ಶಿರಾ:

      ನಗರದ ಖಾಸಗಿ ಬಸ್ ನಿಲ್ದಾಣದಲ್ಲಿ ಕಳೆದೆರಡು ದಿನಗಳಿಂದ ಬಂದ ಜಿಟಿ ಜಿಟಿ ಮಳೆಯಿಂದಾಗಿ ಇಡೀ ಬಸ್‍ನಿಲ್ದಾಣ ಕೆಸರು ಗದ್ದೆಯಾಗಿದ್ದು, ಸದರಿ ನಿಲ್ದಾಣದ ಇಂತಹ ಅವ್ಯವಸ್ಥೆಯನ್ನು ಸರಿಪಡಿಸುವಲ್ಲಿ ನಗರಸಭೆ ವಿಫಲಗೊಂಡಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

      ನಗರದ ಖಾಸಗಿ ಬಸ್ ನಿಲ್ದಾಣದ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದ್ದು, ಈಗಾಗಲೇ ನಿಲ್ದಾಣಕ್ಕೆ ಮೇಲ್ಛಾವಣಿ ಹಾಕಲಾಗಿದೆ. ಈ ನಡುವೆ ಈ ಹಿಂದೆ ಇದ್ದ ನಿಲ್ದಾಣದ ನೆಲಹಾಸಿನ ಮಣ್ಣನ್ನು ತೆಗೆದು ಗುತ್ತಿಗೆದಾರರು ಜೇಡಿಮಣ್ಣಿನಂತಹ ಮಣ್ಣನ್ನು ನಿಲ್ದಾಣದಲ್ಲಿ ಹಾಕಿದ ಪರಿಣಾಮ ಪ್ರಯಾಣಿಕರು ಹಾಗೂ ಬಸ್‍ಗಳು ಸಂಚರಿಸಲು ತೀವ್ರತರವಾದ ತೊಂದರೆಯಾಗಿದೆ ಎಂದು ಸಾರ್ವಜನಿಕರು ದೂರಿದ್ದಾರೆ.

      ಕೆಸರು ಗದ್ದೆಯಂತಾದ ರಸ್ತೆಯಲ್ಲಿ ಪುಟ್ಟಮಕ್ಕಳು, ವಯಸ್ಸಾದವರು ಓಡಾಡುವುದೇ ಕಷ್ಟವಾಗಿದ್ದು, ಈ ಕೂಡಲೆ ನಗರಸಭೆ ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಲಾಗಿದೆ.

(Visited 56 times, 1 visits today)