ಚಿಕ್ಕನಾಯಕನಹಳ್ಳಿ


ಸಮಾಜವನ್ನು ಹಾಗೂ ದೇಶವನ್ನು ಒಡೆಯುವ ವಿಚ್ಛಿದ್ರಕಾರಿ ಶಕ್ತಿಗಳ ವಿರುದ್ಧ ಬಗ್ಗು ಬಡಿಯುವ ನಿಟ್ಟಿನಲ್ಲಿ ಸಾರ್ವಜನಿಕರು, ಪೆÇಲೀಸ್ ಸಿಬ್ಬಂದಿಗಳಿಗೆ, ಎಲ್ಲಾ ಸಹಕಾರ ನೀಡಬೇಕು, ಎಂದು, ಗೃಹ ಸಚಿವರೂ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವ ಆರಗ ಜ್ಞಾನೇಂದ್ರ ರವರು, ಇಂದಿಲ್ಲಿ ಕರೆ ನೀಡಿದರು.
ಸಚಿವರು ಬುಧವಾರ ಚಿಕ್ಕನಾಯಕನಹಳ್ಳಿ ತಾಲ್ಲೂಕು ನೂತನ ಪೆÇಲೀಸ್ ಠಾಣೆಯ ನೂತನ ಕಟ್ಟಡವನ್ನು, ಉದ್ಘಾಟಿಸಿ, ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಅವರು, “ದೇಶದ ಐಕ್ಯತೆ ಹಾಗೂ ಸಮಗ್ರತೆ” ಕಾಪಾಡಲು ಹಗಲಿರುಳು ಶ್ರಮಿಸುತ್ತಿರುವ ಪೆÇಲೀಸ್ ಸಿಬ್ಬಂದಿಗಳ ಜತೆ ಎಲ್ಲರೂ ಕೈ ಜೋಡಿಸಬೇಕು, ಎಂದರು.
ರಾಜ್ಯದ ಪೆÇಲೀಸ್, ರಾಷ್ಟ್ರದಲ್ಲಿಯೇ ಅತ್ಯಂತ ದಕ್ಷ ಹಾಗೂ ಶಿಸ್ತಿನ ಪಡೆಗಳಲ್ಲಿ ಒಂದು, ಎಂಬ ಹಿರಿಮೆಯನ್ನು ಹೊಂದಿದ್ದು, ಸಿಬ್ಬಂದಿಗಳ ಮನೋಸ್ಥೈರ್ಯ ಹಾಗೂ ಕಾರ್ಯ ದಕ್ಷತೆ ಹೆಚ್ಚಿಸಲು ಆದ್ಯ ಗಮನ ನೀಡಲಾಗುತ್ತಿದೆ, ಎಂದರು.
ಮತಾಂಧ ಶಕ್ತಿಗಳು ಹಾಗೂ ಮಾದಕ ದ್ರವ್ಯ ವಸ್ತುಗಳ ಸೇವನೆ, ಸಾಗಾಟ ಹಾಗೂ ಇನ್ನಿತರ ಸಮಾಜ ವಿಧ್ರೋಹಿ ಕೃತ್ಯಗಳ ವಿರುದ್ಧ ಪೆÇಲೀಸರು ಹಗಲಿರುಳು ಕಣ್ಗಾವಲು ವಹಿಸಿದ್ದು,
ಅವರಿಗೆ ನಮ್ಮೆಲ್ಲರ ಸಹಕಾರವೂ ಬೇಕು, ಎಂದು ಹೇಳಿದರು.
ತುಮಕೂರು ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಶ್ರೀ ರಾಹುಲ್ ಕುಮಾರ್, ಶಾಸಕ ಜಿ.ಬಿ.ಜ್ಯೋತಿಗಣೇಶ್, ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಧಿಕಾರಿ ಡಾ.ಮಂಜುನಾಥ್, ಜಿಲ್ಲಾ ಸರ್ಜನ್ ಡಾ.ವೀಣಾ, ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ನರಸಿಂಹರಾಜು, ಸೇರಿದಂತೆ ಹಿರಿಯ ಅಧಿಕಾರಿಗಳು ಸೇರಿದಂತೆ
ಇತರ ಗಣ್ಯರು ಉಪಸ್ಥಿತರಿದ್ದರು.

(Visited 1 times, 1 visits today)