್ಯ ಸಮ್ಮೇಳನಗಳು ಯಶಸ್ವಿ

December 13, 2022 5:26 pm
Don't Miss
news

ಮಳೆಗಾಲದಲ್ಲೇ ಕುಡಿಯುವ ನೀರಿಗೆ ಹಾಹಾಕಾರ

By News Desk BenkiyabaleSeptember 07, 2026 5:14 pm

ಕೊರಟಗೆರೆ: ಬೇಸಿಗೆ ಇನ್ನೂ ಆರಂಭವಾಗಿಲ್ಲ. ಆದರೆ ಕೊರಟಗೆರೆ ಪುರಸಭೆ ವ್ಯಾಪ್ತಿಯ ಕಲ್ಲುಗುಟ್ಟರಹಳ್ಳಿ ಹಾಗೂ ಕೃಷ್ಣರಾಜಪುರ-೨ ಗ್ರಾಮಗಳಲ್ಲಿ ಈಗಾಗಲೇ ಕುಡಿಯುವ ನೀರಿನ…

ತುಮಕೂರಿನಲ್ಲಿ ಮಣ್ಣಿನ ಗಣೇಶನಿಗೆ ಮಕ್ಕಳ ಕೈಚಳಕ

September 07, 2026 4:56 pm

ಮಠ ಮಾನ್ಯಗಳ ನೆರವಿನ ಫಲವಾಗಿ ವೀರಶೈವ, ಲಿಂಗಾಯಿತ ಸಮುದಾಯ ಶೈಕ್ಷಣಿಕವಾಗಿ ಮುಂದುವರೆದಿದೆ ಶಾಸಕ ಜಿ.ಬಿ.ಜೋತಿಗಣೇಶ್ ಅಭಿಪ್ರಾಯ

September 07, 2026 4:54 pm

ಗ್ರಾಮೀಣ ಪ್ರದೇಶದ ಕುಟುಂಬಗಳಿಗೆ ಉದ್ಯೋಗ ಭದ್ರತೆ : ಪಿಡಿಒ ಮುದ್ದಲಿಂಗಯ್ಯ

September 07, 2026 4:52 pm
News by Date
September 2026
M T W T F S S
 123456
78910111213
14151617181920
21222324252627
282930  
« Aug    
Facebook Twitter Instagram YouTube LinkedIn WhatsApp RSS
  • Home
  • ಅಂಕಣಗಳು
  • ಅಡುಗೆ
  • ನಿತ್ಯ ಭವಿಷ್ಯ
  • ಪ್ರವಾಸ
  • ಸುಭಾಷಿತ
© 2016-2026 Benkiyabale - Kannada Online News Portal. Designed by Digicube Solutions.

Type above and press Enter to search. Press Esc to cancel.