ತುಮಕೂರು


ತುರ್ತು ಚಿಕಿತ್ಸೆ ಅಗತ್ಯವಿದ್ದ ಸಮಯದಲ್ಲಿ ಸಿದ್ಧಗಂಗಾ ಆಸ್ಪತ್ರೆ ರೋಗಿಗಳನ್ನು ಅಪಾಯದಿಂದ ಹೊರತರುವುದೇ ಮೊದಲ
ಆಧ್ಯತೆಯನ್ನಾಗಿಸಿಕೊಂಡಿದೆ ಎಂದು ಸಿದ್ಧಗಂಗಾ ಮೆಡಿಕಲ್ ಕಾಲೇಜು ಪ್ರಾಂಶುಪಾಲರಾದ ಡಾ.ಶಾಲಿನಿ ತಿಳಿಸಿದರು.
ಕನ್ನಡ ರಾಜ್ಯೋತ್ಸವದ ಅಂಗವಾಗಿ ಸಿದ್ಧಗಂಗಾ ನಗರ ಆರೋಗ್ಯ ಕೇಂದ್ರದಲ್ಲಿ(ಸಿದ್ದರಾಮಣ್ಣ ಕಾಂಪ್ಲೆಕ್ಸ್) ಆಯೋಜಿಸಿರುವ ಉಚಿತ ಆರೋಗ್ಯ ತಪಾಸಣಾ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಇದೇ ನವೆಂಬರ್ 4 ರಿಂದ 30 ವರೆಗೆ ನಡೆಯಲಿರುವ ಈ ಶಿಬಿರದಲ್ಲಿ ಸ್ಪೆಷಾಲಿಟಿ ಸೇವೆಗಳ ಉಚಿತ ಸಂದರ್ಶನದ ಜೊತೆಗೆ ಉಚಿತ
ಹೆರಿಗೆ(ನಾರ್ಮಲ್ ಡೆಲಿವರಿ) ಕೂಡ ಉಚಿತವಿರುತ್ತದೆ. ಶಿಬಿರದ ನಂತರವೂ ಈ ಉಚಿತ ಆರೋಗ್ಯ ತಪಾಸಣೆ ಮುಂದುವರೆಯಲಿದೆ ಎಂದರು.
ಮಹಾನಗರ ಪಾಲಿಕೆ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ವೀಣಾಮನೋಹರಗೌಡ ಮಾತನಾಡಿ ಸಿದ್ಧಗಂಗಾ .
ಮೆಡಿಕಲ್ ಕಾಲೇಜು ಈವರೆಗೂ ಜಿಲ್ಲೆಯ ಎಲ್ಲಡೆ ಸಾವಿರಕ್ಕೂ ಹೆಚ್ಚು ಉಚಿತ ಆರೋಗ್ಯ ಶಿಬಿರಗಳನ್ನು ಏರ್ಪಡಿಸಿ ಆರೋಗ್ಯ ದಾಸೋಹದಿಂದ ಜನಮನ್ನಣೆ ಗಳಿಸಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ಮುಖಂಡರಾದ ಜಿಯಾ ಖಾನ್, ಪಾಲಿಕೆ ಸದಸ್ಯರಾದ ದೀಪಶ್ರೀ ಮಹೇಶ್ ಬಾಬು,ಟಿ.ಎಂ.ಮಹೇಶ್, ಮೆಡಿಕಲ್ ಮೇಲ್ವಿಚಾರಕ ಡಾ.ನಿರಂಜನಮೂರ್ತಿ, ಸಿಇಓ ಡಾ.ಸಂಜೀವ್ ಕುಮಾರ್, ಸಿದ್ಧಗಂಗಾ ಆಸ್ಪತ್ರೆಯ ಎಲ್ಲಾ ಸೂಪರ್ ಸ್ಪೆಷಾಲಿಟಿ ಹಾಗೂ ಸ್ಪೆಷಾಲಿಟಿ ವೈದ್ಯರು ಉಪಸ್ಥಿತರಿದ್ದರು.

(Visited 4 times, 1 visits today)