ತುರುವೇಕೆರೆ


ಮುಂಬರುವ ವಿಧಾನ ಸಭಾ ಚುನಾವಣೆಗೆ ಕಾಂಗ್ರೇಸ್ ಪಕ್ಷದ ಬಿ.ಫಾರಂ ಬಯಸಿ ಅರ್ಜಿ ಸಲ್ಲಿಸಿದ್ದು ನಾನು ಪ್ರಬಲ ಆಕಾಂಕ್ಷಿಯಾಗಿದ್ದೇನೆ ಎಂದು ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಎನ್.ಆರ್. ಜಯರಾಮ್ ತಿಳಿಸಿದರು.
ತಾಲೂಕಿನ ಮಾಯಸಂದ್ರ ಗ್ರಾಮದ ತಮ್ಮ ಸ್ವಗೃಹದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿ ಎರಡು ಬಾರಿ ಜಿಲ್ಲಾ ಪಂಚಾಯತ್ ಸದಸ್ಯನಾಗಿ ತಾಲೂಕಿನ ಪ್ರತಿಯೊಂದು ಗ್ರಾಮದ ಜನತೆಯ ವಿಶ್ವಾಸ ಪಡೆದಿರುವ ನಾನು ಮುಂಬರುವ ವಿಧಾನ ಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಉದ್ದೇಶದಿಂದ ಪಕ್ಷದ ಟಕೆಟ್ ಬಯಸಿ ಕೆಪಿಸಿಸಿ ಕಚೇರಿಯಲ್ಲಿ ಅರ್ಜಿ ಸಲ್ಲಿಸಿದ್ದು ನನಗೆ ಟಿಕೆಟ್ ಸಿಗುವ ವಿಶ್ವಾಸವಿದ್ದು, ಪ್ರಭಲ ಆಕಾಂಕ್ಷಿಯಾಗಿದ್ದೇನೆ ಈ ಹಿಂದೆ ತಾಲೂಕಿನಲ್ಲಿ ಮೂರು ಬಾರಿ ವಿಧಾನ ಸಭಾ ಚುನಾವಣೆಗೆ ಪಕ್ಷದ ಟಿಕೆಟ್ ಬಯಸಿ ಅರ್ಜಿ ಸಲ್ಲಿಸಿದ್ದೆ ಆದರೆ ಪಕ್ಷ ತೀರ್ಮಾನಿಸಿದ ಅಭ್ಯರ್ಥಿ ಪರವಾಗಿ ನಿಷ್ಟಾವಂತ ಕಾರ್ಯಕರ್ತನಾಗಿ ಪಕ್ಷದಲ್ಲಿ ದುಡಿದಿದ್ದೇನೆ ಮುನಿಯೂರು ಮತ್ತು ಮಾಯಸಂದ್ರ ಜಿಲ್ಲಾ ಪಂಚಾಯಿತಿ ಕ್ಷೇತ್ರದಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯರಾಗಿ ಚುನಾಯಿತನಾಗಿ ಪಕ್ಷವನ್ನು ತಾಲೂಕಿನಲ್ಲಿ ಸಧೃಢಗೊಳಿಸುವ ನಿಟ್ಟಿನಲ್ಲಿ ಕೆಲಸ ಮಾಡಿದ್ದೇನೆ ಅಲ್ಲದೆ ಕನ್ನಡ ಸಾಹಿತ್ಯ ಪರಿಷತ್ ಹೋಬಳಿ ಘಟಕದ ಅದ್ಯಕ್ಷನಾಗಿ ಹಾಗೂ ತಾಲೂಕು ರೋಟರಿ ಸಂಸ್ಥಾಪಕ ಅದ್ಯಕ್ಷನಾಗಿ ಹಾಗೂ ತಾಲೂಕು ವಿಕಲಾಂಗ ಚೇತನರ ಕ್ಷೇಮಾಭಿವೃದ್ದಿ ಸಂಘದ ಪೋಷಕ ಅದ್ಯಕ್ಷನಾಗಿ ಕೆಲಸ ಮಾಡಿ ತಾಲೂಕು ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಹಲವಾರು ಸಾಮಾಜಿಕ ಹಾಗೂ ಧಾರ್ಮಿಕ ಸೇವಾ ಕರ್ಯಕ್ರಮಗಳಲ್ಲಿ ತೊಡಗಿಸಿಕೊಂಡು ಗುರುತಿಸಿಕೊಂಡಿದ್ದೇನೆ. ಸ್ಥಳೀಯ ಅಭ್ಯರ್ಥಿಯಾದ ನನಗೆ ಮುಂಬರುವ ವಿಧಾನ ಸಭಾ ಚುನಾವಣೆಯ ಟಿಕೆಟ್ ನೀಡಬೇಕು ಎಂದು ಒತ್ತಾಯಿಸಿದರು.
ತಾಲೂಕು ಪಂಚಾಯಿತಿಯ ಮಾಜಿ ಸದಸ್ಯ ಮಹಲಿಂಗಯ್ಯ ಮಾತನಾಡಿದರು.
ಸುದ್ದಿಗೋಷ್ಟಿಯಲ್ಲಿ ಮುಖಂಡರಾದ ಜವರೇಗೌಡ, ನಂಜೇಗೌಡ, ಮಂಜೇಗೌಡ, ಮಹಾಲಿಂಗಪ್ಪ, ಕೋಳಘಟ್ಟ ಶಿವಾನಂದ್, ಎಂ.ಎಂ.ಟಿ.ಸಿ. ರವಿ, ಮಂಜುನಾಥ್, ಚಂದ್ರಶೇಖರ್, ಮೋಹನ್ ಕುಮಾರ್, ಕೆಂಪಯ್ಯ, ಯತೀಶ್, ಜವರಪ್ಪ, ಸತೀಶ್ ಹಾಗೂ ಇತರರು ಇದ್ದರು.

(Visited 6 times, 1 visits today)