ತುಮಕೂರು


ಕೇಂದ್ರÀ ಹಾಗೂ ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ಬಿಜೆಪಿ ನೇತೃತ್ವದ ಡಬಲ್ ಇಂಜಿನ್ ಸರ್ಕಾರಗಳು ಜಾರಿ ಮಾಡುತ್ತಿರುವ ಕಾರ್ಪೋರೇಟ್ ಪ್ರೇರಿತ ಆರ್ಥಿಕ, ರಾಜಕೀಯ ಹಾಗೂ ಸಾಮಾಜಿಕ ನೀತಿಗಳು ದೇಶದ ಹಾಗೂ ರಾಜ್ಯದ ಕಾರ್ಮಿಕ ವರ್ಗ ಸೇರಿ ಇತರೆ ದುಡಿಯುವ ವರ್ಗದ ಬದುಕಿನ ಮೇಲೆ ಗಂಭೀರ ಪರಿಣಾಮ ಉಂಟು ಮಾಡುತ್ತಿವೆ. ಇಂತಹ ನೀತಿಗಳ ವಿರುದ್ದ ಹಾಗೂ ಕಾರ್ಮಿಕ, ರೈತ ಹಗೂ ಜನಸಾಮಾನ್ಯರ ಬದುಕನ್ನು ರಕ್ಷಿಸುವ ಪರ್ಯಾಯ ನೀತಿಗಳ ಜಾರಿಗಾಗಿ ರಾಜ್ಯದಲ್ಲಿ ವಿಶಾಲ ತಳಹದಿಯ ದುಡಿಯುವ ವರ್ಗದ ಐಕ್ಯ ಚಳವಳಿಯನ್ನು ಬೆಳೆಸಬೇಕು. ಅದೇ ವೇಳೆಗೆ ಎದ್ದು ಬರುತ್ತಿರುವ ಹೊಸ ಸವಾಲುಗಳಿಗೆ ತಕ್ಕಂತೆ ನಮ್ಮ ಸಂಘಟನಾ ಜಾಲವನ್ನು ರಾಜ್ಯದೆಲ್ಲಡೆ ವಿಸ್ತರಿಸಬೇಕು ಎನ್ನುವ ಮಹತ್ತರ ನಿರ್ಧಾರವನ್ನು ಕುಂದಾಪುರದಲ್ಲಿ ಮುಕ್ತಾಯಗೊಂಡ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ (ಸಿಐಟಿಯು) 15 ನೇ ರಾಜ್ಯ ಸಮ್ಮೇಳನ ಕೈಗೊಂಡಿದೆ.
ಉಡುಪಿ ಜಿಲ್ಲೆಯ ಕುಂದಾಪುರದಲ್ಲಿ ನವೆಂಬರ್ 15 ರಿಂದ 17 ರವರೆಗೆ ನಡೆದ ರಾಜ್ಯ ಸಮ್ಮೇಳನವನ್ನು ನವೆಂಬರ್ 15 ರ ಬೆಳೆಗ್ಗೆ ಸಿಐಟಿಯು ರಾಷ್ಟ್ರೀಯ ಅಧ್ಯಕ್ಷರಾದ ಕಾಮ್ರೇಡ್ ಡಾ.ಕೆ.ಹೇಮಲತಾ ಉದ್ಘಾಟಿಸಿ ಮಾತನಾಡಿ ಕಳೆದ ಮೂರು ವರ್ಷಗಳು ಅತ್ಯಂತ ಸವಾಲಿನ ದಿನಗಳನ್ನು ದೇಶದ ಸಾಮಾನ್ಯ ಜನ ಹಾಗೂ ಶ್ರಮಜೀವಿ ವರ್ಗ ಕಂಡಿದೆ. ಕೋವಿಡ್ ಸಾಂಕ್ರಾಮಿಕ ರೋಗವು ದೇಶವವನ್ನು ವಿಶ್ವವನ್ನು ಹಿಂಡಿ, ಹಿಪ್ಪೆ ಮಾಡಿತ್ತು. ಆದರೆ ಕಾರ್ಪೋರೇಟ್ ಬಂಡವಾಳದಾರರು ಈ ಸಂದರ್ಭವನ್ನೂ ತಮ್ಮ ಲಾಭಕ್ಕಾಗಿ ಬಳಸಿಕೊಂಡಿದ್ದನ್ನು ತೀವ್ರವಾಗಿ ಟೀಕಿಸಿದರು.
ಕಾರ್ಪೋರೇಟ್ ಬಂಡವಾಳದಾರರನ್ನು ಸಂತುಷ್ಟಗೊಳಿಸಲು ಜನರ ವಿರೋಧದ ನಡುವೆಯೂ ಉದಾರವಾದಿ ನೀತಿಗಳನ್ನು ಶತಾಯಗತಾಯ ಜಾರಿ ಮಾಡಲು ಕೇಂದ್ರದ ಪ್ರಯತ್ನ ಮುಂದುವರಿದಿದೆ. ಇದರ ವಿರುದ್ಧ ಪ್ರಬಲ ಪ್ರತಿರೋಧ ಎದ್ದು ಬರದಂತೆ ಜಾತಿ, ಧರ್ಮದ ಆಧಾರದಲ್ಲಿ ಜನತೆಯನ್ನು ಒಡೆಯಲು ಪ್ರಯತ್ನಿಸುತ್ತಿದೆ. ಲವ್ ಜಿಹಾದ್, ಹಲಾಲ್, ಸೇರಿದಂತೆ ಎಲ್ಲವನ್ನೂ ಕೋಮುವಾದಿ ನೆಲೆಯಲ್ಲಿ ನೋಡುತ್ತಾ, ಜನರ ಮನಸ್ಸನ್ನು ನೈಜ ಸಮಸ್ಯೆಗಳಿಂದ ಮರೆಸುವ ಪ್ರಯತ್ನ ನಡೆಸುತ್ತಿದೆ. ಹೀಗಾಗಿ ನಾವು ಕಾರ್ಪೊರೇಟ್ ಬಂಡವಾಳವಾದದ ಶೋಷಣೆ ವಿರುದ್ಧ ಹೋರಾಟ ನಡೆಸುವಾಗಲೇ ಕೋಮುವಾದ, ಮತೀಯತೆ, ಫ್ಯಾಸಿಸ್ಟ್ ವಾದದ ಅಪಾಯದ ವಿರುದ್ಧ ನಮ್ಮ ಚಳುವಳಿಯನ್ನು ಹುರಿಗೊಳಿಸಬೇಕಿದೆ ಎಂದು ಅವರು ಕರೆ ನೀಡಿದರು.
ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾಜಿ ರಾಜ್ಯಸಭಾ ಸದಸ್ಯರು ಹಾಗೂ ಸಿಐಟಿಯು ಅಖಿಲ ಭಾರತ ಪ್ರಧಾನ ಕಾರ್ಯದರ್ಶಿ ತಪನ್ ಸೇನ್, ರಾಷ್ಟ್ರೀಯ ಉಪಾಧ್ಯಕ್ಷ ಎ.ಕೆ. ಪದ್ಮನಾಭನ್, ರಾಷ್ಟ್ರೀಯ ಕಾರ್ಯದರ್ಶಿ ಕೆ.ಎನ್ ಉಮೇಶ್, ರಾಜ್ಯ ಪ್ರಧಾನ ಕಾರ್ಯದರ್ಶಿ ಮೀನಾಕ್ಷೀ ಸುಂದರಂ,ಸ್ವಾಗತ ಸಮಿತಿ ಗೌರವಧ್ಯಕ್ಷ ಕೆ.ಶಂಕರ್,ಅಧ್ಯಕ್ಷರಾದ ಬಾಲಕೃಷ್ಣಶೆಟ್ಟಿ, ಪ್ರಧಾನ ಕಾರ್ಯದರ್ಶೀ ಸುರೇಶ ಕಲ್ಲಾಗಾರ್ ಖಜಾಂಚಿ ಹೆಚ್ ನರಸಿಂಹ ಉಪಸ್ಥಿತರಿದ್ದರು. ಸಮ್ಮೇಳನಕ್ಕೆ ಶುಭಕೋರಿ ಕರ್ನಾಟಕ ಪ್ರಾಂತ ರೈತ ಸಂಘದ ಉಪಾಧ್ಯಕ್ಷ ಯು ಬಸವರಾಜ್ ಮಾತನಾಡಿದರು.
ವೈವಿದ್ಯಮಯ ಕಾರ್ಯಕ್ರಮಗಳು :
ವಿಡಿಯೋ ಸ್ಪರ್ಧೆ ಪೊಸ್ಟರ್ ಬಿಡುಗಡೆ : ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಬೆಂಗಳೂರಿನಲ್ಲಿ 2023 ರ ಜನವರಿಯಲ್ಲಿ ನಡೆಯುವ ಸಿಐಟಿಯುವಿನ 17 ನೇ ಅಖಿಲ ಭಾರತ ಸಮ್ಮೇಳನ ಅಂಗವಾಗಿ ಸಾಂಸ್ಕøತಿಕ ಉಪ ಸಮಿತಿ ಆಯೋಜಿಸಿರುವ 7 ನಿಮಿಷಗಳ ವಿಡಿಯೋ ಸ್ಪರ್ಧೆ ಕುರಿತಾದ ಪೊಸ್ಟರ್‍ನ್ನು ಅಖಿಲ ಭಾರತ ಪ್ರಧಾನ ಕಾರ್ಯದರ್ಶಿ ತಪನ್ ಸೇನ್ ಬಿಡುಗಡೆಗೊಳಿಸಿದರು. ದೇಶದ ಸಾರ್ವಭೌಮತ್ವ, ಆರ್ಥಿಕ ಸಂಕಷ್ಟಗಳು,ವಿವಿಧ ವಿಭಾಗಗಳು ನಡೆಸುವ ಹೋರಾಟಗಳು ಅವರ ಬದುಕು ಕುರಿತು ವಿಡಿಯೋ ಸ್ಪರ್ಧೆಯ ವಿಷಯವಾಗಿದೆ.
ಕಾರ್ಮಿಕ ಚರಿತ್ರೆ ಬಿಡುಗಡೆ : ದೇಶದ ಕಾರ್ಮಿಕ ಹಾಗೂ ನೌಕರರ ಚಳವಳಿಯ ಹಿರಿಯ ನಾಯಕ ಹಾಗೂ ಮಾಜಿ ಸಂಸದ ಸುಕುಮಾಲ್ ಸೇನ್ ಅವರು ಇಂಗ್ಲೀಷ್‍ನಲ್ಲಿ ಬರೆದಿದ್ದ ‘ಭಾರತದ ಕಾರ್ಮಿಕ ಚಳವಳಿಯ ಚರಿತ್ರೆ” ಕುರಿತಾದ ಕನ್ನಡ ಅನುವಾದದ ಕೃತಿಯನ್ನು ರಾಷ್ಟ್ರೀಯ ಉಪಾಧ್ಯಕ್ಷ ಎ.ಕೆ. ಪದ್ಮಾನಾಭನ್ ಬಿಡುಗಡೆಗೊಳಿಸಿದರು. ಈ ಪುಸ್ತಕಕ್ಕೆ ಮುನ್ನುಡಿಯನ್ನು ಬರೆದಿರುವ ಸಿಐಟಿಯು ರಾಜ್ಯ ಉಪಾಧ್ಯಕ್ಷ ವಿಜೆಕೆ ನಾಯರ್ ಪುಸ್ತಕ ಪರಿಚಯಿಸಿದರು.
ನಿರ್ಣಯಗಳು ಅಂಗೀಕಾರ: ಸಮ್ಮೇಳನದಲ್ಲಿ ಬೆಂಗಳೂರಿನಲ್ಲಿ ನಡೆಯುವ ಅಖಿಲ ಭಾರತ ಸಮ್ಮೇಳನ ಯಶಸ್ವಿ ಮಾಡುವುದು, ಕನಿಷ್ಟವೇತನ, ಅಂಗನವಾಡಿ ನೌಕರರಿಗೆ ಉಪಧನ(ಗ್ರಾಚೂಟಿ) ಜಾರಿ, ಅಸಂಘಟಿತ ಕಾರ್ಮೀಕರಿಗೆ ಸಾಮಾಜಿಕ ಭದ್ರತೆ, ಮುನಿಸಿಪಲ್ ಕಾರ್ಮಿಕರ ಸೇವೆ ಕಾಯಂಮಾತಿ, ಹಾಉ ಸಮಾನ ಕೆಲಸಕ್ಕೆ ಸಮಾನ ವೇತನ ನೀಡಲು ಒತ್ತಾಯಿಸಿ, ಬೀಡಿ ಕಾರ್ಮಿಕರಿಗೆ ಪರ್ಯಾಯ ಉದ್ಯೋಗ ಹಾಗು ಪರಿಹಾರಕಕ್ಕೆ ಒತ್ತಾಯಿಸಿ, ಗುತ್ತಿಗೆ ಕಾರ್ಮಿಕರ ಸೆವೆಗಳ ಖಾಯಂ ಮಾಡಲು , ಗ್ರಾಮಪಂಚಾಯತ್ ನೌಕರರ ಬೇಡಿಕೆಗಳು, ಕಟ್ಟಡ ಕಾರ್ಮಿಕರು, ಅಕ್ಷರ ದಾಸೋಹ, ಸಾರಿಗೆ ನೌಕರರು, ಮಹಿಳೆಯರು,ದಲಿತರ ಮೇಲಿನ ದೌರ್ಜನ್ಯಗಳ ವಿರುದ್ದ, ನವ ಉದಾರವಾದಿ ನೀತಿಗಳು ಹಾಗೂ ಕಾರ್ಮಿಕ ಕಾನೂನುಗಳ ವಿರುದ್ದ ಹಾಗೂ ಸೌಹಾರ್ಧ ಕರ್ನಾಟಕಕ್ಕಾಗಿ ನಿರ್ಣಯಗಳನ್ನು ಕೈಗೊಂಡಿತು.
ಬಹಿರಂಗ ಸಭೆಯಲ್ಲಿ ಅಖಿಲ ಭಾರತ ಪ್ರಧಾನ ಕಾರ್ಯದರ್ಶಿ ತಪನ್ ಸೇನ್, ರಾಜ್ಯ ಪ್ರಧಾನ ಕಾರ್ಯದರ್ಶಿ ಮೀನಾಕ್ಷೀ ಸುಂದರಂ, ಅಧ್ಯಕ್ಷರಾದ ಎಸ್. ವರಲಕ್ಷ್ಮೀ, ಸ್ವಾಗತ ಸಮಿತಿ ಅಧ್ಯಕ್ಷರಾದ ಬಾಲಕೃಷ್ಣ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಸುರೇಶ ಕಲ್ಲಾಗಾರ್ ಮಾತನಾಡಿದರು.
ವೇದಿಕೆಯಲ್ಲಿ ಸಿಐಟಿಯು ಕಾರ್ಯದರ್ಶಿ ಕೆ.ಎನ್. ಉಮೇಶ್, ಜಿಲ್ಲಾ ಪದಾಧಿಕಾರಿಗಳಾದ ಕೆ. ಶಂಕರ್, ಹೆಚ್.ನರಸಿಂಹ,ವಿ ಚಂದ್ರಶೇಖರ್, ಶಶಿಧರ್ ಗೊಲ್ಲ, ಮಹಾಬಲ ವಡೇರ್ ಹೋಬಳಿ, ಬಲ್ಕೀಶ್, ಶೇಖರ್ ಬಂಗೇರಾ, ರಾಜೀವ ಪಡುಕೋಣೆ, ರೋನಾಲ್ಡ್ ರಾಜೇಶ್, ರಮೇಶ್ ಗುಲ್ವಾಡಿ, ಮಾಜಿ ಪುರಸಭೆ ಅಧ್ಯಕ್ಷರಾದ ವಿ,ನರಸಿಂಹ, ಉಪಾಧ್ಯಕ್ಷೆ ಗುಣವಂತೆ, ಮೋಹನ್, ಸಂತೋಷ ಹೆಮ್ಮಾಡಿ, ರಾಮುಕರ್ಕಡ ಮೊದಲಾದವರು ಉಪಸ್ಥಿತರಿದ್ದರು.

(Visited 1 times, 1 visits today)