ಕೊರಟಗೆರೆ


ಮನೆಯಲ್ಲಿ ಕುಳಿತು ಪೋಸ್ಟ್ ಮಾಡಿದ್ರೇ ಕೊರಟಗೆರೆಗೆ ಅನುಧಾನ ಬರೋದಿಲ್ಲ.. ಕೊರಟಗೆರೆ ಕ್ಷೇತ್ರದ ಅಭಿವೃದ್ದಿಗೆ ನಾನು 1ಸಾವಿರ ಕೋಟಿ ಅನುಧಾನ ತಂದಿದ್ದೇನೆ.. 36ಗ್ರಾಪಂಗಳ 450ಗ್ರಾಮಗಳಿಗೂ ದಾಖಲೆ ಸಮೇತವಾಗಿ ಅಂಕಿಅಂಶದ ಉತ್ತರ ನೀಡ್ತೇನೆ. ನಿಮ್ಮೇಲ್ಲರ ಆರ್ಶಿವಾದವೇ ನನಗೇ ಕೆಲಸ ಮಾಡಲು ಶ್ರೀರಕ್ಷೆ ಎಂದು ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್ ತಿಳಿಸಿದರು.
ಕೊರಟಗೆರೆ ತಾಲೂಕು ಕೋಳಾಲ ಹೋಬಳಿ ವಜ್ಜನಕುರಿಕೆ ಗ್ರಾಪಂ ವ್ಯಾಪ್ತಿಯ ಪುಟ್ಟನರಸಮ್ಮನಪಾಳ್ಯ ಮತ್ತು ಮರಚರಹಳ್ಳಿ ಗ್ರಾಮಯಲ್ಲಿ ಜಿಪಂ ಇಲಾಖೆಯಿಂದ ಸೋಮವಾರ ಏರ್ಪಡಿಸಲಾಗಿದ್ದ 1ಕೋಟಿ 75ಲಕ್ಷ ವೆಚ್ಚದ ರಸ್ತೆ ಅಭಿವೃದ್ದಿ ಕಾಮಗಾರಿಗೆ ಚಾಲನೆ ನೀಡಿದ ವೇಳೆ ಮಾತನಾಡಿದರು.
ಗುಡಿಸಲು ಮುಕ್ತ ಕ್ಷೇತ್ರವನ್ನಾಗಿ ಮಾಡುವ ಉದ್ದೇಶದಿಂದ ಕೊರಟಗೆರೆಗೆ ನಾನು 10ಸಾವಿರ ಮನೆಯನ್ನು ತಂದು ಕೊಟ್ಟಿದ್ದೇನೆ. 1ವರ್ಷದಲ್ಲಿ ಕೊರಟಗೆರೆ ಕ್ಷೇತ್ರದ 109ಕೆರೆಗಳಿಗೆ ಎತ್ತಿನಹೊಳೆ ಯೋಜನೆಯ ನೀರು ಹರಿಯಲಿದೆ. ಮರಚರಹಳ್ಳಿ ಗ್ರಾಮದ ಅಭಿವೃದ್ದಿಗೆ ಈಗ 1ಕೋಟಿ 75ಲಕ್ಷ ಮತ್ತು 20ಲಕ್ಷ ವೆಚ್ಚದ ಸಿಸಿರಸ್ತೆ-ಚರಂಡಿಗೆ ಅನುಧಾನ ನೀಡಿದ್ದೇನೆ. ನಿಮ್ಮೇಲ್ಲರ ಪ್ರತಿಮನೆಗೂ ಅಂಕಿಅಂಶ ಮತ್ತು ಪೋಟೊ ಸಮೇತ ದಾಖಲೆಯ ಉತ್ತರ ನೀಡುತ್ತೇನೆ ಎಂದು ಭರವಸೆ ನೀಡಿದರು.
ತೀತಾ ಸೇತುವೆ ಕಾಮಗಾರಿಗೆ 10ಕೋಟಿಯ ರೂಪುರೇಷು ಸಿದ್ದವಾಗಿದೆ. ಸೇತುವೆ ಕಾಮಗಾರಿ ಪ್ರಾರಂಭಕ್ಕೆ ಅಧಿವೇಶನದ ವೇಳೆ ಒತ್ತಾಯ ಮಾಡುತ್ತೇನೆ. ಚುನಾವಣೆ ಬಂದಾಗ ಹಣಭೆಯಂತೆ ಎಲ್ರೂ ಬರ್ತಾರೆ. ನಾನು ಚುನಾವಣೆ ಪ್ರಾರಂಭದ ವೇಳೆ ಬರುವ ನಾಯಕನಲ್ಲ. ಕೊರಟಗೆರೆ ಕ್ಷೇತ್ರದ ಜನರ ಮನವಿಗೆ ಪೂರಕವಾಗಿ ಕೆಲಸ ಮಾಡುವ ನಿಮ್ಮೇಲ್ಲರ ಜನಸೇವಕ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಿದ್ದರಬೆಟ್ಟ ಶ್ರೀಮಠದ ಶ್ರೀವೀರಭದ್ರ ಶಿವಚಾರ್ಯ ಸ್ವಾಮೀಜಿ, ತಹಶೀಲ್ದಾರ್ ನಾಹೀದಾ, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷರಾದ ಅರಕೆರೆಶಂಕರ್, ಅಶ್ವತ್ಥ ನಾರಾಯಣ್, ಯುವಧ್ಯಕ್ಷ ವಿನಯಕುಮಾರ್, ಮಾಜಿ ತಾಪಂ ಅಧ್ಯಕ್ಷ ಕೆಂಪರಾಮಯ್ಯ ಸೇರಿದಂತೆ ಇತರರು ಇದ್ದರು.

(Visited 1 times, 1 visits today)