ತುಮಕೂರು


ನಾಲ್ಕು ತಿಂಗಳ ಬಾಕಿ ವೇತನ ತಡೆಹಿಡಿದಿರುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಎಐಟಿಯುಸಿ ನೇತೃತ್ವದಲ್ಲಿ ಬಿಸಿಯೂಟ ನೌಕರರ ಜಿಲ್ಲಾ ಪಂಚಾಯತ್ ಎದುರು ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯನ್ನು ಉದ್ದೇಶಿಸಿ ಜಿಲ್ಲಾ ಸಂಚಾಲಕ ಕಾಂತರಾಜು ಮಾತನಾಡಿ ಕರ್ನಾಟಕ ರಾಜ್ಯ ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಯೋಜನೆಯಲ್ಲಿ ಸುಮಾರು 2003ನೇ ಸಾಲಿನಿಂದಲೂ ನಿರಂತರವಾಗಿ ಕಡಿಮೆ ವೇತನಕ್ಕೆ ಕೆಲಸವನ್ನು ನಿರ್ವಹಿಸಿಕೊಂಡು ಬಂದಿದ್ದಾರೆ ಸರ್ಕಾರ ಈ ಬಿಸಿಯೂಟ ನೌಖರರಿಗೆ ಕನಿಷ್ಠ ವೇತನವನ್ನಾಗಲೀ, ಇಎಸ್‍ಐ ಭವಿಷ್ಯನಿಧಿ ಸೇರಿದಣಂತೆ ಸಾಮಾಜಿಕ ಭದ್ರತೆಯನ್ನು ನೀಡದೆ ದುಡಿಸಿಕೊಳ್ಳುತ್ತಿರುವುದು ಖಂಡನೀಯ. ಇಷ್ಠಾದರೂ ಸಾಲದೆಂಬಂತೆ ಕಳೆದ ನಾಲ್ಕು ತಿಂಗಳಿನಿಂದ ಪ್ರತಿ ತಿಂಗಳು ನಿಗಧಿಯಾಗಿರುವ ಅಡುಗೆಯವರಿಗೆ 3700 ಸಾಹಾಯಕರಿಗೆ 3600 ರೂಗಳನ್ನು ಸರ್ಕಾರ ನೀಡಿರುವುದಿಲ್ಲ ಸರ್ಕಾರದ ಈ ನಡೆ ನೌಕರರ ಜೀವನ ನಿರ್ವಹಣೆಗೆ ಕಷ್ಟಕರವಾಗಿದೆ ಆದ್ದರಿಂದ ಈ ಕೂಡಲೇ
ಸರ್ಕಾರ ತಡೆಹಿಡಿದಿರುವ ನಾಲ್ಕು ತಿಂಗಳ ವೇತನವನ್ನು ಬಿಡುಗಡೆ ಮಾಡಬೇಕು ಮತ್ತು
ಬಿಸಿಯೂಟ ನೌಕರರ ಸಮಸ್ಯೆಗಳನ್ನು ಬಗೆಹರಿಸಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ರಾಜ್ಯಧ್ಯಕ್ಷ ಹೊನ್ನಪ್ಪಮರೆಮ್ಮನವರ, ಜಿಲ್ಲಾ ಸಂಚಾಳಕ ಎ.ಬಿ. ಉಮಾದೇವಿ, ವನಜಾಕ್ಷಿ, ರಾದಮ್ಮ, ಪುಷ್ಪಲತಾ, ಸಾವಿತ್ರಮ್ಮ, ಲಕ್ಷ್ಮಮ್ಮ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

(Visited 2 times, 1 visits today)