ಗುಬ್ಬಿ


ಪಟ್ಟಣದ ಐತಿಹಾಸಿಕ ಪ್ರಸಿದ್ದ ಗೋಸಲ ಶ್ರೀ ಚನ್ನಬಸವೇಶ್ವರಸ್ವಾಮಿ, ಪಾರ್ವತಮ್ಮ ಸಮೇತ ಅಮರಗೊಂಡ ಮಲ್ಲಿಕಾರ್ಜುನಸ್ವಾಮಿ ಹೂವಿನ ವಾಹನಗಳ ಮಹೋತ್ಸವ ಬುಧವಾರ ರಾತ್ರಿ ಧಾರ್ಮಿಕ ವಿಧಿವತ್ತಾಗಿ ಜರುಗಲಿದೆ.
ಅನಾದಿಕಾಲದಿಂದಲೂ ಪ್ರತಿ ವರ್ಷವೂ ನಡೆಯುವಂತಹ ಹೂವಿನ ವಾಹನದ ಕಲ್ಪನೆಯು ಯಾರು ಮಾಡಿದ್ದಾರೆಯೋ ಎಂದು ಇಲ್ಲಿಯವರೆಗೂ ಗೋಸಲ ಚನ್ನಬಸವೇಶ್ವರ ಶೂನ್ಯಪೀಠಾಧೀಶ್ವರರಾಗಿ ಅವತಿರಿಸಿದ್ದು ಇವರ ಶಿಷ್ಯರಾದ ಎಡೆಯೂರು ಶ್ರೀ ಸಿದ್ದಲಿಂಗೇಶ್ವರ ಸ್ವಾಮಿಗಳನ್ನು ಶಿಷ್ಯರಾಗಿ ಪಡೆದು ಇವರನ್ನು ಧರ್ಮದ ಪ್ರಚಾರಕ್ಕಾಗಿ ಹಾಗೂ ವೀರಶೈವ ಸಮಾಜದ ಏಳಿಗೆಗೆ ಇವರನ್ನು ಪ್ರಚಾರಕ್ಕೆ ಕಳುಹಿಸಿದ್ದು ತಾವು ಮಾತ್ರ ಯಾವುದೇ ಅಧಿಕಾರಕ್ಕಾಗಲೀ ಪ್ರಚಾರಕ್ಕಾಗಲೀ ಹೆಚ್ಚಿನ ಒತ್ತು ನೀಡದೆ ಕೇವಲ ಶೂನ್ಯ ಪೀಠಾಧೀಶರಾಗಿ ಗುಬ್ಬಿಯಲ್ಲಿ ನೆಲೆಸಿದ್ದು ಇಂದಿಗೂ ಸಹ ಗುಬ್ಬಿಯಪ್ಪ ಎಂದೇ ಪ್ರಸಿದ್ದಿ ಪಡೆದ ಶ್ರೀ ಚನ್ನಬಸವೇಶ್ವರರ ಜಾತ್ರಾ ಮಹೋತ್ಸವವಕ್ಕೆ ನಾಡಿನಾದ್ಯಂತ ಇರುವ ಭಕ್ತಾದಿಗಳು ಬರುತ್ತಿರುವುದು ಚನ್ನಬಸವೇಶ್ವರರ ಪವಾಡವೇ ಸರಿ ಎಂದು ತಿಳಿಸಿದರು.
ಕಾರ್ತಿಕ ಮಾಸದ ಅಮಾವಾಸ್ಯೆಯಂದು ನಡೆಯುವ ಹೂವಿನ ವಾಹನ ಹಾಗೂ ಧೂಳ್ ಮೆರವಣಿಗೆ ಪ್ರತಿವರ್ಷದಂತೆ ಎರಡು ರಥಗಳನ್ನು ಸಂಪೂರ್ಣ ಪುಷ್ಪಾಲಂಕರಗೊಳಿಸಿ ರಾತ್ರಿ 11 ರ ಸಮಯಕ್ಕೆ ಆರಂಭವಾಗುವ ವಾಹನ ಮಹೋತ್ಸವ ಪಟ್ಟಣದ ಪ್ರಮುಖಬೀದಿಗಳಲ್ಲಿ ಸಂಚರಿಸಲಿದ್ದು, ವಿದ್ಯುತ್ ದೀಪಾಲಂಕರದಿಂದ ರಥಗಳನ್ನು ಅಲಂಕರಿಸಿ ಭಕ್ತರು ಬಾಳೆಯ ಅಂಬು ಹಾಯುವ ಮೂಲಕ ಪೂಜೆ, ಹರಕೆ ಸಲ್ಲಿಸುವುದು ಹಿಂದಿನಿಂದ ನಡೆದು ಪದ್ದತಿ. ಇಂದಿಗೂ ಹಲವು ಭಕ್ತರ ಕುಟುಂಬ ಪದ್ದತಿಯನ್ನು ಚಾಚು ತಪ್ಪದೇ ನಡೆಸುತ್ತಿದ್ದಾರೆ. ಭಕ್ತರು ತಮ್ಮ ಮನೆ ಹಾಗೂ ಅಂಗಡಿಗಳ ಮುಂದೆ ಬಾಳೆಗಿಡವನ್ನು ಅಲಂಕರಿಸಿ ವಾಹನ ಬರುವಿಕೆಗೆ ಕಾಯುತ್ತಾರೆ. ಶ್ರೀ ಚನ್ನಬಸವೇಶ್ವರರ ಹೂವಿನ ವಾಹನಕ್ಕೆ ಯಾವುದೇ ಜಾತಿ ಬೇಧವಿಲ್ಲದೇ 18 ಕೋಮಿನ ಮುಖಂಡರುಗಳು ಸಭೆ ನಡೆಸಿ ಆಯಾ ಕೋಮಿನ ಜನಾಂಗದ ಯಜಮಾನರುಗಳಿಗೆ ಜವಾಬ್ದಾರಿ ನೀಡುತ್ತಿರುವುದು ಅನಾದಿಕಾಲದಿಂದಲೂ ಬಂದಂತಹ ಸಂಪ್ರದಾಯವನ್ನು ಇಂದಿನ ಆಧುನೀಕರಣ ಯುಗದಲ್ಲಿಯೂ ಇಂತಹ ಆಚರಣೆಯನ್ನು ನಡೆಸಿಕೊಂಡು ಬರುತ್ತಿದ್ದಾರೆ ಎಂಬುದು ಸಾರ್ವಜನಿಕರ ಅಭಿಪ್ರಾಯ.
ರಥ ಬರುವ ಬೀದಿಗಳಲ್ಲಿ ಬಾಳೆಗಿಡದ ಅಂಬುವಿಗೆ ಮಾಡಿದ ಅಲಂಕಾರ, ರಂಗೋಲಿ ಚಿತ್ತಾರಗಳಿಂದ ಅಲಂಕರಿಸಿ, ಇಡೀ ರಾತ್ರಿ ಪಟ್ಟಣದಲ್ಲಿ ಸಂಚರಿಸಿದ ವಾಹನ ಬಂಗ್ಲೋಮಠದ ಬಳಿ ನಿಂತ ನಂತರ ಮುಂಜಾನೆಯಿಂದ ಆರಂಭವಾಗುವ ಧೂಳ್ ಮೆರವಣಿಗೆಯಲ್ಲಿ ಪಲ್ಲಕ್ಕಿ ಉತ್ಸವ ಭಕ್ತರ ಮನೆಗೆ ತೆರಳಿ ನಂತರ ದೇವಾಲಯವನ್ನು ಸೇರುತ್ತದೆ. ನಂತರ ಪ್ರತಿ ಮನೆಯ ಮುಂದೆ ವೇದಿಕೆ ನಿರ್ಮಿಸಿ ತಮ್ಮ ಶಕ್ತಿಯಾನುಸಾರ ಪೂಜೆ ಸಲ್ಲಿಸಿ ಬಂದಂತಹ ಭಕ್ತಾದಿಗಳಿಗೆ ಫಲಾಹಾರ ನೀಡುವುದು ವಾಡಿಕೆಯಾಗಿದೆ ಎಂದು ಸಾರ್ವಜನಿಕರು ತಿಳಿಸಿದರು.

(Visited 8 times, 1 visits today)