ದಲಿತ ಸಮುದಾಯಕ್ಕೆ ರುದ್ರಭೂಮಿ ಮಂಜೂರು ಮಾಡುವಂತೆ ಒತ್ತಾಯ

ಗುಬ್ಬಿ : ತಾಲ್ಲೂಕಿನ ದಲಿತ ಸಮುದಾಯದವರಿಗೆ ರುದ್ರ ಭೂಮಿ ಮಂಜೂರಾತಿ ಮಾಡಬೇಕು ಎಂದು ದಲಿತ ಮುಖಂಡರು ಸಭೆಯಲ್ಲಿ ತಾಲೂಕು ಆಡಳಿತವನ್ನು ಆಗ್ರಹಿಸಿದರು. ದ.ಸಂ.ಸ ಜಿಲ್ಲಾ ಸಂಚಾಲಕ ನಿಟ್ಟೂರು ರಂಗಸ್ವಾಮಿ ಮಾತನಾಡಿ ತಾಲೂಕು ಆಡಳಿತದ ವತಿಯಿಂದ ತಾಲೂಕು ಪಂಚಾಯಿತಿ ಸಂಭಾಗಣದಲ್ಲಿ ಆಯೋಜಿಸಿದ್ದ ದಲಿತರ ಕುಂದುಕೊರತೆ ಸಭೆಯಲ್ಲಿ ಮಾತನಾಡಿದ ಮುಖಂಡರು ತಾಲ್ಲೂಕಿನ ಯಾವುದೇ ದಲಿತ ಗ್ರಾಮದಲ್ಲಿ ದಲಿತರಿಗೆ ಸ್ಮಶಾನ ವಿಲ್ಲ ಇರುವ ಕಡೆ ಪ್ರಭಾವಿಗಳು ಜಾಗವನ್ನು ಒತ್ತುವರಿ ಹಾಗೂ ಖಾತೆ ಮಾಡಿಸಿಕೊಂಡಿದ್ದಾರೆ ದಲಿತರು ಸತ್ತರೆ ಶವ ಸಂಸ್ಕಾರಕ್ಕೆ ಬಹಳ ತೊಂದರೆ ಯಾಗುತ್ತಿದೆ.ಸಂಬಂಧ ಪಟ್ಟ ಇಲಾಖೆಯ ಅಧಿಕಾರಿಗಳು ದಲಿತರಿಗೆ ಸ್ಪಂದಿಸುವ ನಿಟ್ಟಿನಲ್ಲಿ ಮುಂದಾಗುತ್ತಿಲ್ಲ ಕೇವಲ ಸಭೆಯಲ್ಲಿ ಮಾತ್ರ ದಲಿತರ ಸಮಸ್ಯೆ ಬಗೆಹರಿಸುತ್ತೇವೆ ಎಂದು ಹೇಳುವ ಅಧಿಕಾರಿಗಳು ಇದುವರೆವಿಗೂ ಸಮಸ್ಯೆ ಬಗೆಹರಿದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಮುಖಂಡ ನಿಟ್ಟೂರು ನಾಗರಾಜ್ ಮಾತನಾಡಿ ತಾಲ್ಲೂಕಿನಲ್ಲಿ ದಲಿತರ ಜಮೀನು ಒತ್ತುವರಿಯಾಗಿದೆ ಕೆಲವು ಗ್ರಾಮದಲ್ಲಿ ದಲಿತರಿಗೆ ಮೀಸಲಿರುವ…

ಮುಂದೆ ಓದಿ...

ನಿಖಿಲ್ ಇನ್ನು ಚಿಕ್ಕವನು ಅವನ ಹೇಳಿಕೆಗೆ ಪ್ರತಿಕ್ರಿಯಿಸುವ ಅವಶ್ಯಕತೆಯಿಲ್ಲ: ವಾಸಣ್ಣ

ಗುಬ್ಬಿ: ಜೆಡಿಎಸ್ ನಿಂದ ಯಾರು ನನ್ನನ್ನು ಕಳುಹಿಸಿರುವವರು ನಾನೇನು ಹೋಗಿದ್ದೀನಾ ನಾನು ಜನತಾ ದಳದಲ್ಲೇ ಇದ್ದೀನಲ್ಲ, ನಿಖಿಲ್ ಇನ್ನು ಚಿಕ್ಕ ಹುಡುಗ ಅವನ ಹೇಳಿಕೆಗೆ ಪ್ರತಿಕ್ರಿಯೆ ನೀಡುವ ಅವಶ್ಯಕತೆ ಇಲ್ಲ ಎಂದು ಶಾಸಕ ಎಸ್.ಆರ್. ಶ್ರೀನಿವಾಸ್ ತಿಳಿಸಿದರು. ತಾಲೂಕಿನ ದೊಡ್ಡಗುಣಿ ಗ್ರಾಮ ಪಂಚಾಯತ್ ವ್ಯಾಪ್ತಿಗೆ ಬರುವ ಕಲ್ಲೇನಹಳ್ಳಿ, ಹಂಡನಹಳ್ಳಿ, ನೆರಲೇಕೆರೆ, ತಗ್ಗಿಹಳ್ಳಿ ಪೇರಮಸಂದ್ರ ಹಾಗೂ ದೊಡ್ಡಗುಣಿ ಗ್ರಾಮದ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಅವರೇ ಹೇಳಿದಾರಲ್ಲ ಜೆಡಿಎಸ್‍ನಿಂದ ಯಾರು ನನ್ನನ್ನು ಕಳುಹಿಸಿರುವವರು ನಾನೇನು ಹೋಗಿದ್ದೀನಾ? ನಾನು ಜನತಾ ದಳದಲ್ಲೇ ಇದ್ದೀನಲ್ಲ, ನಿಖಿಲ್ ಇನ್ನು ಚಿಕ್ಕ ಹುಡುಗ ಅವನ ಹೇಳಿಕೆಗೆ ಪ್ರತಿಕ್ರಿಯೆ ನೀಡುವ ಅವಶ್ಯಕತೆ ಇಲ್ಲ ಎಂದ ಅವರು ಅವರಪ್ಪನನ್ನು ಹೋಗಿ ಕೇಳುವಂತೆ ಹೇಳಿದ ಅವರು ಅವರಪ್ಪನನ್ನು ಕೇಳಿದರೆ ಸರಿಯಾದ ಉತ್ತರವನ್ನು ಅವರೆ ಕೊಡುತ್ತಾರೆ ಅವನು ಇನ್ನು ಚಿಕ್ಕ ಹುಡುಗ ಅವನ ಮಾತಿಗೆ ಉತ್ತರ…

ಮುಂದೆ ಓದಿ...

ಅರಗ ಜ್ಞಾನೇಂದ್ರ-ಮಾಧುಸ್ವಾಮಿಯವರಿಗೆ ದಲಿತರ ಬಗ್ಗೆ ಕಾಳಜಿಯಿಲ್ಲ!

ಗುಬ್ಬಿ: ತಾಲ್ಲೂಕಿನ ಕಡಬ ಹೋಬಳಿಯ ಪೆದ್ದನಹಳ್ಳಿ ಜೋಡಿ ಹತ್ಯೆಯ ಘಟನೆ ಇಡೀ ರಾಜ್ಯವೇ ಬೆಚ್ಚಿ ಬೀಳುವಂತಾಗಿದೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕ ಹೆಣ್ಣೂರು ಶ್ರೀನಿವಾಸ್ ತಿಳಿಸಿದರು. ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಜಿಲ್ಲೆಯ ಉಸ್ತುವಾರಿ ಸಚಿವ ಅರಗ ಜ್ಞಾನೇಂದ್ರ ಹಾಗೂ ಕಾನೂನು ಸಚಿವ ಜೆ ಸಿ ಮಾಧುಸ್ವಾಮಿ ಈ ವಿಚಾರದಲ್ಲಿ ಇದುವರೆಗೂ ತುಟಿ ಬಿಚ್ಚಿಲ್ಲ ಅವರಿಗೆ ದಲಿತರ ಬಗ್ಗೆ ಯಾವುದೇ ರೀತಿಯ ಕಾಳಜಿ ಇಲ್ಲ ಹಾಗಾಗಿ ಅವರಿಬ್ಬರು ಕೂಡ ರಾಜಿನಾಮೆಯನ್ನು ನೀಡಬೇಕು ಎಂದು ಒತ್ತಾಯಿಸಿದ ಅವರು ಈ ಘಟನೆ ಮಾಡಿರುವಂತಹ ನಂದೀಶ್ ಹಾಗೂ ರೌಡಿ ತಂಡವನ್ನು ಕೂಡಲೆ ಬಂಧಿಸಬೇಕು ಇದು ಕೇವಲ ಆಕಸ್ಮಿಕವಾಗಿ ನಡೆದಿರುವ ಘಟನೆಯಲ್ಲ ಮಾಡಬೇಕು ಎಂಬ ಸಂಚಿನಿಂದಲೇ ಮಾಡಲಾಗಿದೆ ಈ ಘಟನೆ ಹೊಂದಿರುವಂತಹ ನಂದೀಶ್ ಹಾಗೂ ಪಟಾಲಂ ಅವರ ಆಸ್ತಿಯನ್ನು ಸರ್ಕಾರ ಜಪ್ತಿ ಮಾಡಬೇಕು ಎಂದು…

ಮುಂದೆ ಓದಿ...

ಸಮಾಜದಲ್ಲಿ ಶಾಂತಿ ಕದಡುವ ಸ್ವಾಮಿಗಳನ್ನು ದೂರವಿಡುವುದು ಒಳಿತು: ವಾಸಣ್ಣ

ಗುಬ್ಬಿ: ಸಮಾಜದಲ್ಲಿ ಶಾಂತಿ ಕದಡುವಂತಹ ಸ್ವಾಮಿಗಳನ್ನು ಸಮಾಜದಿಂದ ದೂರವಿಡುವುದು ಒಳಿತು ಎಂದು ಶಾಸಕ ಎಸ್.ಆರ್.ಶ್ರೀನಿವಾಸ್ ತಿಳಿಸಿದರು. ತಾಲ್ಲೂಕಿನ ನಿಟ್ಟೂರು ಗ್ರಾಮದ ಜೈನಿಗರ ಬಡಾವಣೆಯಲ್ಲಿ ಸುಮಾರು 24 ಲಕ್ಷ ರೂಗಳ ರಸ್ತೆ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು ಕಾಳಿಸ್ವಾಮಿಯ ಬಗ್ಗೆ ಯಾವುದೇ ಮಾತನಾಡಿಲ್ಲ. ಯಾರು ಸಮಾಜದಲ್ಲಿ ಯಾರು ಅಶಾಂತಿ ಮೂಡಿಸುವ ಸ್ವಾಮಿಗಳ ಬಗ್ಗೆ ಮಾತನಾಡಿದ್ದೇನೆ. ಹೊರತು ಈ ಕಾಳಿಸ್ವಾಮಿ ಯಾವ ಕಾರಣಕ್ಕೋಸ್ಕರ ಹೇಳಿಕೆ ನೀಡಿದ್ದಾರೋ ಗೊತ್ತಾಗುತ್ತಿಲ್ಲ. ಮಠಾಧೀಶರು ಹಾಗೂ ಸ್ವಾಮಿಗಳ ಮಾತುಗಳಲ್ಲಿ ಹಿಡಿತವಿರಬೇಕು. ಯಾವುದೇ ಸ್ವಾಮಿಗಳನ್ನು ನೋಡಿದರೆ ಕಾಲು ಮುಟ್ಟಿ ನಮಸ್ಕರಿಸುವಂತಹ ಭಾವನೆಯನ್ನು ಸಾರ್ವಜನಿಕರಲ್ಲಿ ಮೂಡಿಸುವಂತಹ ಸ್ವಾಮಿಗಳು ಲಕ್ಷಾಂತರ ಭಕ್ತರ ಸೇವೆಯಲ್ಲಿ ಹಾಗೂ ಸಮಾಜವನ್ನು ತಿದ್ದುವಂತಹ ಸ್ವಾಮಿಗಳು ಇದ್ದಾರೆ. ಕಾಳಿಸ್ವಾಮಿ ತುಂಬಿದ ಕೊಡ ಅಲ್ಲ ಅರ್ದಬರ್ದ ನೀರು ತುಂಬದ ಕೊಡ ಅಗಾಗಿ ಸರಿಯಾಗಿ ನಿಲ್ಲಲ್ಲು ಸಾಧ್ಯವಾಗುತ್ತಿಲ್ಲ. ಎಂದು ತಿಳಿಸಿದರು. ಸಮಾಜದಲ್ಲಿ ಹೊಡಕು ಮೂಡಿಸುವಂತಹ ಯಾವುದೇ ವ್ಯಕ್ತಿಯಾಗಲಿ ಆತನನ್ನು…

ಮುಂದೆ ಓದಿ...