ತುರುವೇಕೆರೆ


ಕಾಂಗ್ರೆಸ್ ಪಕ್ಷದಿಂದ ಬೆಮೆಲ್ ಕಾಂತರಾಜ್ ಸೇರಿದಂತೆ ಬೇರೆ ಯಾರಿಗೂ ಹೈಕಮಾಂಡ್ ವಿಧಾನಸಭಾ ಟಿಕೆಟ್ ಘೋಷಿಸಿಲ್ಲ ಎಂದು ಕಾಂಗ್ರೆಸ್ ಮುಖಂಡ ಸುಬ್ರಮಣಿ ಶ್ರೀಕಂಠೇಗೌಡ ತಿಳಿಸಿದರು.
ಪಟ್ಟಣ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿ ತುರುವೇಕೆರೆ ವಿಧಾನ ಸಭಾ ಕ್ಷೇತ್ರಕ್ಕೆ ಮುಂಬರುವ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಲು ಕಾಂಗ್ರೆಸ್ ಪಕ್ಷದಿಂದ ಬಿ.ಫಾರ್ಮ್ ಬಯಸಿ ಪಕ್ಷದ ಕೆ.ಪಿ.ಸಿ.ಸಿ. ಕಛೇರಿಗೆ ಅರ್ಜಿ ಸಲ್ಲಿಸುತ್ತಿರುವುದಾಗಿ ತಿಳಿಸಿದ ಅವರು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ತುರುವೇಕೆರೆ ಕ್ಷೇತ್ರದಲ್ಲಿ ಸ್ಥಳೀಯ ಕಾರ್ಯಕರ್ತರಿಗೆ ಪಕ್ಷದ ಬಿ.ಫಾರ್ಮ್ ದೊರೆಯಲಿದ್ದು ಈ ನಿಟ್ಟಿನಲ್ಲಿ ಮುಂದಿನ ಪಕ್ಷದ ಅಭ್ಯರ್ಥಿ ನಾನೇ ಇದರಲ್ಲಿ ಕಾರ್ಯಕರ್ತರು ಅನುಮಾನ ಪಡುವ ಅವಶ್ಯಕತೆಯಿಲ್ಲ ಎಂದರು.
ತುರುವೇಕೆರೆ ಮಣ್ಣಿನ ಮಗನಾದ ನಾನು ಕಳೆದ 15 ವರ್ಷಗಳಿಂದಲೂ ಪಕ್ಷವನ್ನು ತಾಲ್ಲೂಕಿನಲ್ಲಿ ಬಲಪಡಿಸುವುದರ ಜೊತೆಗೆ ನೂರಾರು ಸಾಮಾಜಿಕ ಸೇವಾ ಕಾರ್ಯಗಳನ್ನು ಮಾಡುತ್ತಾ ಪಕ್ಷಕ್ಕಾಗಿ ದುಡಿಯುತ್ತಿದ್ದೇನೆ. ಕಳೆದ ವಿಧಾನಸಭಾ ಚುನಾವಣೆಯಲ್ಲೇ ಟಿಕೆಟ್ ಆಕಾಂಕ್ಷಿಯಾಗಿದ್ದ ನಾನು ವರಿಷ್ಠರ ಸೂಚನೆಯಂತೆ ಬಿ.ಫಾರ್ಮ್ ನೀಡಿದ ಪಕ್ಷದ ಅಭ್ಯರ್ಥಿಯಾಗಿದ್ದ ಚೌದ್ರಿ ರಂಗಪ್ಪ ನವರ ಪರ ಕೆಲಸ ಮಾಡಿದೆ. ಇದೀಗ ಪಕ್ಷಕ್ಕೆ ಅರ್ಜಿ ಸಲ್ಲಿಸುತ್ತಿದ್ದು ನನಗೆ ಟಿಕೆಟ್ ಸಿಗುವುದರಲ್ಲಿ ವಿಶ್ವಾಸವಿದೆ. ಹಾಗಾಗಿ ಕಾರ್ಯಕರ್ತರು ಗೊಂದಲಕ್ಕೆ ಒಳಗಾಗದೆ ನನ್ನ ಪರವಾಗಿ ಹಾಗೂ ಪಕ್ಷದ ಪರವಾಗಿ ಕೆಲಸ ಮಾಡುತ್ತಾ ಪಕ್ಷವನ್ನು ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಕೈಜೋಡಿಸೋಣ ಎಂದರು.
ಸುದ್ದಿಗೋಷ್ಟಿಯಲ್ಲಿ ಮುಖಂಡರುಗಳಾದ ಹಟ್ಟಿಹಳ್ಳಿ ಪುಟ್ಟೇಗೌಡ, ಕೆಂಪೇಗೌಡ, ದೇವರಾಜು, ಸುನಿಲ್, ಜಗದೀಶ್, ಸತೀಶ್ ಇತರ ಮುಖಂಡುಗಳು ಇದ್ದರು.

(Visited 7 times, 1 visits today)