ತುರುವೇಕೆರೆ

ಮೂವತ್ತು ವರ್ಷಗಳ ನಂತರ ಪಟ್ಟಣ ಪಂಚಾಯಿತಿ ಅಧ್ಯಕ್ಷಗಾದಿ ಯಾದವ ಸಮುದಾಯಕ್ಕೆ ದೊರಕಿರುವುದು ಶಾಸಕ ಮಸಾಲಾ ಜಯರಾಮ್ ರವರ ಇಚ್ಚಾ ಶಕ್ತಿಯಿಂದ ಎಂದು ನೂತನ ಪಟ್ಟಣ ಪಂಚಾಯಿತಿ ಅಧ್ಯಕ್ಷ ಪ್ರಭಾಕರ್ ತಿಳಿಸಿದರು.
16 ಸದಸ್ಯ ಬಲವುಳ್ಳ ತುರುವೇಕೆರೆ ಪಟ್ಟಣ ಪಂಚಾಯಿತಿಗೆ ಸೋಮವಾರ ನಡೆದ ಚುನಾವಣೆಯಲ್ಲಿ ಹಿಂದೆ ಅಧ್ಯಕ್ಷರಾಗಿದ್ದ ಆಶಾರಾಣಿ ಸಿ.ಎಸ್. ಇವರ ರಾಜೀನಾಮೆಯಿಂದ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಪ.ಪಂ. ಸದಸ್ಯ ಪ್ರಭಾಕರ್ ಒಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ, ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ ತಹಶೀಲ್ದಾರ್ ವೈ.ಎಂ. ರೇಣುಕುಮಾರ್ ಪ.ಪಂ. ಸದಸ್ಯ ಪ್ರಭಾಕರ್ ಆಯ್ಕೆಯನ್ನು ಅವಿರೋಧ ಎಂದು ಘೋಷಿಸಿದರು.
ನೂತನ ಅಧ್ಯಕ್ಷ ಪ್ರಭಾಕರ್ ಮಾತನಾಡಿದರು.
ನೂತನ ಅಧ್ಯಕ್ಷರಿಗೆ ಅಭಿನಂದನೆ ಸಲ್ಲಿಸಿದ ಶಾಸಕ ಮಸಾಲಾ ಜಯರಾಮ್ ಮಾತನಾಡಿ ಸಾಮಾಜಿಕ ನ್ಯಾಯದ ದೃಷ್ಟಿಯಿಂದ ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ಎಂಬ ಘೋಷ ವಾಕ್ಯದೊಂದಿಗೆ ಯಾದವ ಸಮುದಾಯದ ಪ್ರಭಾಕರ್ ಅಧ್ಯಕ್ಷರಾಗಿದ್ದಾರೆ ಎಂದರು.
ನೂತನ ಅಧ್ಯಕ್ಷರನ್ನು ವಿಧಾನ ಪರಿಷತ್ ಸದಸ್ಯ ವೈ.ಎ. ನಾರಾಯಣಸ್ವಾಮಿ, ಪ.ಪಂ. ಮುಖ್ಯಾಧಿಕಾರಿ ಲಕ್ಷ್ಮಣಕುಮಾರ್ ಸೇರಿದಂತೆ ಪಟ್ಟಣ ಪಂಚಾಯಿತಿ ಉಪಾಧ್ಯಕ್ಷರಾದ ಶೀಲಾ ಹೆಚ್.ಸಿ., ಸದಸ್ಯರಾದ ಚಿದಾನಂದ್, ಅಂಜನ್ ಕುಮಾರ್, ಮೇಘನ, ಭಾಗ್ಯ, ನದೀಂ ಅಹಮದ್, ರವಿ ಕೆ., ಸ್ವಪ್ನ ಜಿ.ಎಂ., ಮಧು ಆರ್., ಸುರೇಶ್ ಎನ್.ಆರ್., ನಾಮಿನಿ ಸದಸ್ಯ ನವೀನ್ ಬಾಬು, ಕೆ.ಬಿ. ಶೋಭ ಸೇರಿದಂತೆ ಇತರ ಮುಖಂಡರು ಅಭಿನಂದಿಸಿದರು.

(Visited 6 times, 1 visits today)