BenkiyabaleBenkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
Facebook Instagram YouTube WhatsApp RSS
Trending
  • ಸ್ಲಂ ಮಕ್ಕಳು ಭವಿಷ್ಯ ದೃಷ್ಠಿಯಿಂದ ವಿದ್ಯಾವಂತರಾಗಿ ಜಿ.ಬಿ.ಜ್ಯೋತಿ ಗಣೇಶ್ ಕರೆ
  •  ಜು.೨೯ರವರೆಗೆ ಮನೆ-ಮನೆ ಭೇಟಿ
  • ದಲಿತರ ಭೂ ಹಕ್ಕು ಹೋರಾಟಗಳಿಗೆ ನ್ಯಾಯ ಒದಗಿಸಿ
  • ದಲಿತರ ಭೂ ಹಕ್ಕು ಹೋರಾಟಗಳಿಗೆ ನ್ಯಾಯ ಒದಗಿಸಿ
  • ಮತದಾರರ ಪಟ್ಟಿ ಸಮಗ್ರ ಪರಿಷ್ಕರಣೆ: ಬಿಎಲ್‌ಓಗಳಿಂದ ಮನೆ-ಮನೆ ಭೇಟಿ
  • ಇ-ಪೌತಿ ಖಾತಾ ಆಂದೋಲನ-೨ ಜಿಲ್ಲಾಧಿಕಾರಿಗಳಿಂದ ಅರ್ಜಿ ಸ್ವೀಕಾರ
  • ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ: ಪಿ.ರಘು
  • ಹುಳಿಯಾರಿನ ಏಕೈಕ ಶತಮಾನದ ಇತಿಹಾಸದ ಹೆಮ್ಮೆಯ ಕುರುಹು
Facebook Twitter Instagram YouTube RSS
Benkiyabale Benkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
BenkiyabaleBenkiyabale
Home » ತುಮಕೂರು : ಟಿಎಂಸಿಸಿ 4ನೇ ಎಟಿಎಂ ಕೇಂದ್ರ ಉದ್ಘಾಟನೆ!!
Trending

ತುಮಕೂರು : ಟಿಎಂಸಿಸಿ 4ನೇ ಎಟಿಎಂ ಕೇಂದ್ರ ಉದ್ಘಾಟನೆ!!

By News Desk BenkiyabaleUpdated:July 27, 2020 6:09 pm

ತುಮಕೂರು:

     ಸೌಹಾರ್ದ, ಸಹಕಾರ ಕ್ಷೇತ್ರದಲ್ಲಿ ತುಮಕೂರು ಮರ್ಚೆಂಟ್ಸ್ ಕ್ರೆಡಿಟ್ ಕೋ ಆಪರೇಟಿವ್ ಅಧ್ಯಕ್ಷ ಎನ್.ಎಸ್.ಜಯಕುಮಾರ್ ಅವರ ಸೇವೆ ಅನನ್ಯವಾದದ್ದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಅಭಿಪ್ರಾಯಪಟ್ಟರು.

     ತುಮಕೂರು ತಾಲ್ಲೂಕು ಯಲ್ಲಾಪುರದಲ್ಲಿ ಟಿಎಂಸಿಸಿ ನಾಲ್ಕನೇ ಎಟಿಎಂ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದ ಅವರು, ತುಮಕೂರಿನಿಂದ ಆರಂಭವಾದ ಟಿಎಂಸಿಸಿ ಕಾರ್ಯಚಟುವಟಿಕೆ ದೇಶದ ಹಲವೆಡೆ ಕಾರ್ಯನಿರ್ವಹಿಸುವಂತಾಗಿದ್ದು, ದೇಶ ವ್ಯಾಪಿ ಟಿಎಂಸಿಸಿ ಕಾರ್ಯನಿರ್ವಹಿಸುವಂತಾಗಲಿ ಎಂದು ಆಶಿಸಿದರು.

      ಬ್ಯಾಂಕ್ ಲಾಭವನ್ನು ಬಡವರ ಸೇವೆಗೆ ಉಪಯೋಗಿಸುವ ನಿಟ್ಟಿನಲ್ಲಿ ಹೆಜ್ಜೆಯನ್ನಿಟ್ಟಿರುವ ಟಿಎಂಸಿಸಿ ಈಗಾಗಲೇ ಕೊರೋನಾ ವಾರಿಯರ್ಸ್ ಗಳಿಗೆ ಪಿಪಿಇ ಕಿಟ್ ಹಾಗೂ ಪೌರ ಕಾರ್ಮಿಕರಿಗೆ ಸಮವಸ್ತ್ರಗಳನ್ನು ನೀಡಲು ಮುಂದೆ ಬಂದಿದ್ದು, ಇಂತಹ ಸೇವೆಯನ್ನು ಮಾಡಲು ಉಳ್ಳವರು ಮುಂದೆ ಬರಬೇಕೆಂದು ಸಲಹೆ ನೀಡಿದರು.

      ಟಿಎಂಸಿಸಿ ನಮ್ಮ ಬ್ಯಾಂಕ್ ಎನ್ನುವ ಭಾವನೆ ಜನರಲ್ಲಿ ಮೂಡಿರುವುದರಿಂದಲೇ ಇಂದು ಉತ್ತಮ ಸೇವೆಯನ್ನು ನೀಡುವುದರೊಂದಿಗೆ ಟಿಎಂಸಿಸಿ ಲಾಭಾಂಶವನ್ನು ಷೇರುದಾರರಿಗೆ ಒದಗಿಸುತ್ತಿದ್ದು, ಜನರ ನಂಬಿಕೆಯನ್ನು ಹೆಚ್ಚಿಸಿಕೊಂಡು ಬ್ಯಾಂಕ್ ಸೇವೆ ಇನ್ನಷ್ಟು ವಿಸ್ತರಿಸುವಂತಾಗಲಿ ಎಂದರು.

      ತುಮಕೂರು ಮರ್ಚೆಂಟ್ಸ್ ಕ್ರೆಡಿಟ್ ಕೋ ಆಪರೇಟಿವ್ ಅಧ್ಯಕ್ಷ ಎನ್.ಎಸ್.ಜಯಕುಮಾರ್ ಮಾತನಾಡಿ ಇಂದು ಪ್ರಾರಂಭಗೊಂಡಿರುವ ಎಂಟಿಎಂ ಮತ್ತು ಸರ್ವೀಸ್ ಸೆಂಟರ್ ನಿಂದ ಸುತ್ತಮುತ್ತಲಿನ ವ್ಯಾಪಾರಿಗಳಿಗೆ ಹಾಗೂ ಸಾರ್ವಜನಿಕರಿಗೆ ಉಪಯೋಗವಾಗಲಿದ್ದು, ಮುಂದಿನ ದಿನಗಳಲ್ಲಿ ಈ ಸೇವೆಯನ್ನು ಸಬ್ ಅರ್ಬನ್ ನಗರಗಳಿಂದ ಗ್ರಾಮಾಂತರ ಪ್ರದೇಶಗಳಿಗೆ ವಿಸ್ತರಿಸಲಾಗುವುದು ಎಂದು ಹೇಳಿದರು.

      ಡಿಜಿಟಲ್ ಇಂಡಿಯಾದಿಂದ ಸಬ್ ಅರ್ಬನ್ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ರಾಷ್ಟ್ರೀಯ ಬ್ಯಾಂಕ್‍ಗಳು ಸಮರ್ಪಕ ಸೇವೆಯನ್ನು ಒದಗಿಸುವುದರಲ್ಲಿ ಹಿಂದುಳಿದಿದ್ದು, ಸಹಕಾರ ಮತ್ತು ಸೌಹಾರ್ದಗಳು ಗ್ರಾಮಾಂತರ ಕ್ಷೇತ್ರದಲ್ಲಿ ಹಣಕಾಸು ಸೇವೆಯನ್ನು ಒದಗಿಸುವ ಮೂಲಕ ಗ್ರಾಮಾಂತರ ಪ್ರದೇಶಗಳಲ್ಲಿ ತಮ್ಮ ಚಟುವಟಿಕೆಯನ್ನು ಪ್ರಾರಂಭಿಸಲು ಮುಂದಾಗಿದ್ದು, ತುಮಕೂರು ಜಿಲ್ಲೆಯಲ್ಲಿ ಸಬ್ ಅರ್ಬನ್ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ಸೇವೆಯನ್ನು ಒದಗಿಸುತ್ತಿರುವ ಏಕೈಕ ಸಂಸ್ಥೆ ಟಿಎಂಸಿಸಿ ಎಂದು ತಿಳಿಸಿದರು.
ಟಿಎಂಸಿಸಿ ಬ್ಯಾಂಕ್‍ನಲ್ಲಿ 23 ಸಾವಿರ ಷೇರುದಾರರು ಹಾಗೂ ಖಾತೆದಾರರಿಗೆ ಬ್ಯಾಂಕ್ ವತಿಯಿಂದಲೇ 5 ಲಕ್ಷ ರೂವರೆಗೆ ಅಪಘಾತ ವಿಮೆಯನ್ನು ಮಾಡಿಸಲು ಕ್ರಮ ಕೈಗೊಳ್ಳಲಾಗಿದೆ, ಇದಕ್ಕಾಗಿ 20 ಲಕ್ಷ ರೂ ವೆಚ್ಚವಾಗಿದ್ದು, ಬ್ಯಾಂಕ್ ಖಾತೆದಾರರಿಗೆ ಲಾಭಾಂಶವನ್ನು ಪರೋಕ್ಷವಾಗಿ ಹಂಚುವ ಕೆಲಸವನ್ನು ಟಿಎಂಸಿಸಿ ಮಾಡುತ್ತಿದ್ದು, ಷೇರುದಾರರು ಹಾಗೂ ಖಾತೆದಾರರು ಇದರ ಉಪಯೋಗವನ್ನು ಪಡೆದುಕೊಳ್ಳಬೇಕು ಹಾಗೂ ಸಾರ್ವಜನಿಕರು ಸಹ ಟಿಎಂಸಿಸಿಯಲ್ಲಿ ವಹಿವಾಟು ಪ್ರಾರಂಭಿಸುವ ಮೂಲಕ ಈ ಉಪಯೋಗವನ್ನು ಸದುಪಯೋಗಪಡಿಸಿಕೊಳ್ಳುವಂತೆ ಮನವಿ ಮಾಡಿದರು.

      ಮುಂದಿನ ದಿನಗಳಲ್ಲಿ ಗ್ರಾಮಾಂತರ ಕ್ಷೇತ್ರಗಳಲ್ಲಿಯೂ ಟಿಎಂಸಿಸಿ ಬ್ಯಾಂಕ್ ಸೇವೆ ವಿಸ್ತರಿಸುವ ನಿಟ್ಟಿನಲ್ಲಿ ಯೋಜನೆ ರೂಪಿಸಿದ್ದು, ಕೊರಟಗೆರೆ, ಮಧುಗಿರಿಯಂತಹ ತಾಲ್ಲೂಕು ಮಟ್ಟದಲ್ಲಿಯೂ ಸರ್ವೀಸ್ ಹಾಗೂ ಎಟಿಎಂ ಸೆಂಟರ್ ಪ್ರಾರಂಭಿಸಲು ಆಡಳಿತ ಮಂಡಳಿ ನಿರ್ಧರಿಸಿದ್ದು, ಟಿಎಂಸಿಸಿ ಜನರ ಬ್ಯಾಂಕ್ ಆಗಿ ಮನ್ನಣೆ ಪಡೆಯುವುದರೊಂದಿಗೆ ಎಲ್ಲ ಸಾರ್ವಜನಿಕರಿಗೂ ಟಿಎಂಸಿಸಿಯ ಸೌಲಭ್ಯಗಳು ದೊರೆಯುವಂತಾಗಬೇಕು ಎಂದು ಹೇಳಿದರು.

      ಕಾರ್ಯಕ್ರಮದಲ್ಲಿ ನಗರ ಶಾಸಕ ಜ್ಯೋತಿಗಣೇಶ್, ಬ್ಯಾಂಕ್‍ನ ಉಪಾಧ್ಯಕ್ಷ ಶ್ರೀಕರಪ್ರಸಾದ್, ಎಲ್ಲ ನಿರ್ದೇಶಕರುಗಳು, ಸಿಇಒ ರಮೇಶ್, ಟಿಎಂಸಿಸಿ ಸಿಬ್ಬಂದಿ ಈ ವೇಳೆ ಉಪಸ್ಥಿತರಿದ್ದರು.

(Visited 16 times, 1 visits today)
Previous Articleಜುಲೈ 30, 31ರಂದು ಸಾಮಾನ್ಯ ಪ್ರವೇಶ ಪರೀಕ್ಷೆ : ನಿಷೇಧಾಜ್ಞೆ ಜಾರಿ!!
Next Article ಸೀಲ್’ಡೌನ್ ಆಗಿದ್ದ ಗೊರವನಹಳ್ಳಿ ಮಹಾಲಕ್ಷ್ಮಿ ದೇವಸ್ಥಾನ ಓಪನ್!!
News Desk Benkiyabale

Related Posts

ಸ್ಲಂ ಮಕ್ಕಳು ಭವಿಷ್ಯ ದೃಷ್ಠಿಯಿಂದ ವಿದ್ಯಾವಂತರಾಗಿ ಜಿ.ಬಿ.ಜ್ಯೋತಿ ಗಣೇಶ್ ಕರೆ

July 01, 2026 5:13 pm news

 ಜು.೨೯ರವರೆಗೆ ಮನೆ-ಮನೆ ಭೇಟಿ

July 01, 2026 5:10 pm news

ದಲಿತರ ಭೂ ಹಕ್ಕು ಹೋರಾಟಗಳಿಗೆ ನ್ಯಾಯ ಒದಗಿಸಿ

July 01, 2026 5:07 pm news
ತಾಜಾ ಸುದ್ಧಿಗಳು

ಸ್ಲಂ ಮಕ್ಕಳು ಭವಿಷ್ಯ ದೃಷ್ಠಿಯಿಂದ ವಿದ್ಯಾವಂತರಾಗಿ ಜಿ.ಬಿ.ಜ್ಯೋತಿ ಗಣೇಶ್ ಕರೆ

July 01, 2026 5:13 pm

 ಜು.೨೯ರವರೆಗೆ ಮನೆ-ಮನೆ ಭೇಟಿ

July 01, 2026 5:10 pm

ದಲಿತರ ಭೂ ಹಕ್ಕು ಹೋರಾಟಗಳಿಗೆ ನ್ಯಾಯ ಒದಗಿಸಿ

July 01, 2026 5:07 pm

ದಲಿತರ ಭೂ ಹಕ್ಕು ಹೋರಾಟಗಳಿಗೆ ನ್ಯಾಯ ಒದಗಿಸಿ

July 01, 2026 5:04 pm

ಮತದಾರರ ಪಟ್ಟಿ ಸಮಗ್ರ ಪರಿಷ್ಕರಣೆ: ಬಿಎಲ್‌ಓಗಳಿಂದ ಮನೆ-ಮನೆ ಭೇಟಿ

July 01, 2026 5:01 pm

ಇ-ಪೌತಿ ಖಾತಾ ಆಂದೋಲನ-೨ ಜಿಲ್ಲಾಧಿಕಾರಿಗಳಿಂದ ಅರ್ಜಿ ಸ್ವೀಕಾರ

June 30, 2026 5:10 pm
Our Youtube Channel
Our Picks

ಸ್ಲಂ ಮಕ್ಕಳು ಭವಿಷ್ಯ ದೃಷ್ಠಿಯಿಂದ ವಿದ್ಯಾವಂತರಾಗಿ ಜಿ.ಬಿ.ಜ್ಯೋತಿ ಗಣೇಶ್ ಕರೆ

July 01, 2026 5:13 pm

 ಜು.೨೯ರವರೆಗೆ ಮನೆ-ಮನೆ ಭೇಟಿ

July 01, 2026 5:10 pm

ದಲಿತರ ಭೂ ಹಕ್ಕು ಹೋರಾಟಗಳಿಗೆ ನ್ಯಾಯ ಒದಗಿಸಿ

July 01, 2026 5:07 pm

ದಲಿತರ ಭೂ ಹಕ್ಕು ಹೋರಾಟಗಳಿಗೆ ನ್ಯಾಯ ಒದಗಿಸಿ

July 01, 2026 5:04 pm

ಮತದಾರರ ಪಟ್ಟಿ ಸಮಗ್ರ ಪರಿಷ್ಕರಣೆ: ಬಿಎಲ್‌ಓಗಳಿಂದ ಮನೆ-ಮನೆ ಭೇಟಿ

July 01, 2026 5:01 pm
News Tags
Accident Ambedkar Araga jnanendra BJP Chikkanayakanahalli Congress crime DC gs basavaraju Gubbi jc madhuswamy Jds kannada news karnataka Kn rajanna kodigenahalli Koratagere kunigal local news madhugiri Mla Mla jyothiganesh mlc r.rajendra pavagada Police Protest tumakur tumkur Tumkur dc yspatil Tumkur mahanagara palike tumkur news turuvekere University ಕಾಂಗ್ರೆಸ್ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಕೊರಟಗೆರೆ: ಚಿಕ್ಕನಾಯಕನಹಳ್ಳಿ ಜಿಲ್ಲಾಡಳಿತ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತುಮಕೂರು: ತುಮಕೂರು ವಿವಿ ತುಮಕೂರು ವಿಶ್ವವಿದ್ಯಾನಿಲಯ ತುರುವೇಕೆರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹುಳಿಯಾರು
About us
About us

BBNews 24×7 is Kannada Online News Portal from Benkiyabale Kannada News Paper Team. Benkiyabale is very popular Daily Newspaper publishing from Tumkur City.

Email us: benkiyabale@gmail.com
Contact: +1-320-0123-451


• Terms of Service
• Privacy Policy

Facebook Instagram YouTube WhatsApp RSS
ಅಂಕಣಗಳು

ಬಡವರ ಗೋಳು ಕೇಳುವರ‍್ಯಾರು

June 15, 2026 5:20 pm

ಬಡವರ ಕಣ್ಣೀರು ತರಿಸುತ್ತಿರುವ ಪಡಿತರ

November 21, 2024 6:06 pm

ಶಕ್ತಿ ಯೋಜನೆ : ರಸ್ತೆ ಸಾರಿಗೆ ನಿಗಮಕ್ಕೆ ೨೪.೪೨ ಕೋಟಿ ಆದಾಯ

August 03, 2023 4:59 pm

ಜಿಲ್ಲೆಯಲ್ಲಿ ಕಸಾಪ ಸಾಹಿತ್ಯ ಸಮ್ಮೇಳನಗಳು ಯಶಸ್ವಿ

December 13, 2022 5:26 pm
Don't Miss

ಸ್ಲಂ ಮಕ್ಕಳು ಭವಿಷ್ಯ ದೃಷ್ಠಿಯಿಂದ ವಿದ್ಯಾವಂತರಾಗಿ ಜಿ.ಬಿ.ಜ್ಯೋತಿ ಗಣೇಶ್ ಕರೆ

By News Desk BenkiyabaleJuly 01, 2026 5:13 pm

ತುಮಕೂರು : ಇಂದು ತುಮಕೂರು ಜಿಲ್ಲಾ ಕೊಳಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿ ಮತ್ತು ಸ್ಲಂ ಜನಾಂದೋಲನ ಕರ್ನಾಟಕದಿಂದ ನಗರದ ಕನ್ನಡ…

 ಜು.೨೯ರವರೆಗೆ ಮನೆ-ಮನೆ ಭೇಟಿ

July 01, 2026 5:10 pm

ದಲಿತರ ಭೂ ಹಕ್ಕು ಹೋರಾಟಗಳಿಗೆ ನ್ಯಾಯ ಒದಗಿಸಿ

July 01, 2026 5:07 pm

ದಲಿತರ ಭೂ ಹಕ್ಕು ಹೋರಾಟಗಳಿಗೆ ನ್ಯಾಯ ಒದಗಿಸಿ

July 01, 2026 5:04 pm
News by Date
July 2026
M T W T F S S
 12345
6789101112
13141516171819
20212223242526
2728293031  
« Jun    
Facebook Twitter Instagram YouTube LinkedIn WhatsApp RSS
  • Home
  • ಅಂಕಣಗಳು
  • ಅಡುಗೆ
  • ನಿತ್ಯ ಭವಿಷ್ಯ
  • ಪ್ರವಾಸ
  • ಸುಭಾಷಿತ
© 2016-2026 Benkiyabale - Kannada Online News Portal. Designed by Digicube Solutions.

Type above and press Enter to search. Press Esc to cancel.