ಕೊರಟಗೆರೆ


ತಾಲ್ಲೂಕಿನ ಕಸಬಾ ಹೋಬಳಿಯ ಹಂಚಿಹಳ್ಳಿಯ ಸರ್ಕಾರಿ ಶಾಲಾಯ 1ರಿಂದ7ನೆ ತರಗತಿಯ ಮಕ್ಕಳಿಗೆ ಕನ್ನಡ ರಾಜ್ಯೋತ್ಸವದ ಅಂಗವಾಗಿ ಉಚಿತ ನೋಟ್ ಪುಸ್ತಕಗಳು ಹಾಗೂ ಸ್ಮಾರ್ಟ್ ಕ್ಲಾಸ್ ಉತ್ತಮ ಶಿಕ್ಷಣಕ್ಕಾಗಿ ಶಾಲೆಗೆ ಲ್ಯಾಪ್ ಟಾಪ್ ನೀಡಿದ ಬೆಂಗಳೂರಿನ ರೋಟರಿ ಕ್ಲಬ್ ಸಂಸ್ಥೆಯ ಮುಖ್ಯಸ್ಥರು.
ರೋಟರಿ ಕ್ಲಬ್ ಅಧ್ಯಕ್ಷ ರಾಮು ಮಾತನಾಡಿ ನಾವು ರೋಟರಿ ಕ್ಲಬ್ ಸ್ಥಾಪಿಸಿದಾಗಿನಿಂದಲೂ ಇದುವರೆಗೂ ಅನೇಕ ಸರ್ಕಾರಿ ಶಾಲೆಗಳು ಹಾಗೂ ವೃದ್ಧಾಶ್ರಮಗಳು ಸೇರಿದಂತೆ ಬಡವರ ಪರ ಕೆಲಸ ಮಾಡುತ್ತಿದ್ದೇವೆ ನಮ್ಮ ಈ ಕೆಲಸದಿಂದ ಅನೇಕ ಸರ್ಕಾರಿ ಶಾಲೆಯ ಮಕ್ಕಳಿಗೆ ಅನುಕೂಲವಾಗುತ್ತಿದೆ ದೇವರ ಕೃಪೆಯಿಂದ ಕೋರೋನಾ ಎಂಬ ಮಾಹಾಮಾರಿಯು ದೂರವಾಗಿ ಎಲ್ಲ ಶಾಲೆಗಳು ಪ್ರಾರಂಭವಾಗಿ ಉತ್ತಮ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ ನಾನು ಹಾಗೂ ನಮ್ಮ ಸಂಸ್ಥೆಯ ಮುಖ್ಯಸ್ಥರು ಸದಸ್ಯರ ವತಿಯಿಂದ ಈ ಸೇವೆ ಮಾಡುತ್ತಿದ್ದೇವೆ ಎಂದು ತಿಳಿಸಿದರು
ಉಚಿತವಾಗಿ ಶಾಲೆಗೆ ಲ್ಯಾಪ್ ಟಾಪ್ ನೀಡಿದ ನಿಕಿತಾ ಮಂಡ್ಯ ಮಾತನಾಡಿ
ನನ್ನಿಂದ ಆಗುವ ಅಳಿಲ ಸೇವೆಯನ್ನು ಸರ್ಕಾರಿ ಶಾಲೆಯ ಮಕ್ಕಳು ಕಂಪ್ಯೂಟರ್ ಜ್ಞಾನ ಜತೆಗೆ ಉತ್ತಮ ಶಿಕ್ಷಣಕ್ಕೆ ಒತ್ತು ಕೊಡಲು ಮುಂದಿನ ತರಗತಿಗಳಲ್ಲಿ ಅವರ ವಿದ್ಯಾಭ್ಯಾಸಕ್ಕೆ ಅನುಕೂಲವಾಗಲೆಂದು ಈ ಲ್ಯಾಪ್ ಟಾಪ್ ನೀಡಿದ್ದೇನೆ ಎಂದು ತಿಳಿಸಿದರು..
ಈ ಸಂಧರ್ಬದಲ್ಲಿ ರೋಟರಿ ಕ್ಲಬ್ ಸದಸ್ಯರುಗಳಾದ ಬಾಲಾಜಿ ದರ್ಶನ್ ,ರಕ್ಷಿತಾ ,ಲೋಕೇಶ್,ಬಾಬು ,ಸೇರಿದಂತೆ ಸರ್ಕಾರಿ ಶಾಲೆಯ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಪೆÇೀಷಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

(Visited 1 times, 1 visits today)